ಯಾರು ಆ ವಿಜಯೇಂದ್ರ..? ಅವರೇನು ದೇವಲೋಕದಿಂದ ಇಳಿದು ಬಂದಿದಾರ..?”

0

ಹಾಸನ: ಸರ್ಕಾರ ಎಸ್ ಐಟಿ ರಚನೆ ಮಾಡಿದ್ದೆ ರಮೇಶ್ ಜಾರಕಿಹೊಳಿ ರಕ್ಷಣೆಗೆ ಎಂದು ಮಾಜಿ ಸಿಎಂ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು. ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಜಂಬೂರು ಗ್ರಾಮದಲ್ಲಿ ವಿಧಾನ ಪರಿಷತ್ ಸದಸ್ಯ ಎಮ್.ಎ.ಗೋಪಾಲಸ್ವಾಮಿ ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು ಸಿಡಿ ಪ್ರಕರಣದಲ್ಲಿ ಮಾಜಿ ಸಚಿವ ರಮೇಶ ಜಾರಿಕಿಹೊಳಿ ವಿಚಾರಣೆ ನಡೆಯುತ್ತಿದ್ದು ಎಸ್‌ಐಟಿ ಬದಲಿಗೆ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸುವಂತೆ ನಾನು ಸದನದಲ್ಲಿ ಒತ್ತಾಯ ಮಾಡಿದ್ದೆ; ಆದರೆ ರಮೇಶ್ ಜಾರಕಿಹೊಳಿ ಅವರನ್ನು ಉಳಿಸಲು ಬಿಜೆಪಿ ಸರ್ಕಾರ ಎಸ್ ಐಟಿ ತನಿಖೆಗೆ ವಹಿಸಿದೆ.
ಇದನ್ನು ರಚನೆ ಮಾಡಿದವರು ಬಿಜೆಪಿ ಸರ್ಕಾರದವರು ರಮೇಶ್ ಜಾರಕಿಹೊಳಿ ಬಂಧನ ಇನ್ನೂ ಏಕೆ ಮಾಡಿಲ್ಲ ಎಂಬುದನ್ನು ಮುಖ್ಯಮಂತ್ರಿ ಹಾಗೂ ಗೃಹಮಂತ್ರಿಯವರನ್ನು ನೀವೇ ಕೇಳಬೇಕು ಎಂದು ಉತ್ತರಿಸಿದರು.
ರಮೇಶ್ ಜಾರಕಿಹೊಳಿ ಸ್ಥಾನದಲ್ಲಿ ಬೇರೆ ಯಾರಾದರೂ ಇದ್ದಿದ್ದರೆ ಏನಾಗುತ್ತಿತ್ತು.?? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ.! ಸರ್ಕಾರ ರಮೇಶ್ ಜಾರಕಿಹೊಳಿ ಪರ ಇರುವುದು ಎಲ್ಲರಿಗೂ ಗೊತ್ತಿದೆ. ರತನ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಮೇಲೆ ಮಾಡಿರುವಂತಹ ಆರೋಪ ನಿರಾಧಾರ ವಾಗಿದೆ ಈ ಬಗ್ಗೆ ದಾಖಲೆಗಳಿದ್ದರೆ ಸ್ಪಷ್ಟಪಡಿಸಲಿ ಎಂದು ಸಮಜಾಯಿಷಿ ನೀಡಿದರು .
ವಿಧಾನಸಭೆ ಹಾಗೂ ಲೋಕಸಭೆ ಮರು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜಯಗಳಿಸಲಿದೆ ಮಸ್ಕಿ ಮತ್ತು ಬಸವಕಲ್ಯಾಣದಲ್ಲಿ ನಾವು ಕಳೆದ ಬಾರಿ ಗೆಲುವು ಸಾಧಿಸಿದ್ದೆವು ಈ ಬಾರಿಯೂ ಉತ್ತಮ ಫಲಿತಾಂಶ ಹೊರಬೀಳಲಿದೆ.
ಲೋಕಸಭೆ ಉಪಚುನಾವಣೆಯಲ್ಲಿಯೂ ಸಹ ಕಾಂಗ್ರೆಸ್ ಅಭ್ಯರ್ಥಿ ಜಯಗಳಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು ಕೆಟ್ಟ ಆಡಳಿತ ನಡೆಸುತ್ತಿದೆ . ಈ ಹಿಂದೆ ರಾಜ್ಯದಲ್ಲಿ ಇಂತಹ ಸರ್ಕಾರ ಬಂದಿರಲಿಲ್ಲ ಎಂದು ಟೀಕಿಸಿದ ಸಿದ್ದರಾಮಯ್ಯ ರಾಜ್ಯದ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದ್ದು 20 ಸಾವಿರ ಕೋಟಿ ಸಾಲ ಪಡೆದು ಸರ್ಕಾರಿ ನೌಕರರಿಗೆ ಸಂಬಳ ಕೊಡುತ್ತಿದ್ದಾರೆ. ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿ ಅಂಚಿನಲ್ಲಿದೆ ಎಂದು ವ್ಯಂಗ್ಯವಾಡಿದರು .
ಈ ಹಿಂದೆ ನಾವು ಜಾರಿಗೆ ತಂದಂತಹ ಯೋಜನೆಗಳನ್ನು ಸಿಎಂ ಯಡಿಯೂರಪ್ಪ ನಿಲ್ಲಿಸಿದ್ದಾರೆ . ಈ ರೀತಿ ದ್ವೇಷ ರಾಜಕಾರಣ ಸರಿಯಲ್ಲ .; ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತಮ್ಮ ಸಚಿವ ಸಂಪುಟದ ಸಚಿವರುಗಳ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿರುವುದು ಸರಿಯಲ್ಲ ಹಿರಿಯರಾದ ಈಶ್ವರಪ್ಪ ಅವರು ಈ ಸಂಬಂಧ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.
ಯಡಿಯೂರಪ್ಪ ಹಾಗೂ ಅವರ ಮಕ್ಕಳ ಸರ್ವಾಧಿಕಾರಿ ಧೋರಣೆ ಬಿಜೆಪಿ ಆಡಳಿತದಲ್ಲಿ ಹೆಚ್ಚಿದೆ ಎಂದು ಆರೋಪಿಸಿದ ಅವರು ಈಶ್ವರಪ್ಪ ಅವರಿಗೆ ಬಂದಂತಹ ಸ್ಥಿತಿ ನನಗೆ ಬಂದಿದ್ದರೆ 05 ನಿಮಿಷ ಕೂಡ ಸಚಿವ ಸ್ಥಾನದಲ್ಲಿ ಇರುತ್ತಿರಲಿಲ್ಲ ನಾನು ಯಾರ ಮುಲಾಜಿಗೂ ಇದುವರೆಗೆ ರಾಜಕೀಯ ಮಾಡಿಲ್ಲ .ಯಾರ ಮುಂದೆ ತಲೆತಗ್ಗಿಸುವ ಪ್ರಶ್ನೆ ಇಲ್ಲ ಎಂದು ಸಿದ್ದರಾಮಯ್ಯ ಕಿಡಿಕಾರಿದರು.
ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ವಿಜಯೇಂದ್ರ ಅವರು ಉಸ್ತುವಾರಿ ವಹಿಸಿಕೊಂಡಿದ್ದು ಇಲ್ಲಿಯೂ ಅವರ ಚಾಣಾಕ್ಷತನ -ವಿಜಯಯಾತ್ರೆ ಮುಂದುವರಿಯಲಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಯಾರ್ರೀ ವಿಜಯೇಂದ್ರ .? ಏನು ದೇವಲೋಕದಿಂದ ಇಳಿದು ಬಂದಿದ್ದಾರ. ಅವರ ಚಾಣಾಕ್ಷತನ ಕೇವಲ ದುಡ್ಡಿನಿಂದ ಅಳೆಯಬಹುದಾಗಿದ್ದು ಹಣ ಹಂಚಿ ಚುನಾವಣೆಯನ್ನು ಗೆದ್ದರೆ ಸಾಲದು..ಆ ಕ್ಷೇತ್ರದಲ್ಲಿ ಒಂದು ಮತಕ್ಕೆ 2-3 ಸಾವಿರ ಹಂಚಲಾಗುತ್ತಿದೆ ಎಂದು ಆರೋಪಿಸಿದ ಸಿದ್ದರಾಮಯ್ಯ 8 ಬಾರಿ ಚುನಾವಣೆ ಎದುರಿಸಿ ನಾನು ಗೆದ್ದಿದ್ದೇನೆ ಎಂದ ಅವರು ವಿಜಯೇಂದ್ರ ಇಲ್ಲಿಯವರೆಗೆ ಒಂದಾದರೂ ಚುನಾವಣೆ ಎದುರಿಸಿ ಗೆದ್ದಿದ್ದಾರ ಎಂದು ಪ್ರಶ್ನಿಸಿದರು.?
ದುಡ್ಡು ಹಂಚುವ ಮೂಲಕ ಚುನಾವಣೆ ನಡೆಸುವುದು ಮಾತ್ರ ಚಾಣಾಕ್ಷತೆಯಲ್ಲ; ದುಡ್ಡುಕೊಟ್ಟು ಯಾರು ಬೇಕಾದರೂ ಗೆಲ್ಲುತ್ತಾರೆ ವಿಧಾನಸಭೆಯಲ್ಲಿ ನಾನು ಯಡಿಯೂರಪ್ಪ ಗೆ ಹೇಳಿದ್ದೇನೆ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಬನ್ನಿ ಎಂದು. ವಿಜಯೇಂದ್ರ ಚಾಣಾಕ್ಷತನ ಇದ್ದಿದ್ದೆ ಆದರೆ ಯಡಿಯೂರಪ್ಪ ಅವರು ಕೆಜೆಪಿ ಪಕ್ಷ ಕಟ್ಟಿದಾಗ ಏಕೆ ಅವರ ಮಗ ಚಾಣಾಕ್ಷತನದಿಂದ ಯಡಿಯೂರಪ್ಪ ಅವರನ್ನು ಗೆಲ್ಲಿಸಲಿಲ್ಲ ಎಂದು ಪ್ರಶ್ನಿಸಿದರು.

Spread the love
Leave A Reply

Your email address will not be published.

Flash News