‘ಮಹಾನಟಿ’ ಕೀರ್ತಿ ಸುರೇಶ್ ಮದುವೆ..?

0

‘ಮಹಾನಟಿ’ ಖ್ಯಾತಿಯ ಕೀರ್ತಿ ಸುರೇಶ್ ದಕ್ಷಿಣ ಭಾರತದ ಬಹುಬೇಡಿಕೆಯ ನಟಿ. ತೆಲುಗು, ತಮಿಳು, ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸಿರುವ ಕೀರ್ತಿ ಮುಂದೆ ಸಿನಿಮಾ ಮಾಡೋದು ಡೌಟ್. ಈ ಹಿಂದೆ ಕೀರ್ತಿ ಯವರ ಮದುವೆ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ಉದ್ಯಮಿ ಜೊತೆ ಕೀರ್ತಿ ಮದುವೆ ಆಗ್ತಿದ್ದಾರೆ ಅಂತ ಕೂಡ ಹೇಳಲಾಗಿತ್ತು. ಆದರೆ ಕೀರ್ತಿ ಈ ವಿಚಾರವನ್ನು ಅಲ್ಲಗಳೆದಿದ್ದರು. ಆದರೆ ಇದೀಗ ಕೀರ್ತಿ ಮದುವೆಗೆ ರೆಡಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಕೀರ್ತಿ ಸುರೇಶ್ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದ್ರ ಜೊತೆ ರಿಲೇಶನ್ಶಿಪ್ನಲ್ಲಿದ್ದಾರಂತೆ. ಅಷ್ಟೇ ಅಲ್ಲ ಕೀರ್ತಿ ಹಾಗೂ ಅನಿರುದ್ಧ್ ಇದೇ ಈ ವರ್ಷದ ಕೊನೆಯಲ್ಲಿ ಮದುವೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಕೀರ್ತಿ ಹಾಗೂ ಅನಿರುದ್ಧ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮಹೇಶ್ ಬಾಬು ನಟನೆಯ ‘ಸರ್ಕಾರು ವಾಡಿ ಪಾಟ’ ಸಿನಿಮಾದಲ್ಲಿ ನಾಯಕಿಯಾಗಿ ಕೀರ್ತಿ ನಟಿಸುತ್ತಿದ್ದಾರೆ. ಇನ್ನು ದುಬೈನಲ್ಲಿ ಈ ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ನಟ ರಜನಿಕಾಂತ್ ಅವರ ‘ಅಣ್ಣಾತೆ’ ಸಿನಿಮಾದಲ್ಲಿಯೂ ಕೀರ್ತಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ‘ಸಾನಿ ಕಾಯಿಧಮ್’ ಸಿನಿಮಾದಲ್ಲಿಯೂ ಕೀರ್ತಿ ಬಣ್ಣ ಹಚ್ಚುತ್ತಿದ್ದಾರೆ. ಕೀರ್ತಿ ನಟನೆಯ ‘ಗುಡ್ ಲಕ್ ಸಖಿ’ ಸಿನಿಮಾ ರಿಲೀಸ್ಗೆ ರೆಡಿಯಿದೆ. ಇವೆಲ್ಲದರ ಮಧ್ಯೆ ಕೀರ್ತಿ ಸುರೇಶ್ ಗೆ ಮದ್ವೆ ಅಂತೆ ಎಂಬ ಗಾಸಿಪ್ ಕೇಳಿಬರುತ್ತಿದೆ. ಅದೆಷ್ಟೋ ನಟಿಯರು ಮದುವೆ ಆದ್ಮೇಲೆ ಚಿತ್ರರಂಗಕ್ಕೆ ಗುಡ್ ಬಾಯ್ ಹೇಳಿದ್ದುಂಟು. ಕೀರ್ತಿ ಸುರೇಶ್ ಗೆ ದಕ್ಷಿಣ ಭಾರತದಲ್ಲಿ ಹೆಚ್ಚು ಬೇಡಿಕೆಯಿದೆ. ತನ್ನ ಟ್ರೆಡಿಷನಲ್ ಲುಕ್, ಹಾಗೂ ಅತ್ಯುತ್ತಮ ನಟನೆಯಿಂದಲೇ ನೋಡುಗರ ಕಣ್ಮನ ಸೆಳೆಯುವ ಕೀರ್ತಿ, ವಿವಾಹ ಜೀವನಕ್ಕೆ ಕಾಲಿಟ್ಟ ಮೇಲೆ ಚಿತ್ರರಂಗದಿಂದ ದೂರ ಉಳಿದುಬಿಡ್ತಾರಾ?

Spread the love
Leave A Reply

Your email address will not be published.

Flash News