ಒಡೆದ ಮನೆಯಾಗುತ್ತಿದೆಯಾ ಸಾರಿಗೆ ಕಾರ್ಮಿಕರ ಕೂಟ.?!.ಚಂದ್ರು “ಹಿಟ್ಲರಿಸಂ?!” ಗೆ ಸಂಘಟನೆಯಲ್ಲಿ ಬಿರುಕು…?! ರಾಜೀನಾಮೆಗೆ ಮುಂದಾದ್ರ ಪದಾಧಿಕಾರಿಗಳು..? ಕೂಟದಿಂದ ಒಕ್ಕಲಿಗರ ಸಂಘ ಔಟ್..?!   

0

ಬೆಂಗಳೂರು:“1-ಸಾರಿಗೆ ನೌಕರರ ಕೂಟದ ಅಧ್ಯಕ್ಷ ಚಂದ್ರಶೇಖರ್ (ಚಂದ್ರು) ಸರ್ವಾಧಿಕಾರಿ ಧೋರಣೆಗೆ ಕೂಟ ದಲ್ಲೇ ಅಸಮಾಧಾನ-ಅಸಹನೆ-ಆಕ್ರೋಶ ಭುಗಿಲೇಳುತ್ತಿದೆಯಾ..?”

2-“ಅಹಂ ಬ್ರಹ್ಮಾಸ್ಮಿ ಎನ್ನುವಂತೆ ನಾನೇ ಎಲ್ಲಾ..ನನ್ನನ್ನು ಬಿಟ್ಟೂ ಏನೂ ನಡೆಯಬಾರದೆನ್ನುವ “ಹಿಟ್ಲರಿಸಂ”ಗೆ ಇಷ್ಟು ದಿನ ಸಿದ್ದಾಂತ ಹಾಗು ಸಾರಿಗೆ ನೌಕರ ಮಾನ್ಯತೆ-6ನೇ ವೇತನ ಆಯೋಗದ ಶಿಫಾರಸ್ಸುಗಳ ಅನುಷ್ಠಾನದ   ಉದ್ದೇಶವನ್ನು ಬೆಂಬಲಿಸಿ ಅವರ ಜತೆಗಿದ್ದ ಪದಾಧಿಕಾರಿಗಳೇ ಬಂಡಾಯ ಎದ್ದಿದ್ದಾರಾ..?”

ನಾನೇ ಎಲ್ಲಾ..ನಾನೇಳಿದ್ದೇ ನಡೆಯಬೇಕೆನ್ನುವ ಹಿಟ್ಲರಿಸಂ ಪ್ರದರ್ಶಿಸ್ತಿದ್ದಾರಾ ಕೂಟದ ಚಂದ್ರು
ನಾನೇ ಎಲ್ಲಾ..ನಾನೇಳಿದ್ದೇ ನಡೆಯ ಬೇಕೆನ್ನುವ ಹಿಟ್ಲರಿಸಂ ಪ್ರದರ್ಶಿಸ್ತಿದ್ದಾರಾ ಕೂಟದ ಚಂದ್ರು..!

3-“ಚಂದ್ರು ಸಹವಾಸ ಬೇಡವೇ ಬೇಡ ಎಂದು ಕೂಟದಿಂದ್ಲೇ ಹೊರಬರುವ ನಿರ್ದಾರವನ್ನು ಪದಾಧಿಕಾರಿಗಳು ಮಾಡಿದ್ದಾರೆಯೇ..?”

4-“ರೈತ ಹೋರಾಟಗಳ ಮೂಲಕ ಒಂದಷ್ಟು ಹೆಸರನ್ನು ಸಂಪಾದಿಸಿ ಆ ಗೌರವವನ್ನು ಕಾಪಾಡಿಕೊಂಡು ಬಂದಿದ್ದ ಕೋಡಿಹಳ್ಳಿ ಚಂದ್ರಶೇಖರ್ ಅವರೇ ಕೂಟದಲ್ಲಿ ಆಗುತ್ತಿದೆ ಎನ್ನಲಾಗುತ್ತಿರುವ ಅನಾರೋಗ್ಯಕರ ಬೆಳವಣಿಗೆಗಳಿಗೆ ಬೇಸತ್ತು ಅನ್ಯಮನಸ್ಕರಾಗಿದ್ದಾರಾ..?”

5-“ಕೂಟದಲ್ಲೇ ಉಳಿದ್ರೆ ಸಮಾಜದಲ್ಲಿ ಉಳಿಸಿ-ಬೆಳೆಸಿಕೊಂಡು ಬಂದಿರುವ ಪ್ರತಿಷ್ಟೆಯೂ ಮಣ್ಣುಪಾಲಾದೀತೇನೋ ಎಂಬ ಆತಂಕಕ್ಕೆ ಸಿಲುಕಿದ್ದಾರಾ..?”

ಇಂತದೊಂದಿಷ್ಟು ಪ್ರಶ್ನೆಗಳನ್ನು ಹುಟ್ಟಾಕಿದೆ ಸಾರಿಗೆ ನೌಕರರ ಕೂಟದಲ್ಲಿ ನಡೆಯುತ್ತಿದೆ ಎನ್ನಲಾದ ಬೆಳವಣಿಗೆಗಳು..ಇದು ನಿಜವೇ ಆಗಿದ್ದರೆ ಕೂಟದ ಅಸ್ಥಿತ್ವವೇ ಭವಿಷ್ಯದಲ್ಲಿ ಪ್ರಶ್ನಾರ್ಹವಾಗುವುದರಲ್ಲಿ ಅನುಮಾನವೇ ಇಲ್ಲ.

ಸಾರಿಗೆ ನೌಕರರ ಹೋರಾಟಗಳ ಹಿನ್ನಲೆಯಲ್ಲಿ ಅತ್ಯಂತ ಕಡಿಮೆ ಅವದಿಯಲ್ಲೇ  ಸಾರಿಗೆ ನೌಕರರ ಕೂಟದಷ್ಟು ದಿಢೀರ್ ಬೆಳಕಿಗೆ ಬಂದ. ಕಾರ್ಮಿಕರಿಂದ ಮನ್ನಣೆ ಪಡೆದ,ಅಪಾರ ಬೆಂಬಲ ಪಡೆದ ಮತ್ತೊಂದು ಸಂಘಟನೆ ಇರಲಿಕ್ಕಿಲ್ಲವೇನೋ..ಇದಕ್ಕೆ ಕಾರಣವೂ ಇತ್ತು ಬಿಡಿ..ಸರ್ಕಾರಿ ನೌಕರರ ಮಾನ್ಯತೆಯ ಅಂಶವೇ ಹೋರಾಟದ  ಪ್ರಧಾನ ಅಂಶವಾಗಿದ್ದೇ 1 ಲಕ್ಷದ 30 ಸಾವಿರ ಕಾರ್ಮಿಕರ ಮನಸಲ್ಲಿ ಕೂಟದ ಬಗ್ಗೆ ನಂಬಿಕೆ ಮೊಳೆಯಲು ಕಾರಣವಾಯ್ತು(ಆದ್ರೆ ದುರಂತ ನೋಡಿ,ಯಾವ್ “ಸರ್ಕಾರಿ ನೌಕರ ಮಾನ್ಯತೆ” ಸಿಗ್ಬೇಕೆನ್ನುವ ಉದ್ದೇಶದಲ್ಲಿ ಹೋರಾಟ ಶುರುವಾಯ್ತೋ ಆ ಉದ್ದೇಶ ಸತ್ತು ಹೋಗಿದೆ.ಸರ್ಕಾರ ಕೂಡ ಖುಲ್ಲಂ ಆಗೊಲ್ಲ ಎಂದುಬಿಟ್ಟಿದೆ).

ಕೂಟಕ್ಕಾಗಿ ಹಗಲಿರುಳು ಶ್ರಮಿಸಿದ ಆನಂದ್ ಇವತ್ತು ಕಾಲಕಸ.
ಕೂಟಕ್ಕಾಗಿ ಹಗಲಿರುಳು ಶ್ರಮಿಸಿದ ಆನಂದ್ ಇವತ್ತು ಕಾಲಕಸ.?!

ಅನೇಕ ದಶಕಗಳಿಂದ ಸಾರಿಗೆ ಕಾರ್ಮಿಕರ ವಲಯದಲ್ಲಿ ಹತ್ತಾರು ನೌಕರರ ಯೂನಿಯನ್-ಫೆಡರೇಷನ್ಸ್ ಇದ್ದಾಗ್ಯೂ ಯಾವತ್ತೂ ಪ್ರಸ್ತಾಪವೇ ಆಗದಿದ್ದ,ಬಲವಾಗಿ ಪ್ರತಿಪಾದನೆಯಾಗದಿದ್ದ “ಸರ್ಕಾರಿ ನೌಕರ ಮಾನ್ಯತೆ”ಸಂಗತಿಗೆ ಕೂಟ ಒತ್ತು ಕೊಟ್ಟಿದ್ದು ಸಹಜವಾಗೇ ಕಾರ್ಮಿಕರ ಮನಸಲ್ಲಿ ಹೊಸ ಆಸೆ ಹುಟ್ಟಿಸಿರಬಹುದೇನೋ..ಹಾಗಾಗಿನೇ ಅದನ್ನೊಂದು ಜನಾಂದೋಲನಗೊಳಿಸಿರಲಿಕ್ಕೂ ಸಾಧ್ಯವಿದೆ.. ಅದು ಸರ್ಕಾರವನ್ನೇ ನಡುಗಿಸುವಷ್ಟರ ಮಟ್ಟಿಗಿನ ಮುಷ್ಕರಕ್ಕೂ ಕಾರಣವಾದ ಮೇಲಂತೂ ಕೂಟದ ಬಗ್ಗೆ ಕಾರ್ಮಿಕರು ಪಾಸಿಟಿವ್ ಆಗಿ ಆಲೋಚಿಸ್ಲಿಕ್ಕೆ ಕಾರಣವಾಯಿತೆನ್ನುವುದು ಬಹುತೇಕ ಕಾರ್ಮಿಕರ ಮಾತು-ವಾದ-ನಿಲುವು-ಅಭಿಮತ.

ಆರಂಭದಲ್ಲಿ ಚಂದ್ರು ಅಂಡ್ ಟೀಮ್ ಕಾರ್ಮಿಕರಲ್ಲಿ ಮೂಡಿಸಿದ ಭರವಸೆ-ನಿರೀಕ್ಷೆಗಳು ಅಪಾರ. ಅಸಂಘಟಿತಗೊಂಡಿದ್ದವರನ್ನೆಲ್ಲಾ ಒಗ್ಗೂಡಿಸಿದ ಹೆಗ್ಗಳಿಕೆಯೂ ಇದಕ್ಕಿದೆ.ಆದ್ರೆ ಅಲ್ಪನಿಗೆ ಐಶ್ವರ್ಯ ಬಂದ್ರೆ ಮಧ್ಯರಾತ್ರಿಯಲ್ಲಿ ಕೊಡೆ ಹಿಡಿದ ಎಂಬಂತೆ..ಚಂದ್ರು ತನಗೆ ಸಿಕ್ಕ ಅಪಾರ ಜನಪ್ರಿಯತೆ ಹಾಗೂ ಮನ್ನಣೆಯಿಂದ ತಾನೇನು..ತನ್ನ ಜವಾಬ್ದಾರಿ ಏನು..ತನ್ನಿಂದ ಕಾರ್ಮಿಕರು ಏನೆಲ್ಲಾ ನಿರೀಕ್ಷಿಸುತ್ತಿದ್ದಾರೆ ನ್ನುವುದನ್ನೇ ಮರೆತುಬಿಟ್ಟರೆನ್ನುವುದು ಕೂಟದಲ್ಲಿರುವ ಅವರ ಕೆಲ ಆತ್ಮೀಯರೇ ಹೇಳ್ತಾರೆ.

ಇವತ್ತು ಎಲ್ಲಾ ಪದಾಧಿಕಾರಿಗಳಿದ್ದರೆ ಕೂಟ ಮತ್ತು ನಾನು ಎನ್ನುವ ಸತ್ಯವನ್ನೇ ಮರೆತು ಚಂದ್ರು ವರ್ತಿಸುತ್ತಿದ್ದಾ ರೆನ್ನುವ ಮಾತುಗಳಿವೆ.ತಾನೇಳಿದ್ದೇ ನಡೆಯಬೇಕು..ತಾನೇಳಿದ್ದನ್ನೇ ಉಳಿದವರು ಕೇಳಬೇಕು.. ಮಾದ್ಯಮ ಗಳಿಗೆ ತನ್ನನ್ನು ಬಿಟ್ಟು ಬೇರೆಯವ್ರು ಹೇಳಿಕೆ ಕೊಡಬಾರದು..ತಾನೇ ಬುದ್ಧಿವಂತ-ತಿಳಿದವ ಎನ್ನುವ ಮಟ್ಟದವರೆಗೆ ಮಾತನಾಡುವ ಚಂದ್ರು ಧೋರಣೆ ಎಲ್ಲರನ್ನೂ ಕೆಂಡಾಮಂಡಲಗೊಳಿ ಸಿದೆಯಂತೆ. ಹಾಗಾಗಿನೇ ಬಹುತೇಕರು ಚಂದ್ರು ಹಾಗೂ ಕೂಟ ತೊರೆಯುವ ನಿರ್ದಾರಕ್ಕೆ ಬಂದಿದ್ದಾರೆನ್ನುವ ಸುದ್ದಿ ಹರಿದಾಡುತ್ತಿದೆ.

ಕೂಟದಲ್ಲಿರುವವರ ಪೈಕಿ   ಶೇಕಡಾ 50 ರಷ್ಟು ಪದಾಧಿಕಾರಿಗಳು ಚಂದ್ರುವಿನ ಸರ್ವಾಧಿಕಾರಿ ಧೋರಣೆ ಕಾರಣಕ್ಕಾಗಿ ಸಂಘಟನೆಯಿಂದ ದೂರವಾಗುತ್ತಿದ್ದಾರಂತೆ.ಚಂದ್ರುವಿನಂಥ ದುರಂಹಕಾರಿ ಬೆನ್ನಿಗೆ ನಿಂತ್ರೆ ನಾಳೆ ದಿನ ನಮ್ಮನ್ನು ಯಾರೂ ಮಾತನಾಡಿಸದಂತಾಗುತ್ತೆ.ಕಾರ್ಮಿಕರ ನಡುವೆ ನಿಷ್ಟೂರ ಕಟ್ಟಿಕೊಳ್ಳ ಬೇಕಾಗ್ತದೆ ಎಂದು ಅನೇಕರು ಮಾತನಾಡಿಕೊಳ್ಳುತ್ತಿದ್ದಾರಂತೆ.ಹಾಗಾಗಿನೇ ವಿಶ್ವಾಸದಲ್ಲೇ ಹೊರಬರುವ ಚಿಂತನೆಯಲ್ಲಿದ್ದಾರಂತೆ.

ಕೂಟ ಹುಟ್ಟುಹಾಕಿದ್ದ ಭರವಸೆ-ನಿರೀಕ್ಷೆಗಳ ಕಾರಣಕ್ಕೆ ಕೂಟಕ್ಕೆ ಬೆಂಬಲ ಕೊಟ್ಟಷ್ಟೇ ಅಲ್ಲ ಅದರೊಂದಿ ಗೆ ವಿಲೀನವಾಗಿದ್ದ ಕಾರ್ಮಿಕರ ಒಕ್ಕಲಿಗರ ಸಂಘ ಕೂಡ  ಹೊರಬರುತ್ತಿದೆ ಎನ್ನುವ ಮಾತುಗಳಿವೆ. ಒಕ್ಕಲಿಗರ ಸಂಘ ಹೊರಬರುತ್ತಿರುವುದು ಚಂದ್ರು ಹಾಗು ಕೂಟಕ್ಕೆ ದೊಡ್ಡ ಪೆಟ್ಟು ಎಂದೇ ಹೇಳಲಾಗುತ್ತಿದೆ.

ಇದಿಷ್ಟೇ ಅಲ್ಲ ಚಂದ್ರಶೇಖರ್ ನಡೆಸುತ್ತಿರುವ ಹಣಕಾಸಿನ ವ್ಯವಹಾರದ ಬಗ್ಗೆಯೂ ಕೂಟದ ಕೆಲ ಸದಸ್ಯರಿಂದ್ಲೇ ಆಕ್ಷೇಪ ವ್ಯಕ್ತವಾಗಿದೆಯಂತೆ.ಸದಸ್ಯತ್ವ ಶುಲ್ಕ ಸಂಗ್ರಹ ರೂಪದಲ್ಲಿ ಕಲೆಕ್ಟ್ ಆಗಿದೆ ಎನ್ನಲಾಗುತ್ತಿರುವ  ಸುಮಾರು 50 ಲಕ್ಷದಷ್ಟು ಹಣದ ಬಗ್ಗೆ ಸರಿಯಾದ ಲೆಕ್ಕವನ್ನೂ ಚಂದ್ರು ಕೊಡುತ್ತಿಲ್ಲ ಎನ್ನಲಾಗಿದೆ.ಅದಷ್ಟೇ ಅಲ್ಲ,ಇಷ್ಟೊಂದು ಬೃಹತ್ ಮೊತ್ತ ಕಲೆಕ್ಟ್ ಆಗಿದ್ದರೂ ಅದನ್ನು ಕಾರ್ಮಿಕ ಇಲಾಖೆ ಗಮನಕ್ಕೂ ತಂದಿಲ್ಲ ಎನ್ನಲಾಗ್ತಿದೆ.ಕಾರ್ಮಿಕ ಕಾಯ್ದೆಯ ಸ್ಪಷ್ಟ ಉಲ್ಲಂಘನೆ ಎನ್ನಲಾಗುತ್ತಿರುವ ಈ ಬೆಳವಣಿಗೆ ಬೆನ್ನಲ್ಲಿ ಐಟಿ ರೇಡ್ ಕೂಡ ಮಾಡಬಹುದೆನ್ನುವ ಮಾತುಗಳಿವೆ.

ಕೂಟದಲ್ಲಿನ ಅಹಿತಕರ ಬೆಳವಣಿಗೆಗಳಿಗೆ ಬೇಸತ್ತಿದ್ದಾರಾ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್
ಕೂಟದಲ್ಲಿನ ಅಹಿತಕರ ಬೆಳವಣಿಗೆಗಳಿಗೆ ಬೇಸತ್ತಿದ್ದಾರಾ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್..!!!

ಇದೆಲ್ಲಕ್ಕಿಂತ ಹೆಚ್ಚಾಗಿ ಕೂಟದಲ್ಲಿ ನಡೆಯುತ್ತಿರುವ ಈ ಅಹಿತಕರ ಅನಾರೋಗ್ಯಕರ ಬೆಳವಣಿಗೆಗಳು ವೈಯುಕ್ತಿಕವಾಗಿ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರಿಗೆ ತೀವ್ರ ಬೇಸರ ತರಿಸಿದೆ ಎನ್ನುವ ಮಾತುಗಳಿವೆ.ಕೂಟದಲ್ಲಿನ ಬೆಳವಣಿಗೆಗಳು ಹಾಗೂ ಚಂದ್ರು ಅವರ ಸರ್ವಾಧಿಕಾರಿ ಧೋರಣೆ, ರೈತ ಸಂಘದ ಹೋರಾಟದ ಮುಖೇನ ಸಮಾಜದಲ್ಲಿ ಸಂಪಾದಿಸಿರುವ ಹೆಸರು-ಗೌರವ-ಪ್ರತಿಷ್ಟೆಗೆ ಧಕ್ಕೆ ತರುತ್ತಾ.? ಸಾರಿಗೆ ಕೂಟಕ್ಕೆ ಗೌರವಾಧ್ಯಕ್ಷನಾಗಿ ಮುಂದುವರುದ್ರೆ ಆ ಗೌರವವೂ ಮಣ್ಣು ಪಾಲಾಗುತ್ತಾ ಎನ್ನುವ ಆತಂಕದಲ್ಲಿ ಕೋಡಿಹಳ್ಳಿ ಅವರಿದ್ದಾರೆನ್ನುವ ಮಾತುಗಳಿವೆ.

ಕೋಡಿಹಳ್ಳಿ ಅವರನ್ನು ನಾಮಾಕವಸ್ಥೆಗೆ ಗೌರವಾಧ್ಯಕ್ಷರನ್ನಾಗಿಸಿ ದರ್ಬಾರ್ ಮಾಡ್ತಿರೋದು  ಚಂದ್ರು ಎನ್ನುವ ಗಂಭೀರ ಆಪಾದನೆಗಳಿವೆ.ಕೋಡಿಹಳ್ಳಿ ಅವರಿಗೆ ಯಾವ ಮಾಹಿತಿಯನ್ನೂ ನೀಡುತ್ತಿಲ್ಲ.ಕೂಟದ ಒಗ್ಗಟ್ಟನ್ನು ಒಡೆಯುವ ಕೆಲಸವನ್ನು ಖುದ್ದು ಮಾಡುತ್ತಿರುವ ಚಂದ್ರು ಧೋರಣೆಯಿಂದ ಬೇಸತ್ತು  ಕೂಟದಿಂದ ಹೊರಹೋಗಲು ಸಿದ್ಧರಾಗುತ್ತಿದ್ದಾರೆನ್ನಲಾಗಿರುವ ಪದಾಧಿಕಾರಿಗಳ ಹಾದಿಯನ್ನೇ ಭವಿಷ್ಯದಲ್ಲಿ ಕೋಡಿಹಳ್ಳಿ ಅವರೂ ಹಿಡಿದು ಬಿಡ್ತಾರಾ ಎನ್ನುವ ಮಟ್ಟಿಗೆ ಮಾತನಾಡಿಕೊಳ್ಳುವಂಥ ಸನ್ನಿವೇಶವನ್ನು ಸೃಷ್ಟಿಸಿರುವ ಗಂಭೀರ ಆಪಾದನೆಗೂ ಚಂದ್ರು ಗುರಿಯಾಗಿದ್ದಾರೆ.

ತಮಗಾಗುತ್ತಿರುವ ಅನ್ಯಾಯದ ವಿರುದ್ಧ ತೊಡೆ ತಟ್ಟಿ,ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಧ್ವನಿಯಾದರೆನ್ನುವ ಕಾರಣಕ್ಕೆ ಕೂಟವನ್ನು ಬೆಂಬಲಿಸಿ ಅದನ್ನೊಂದು ಬೃಹತ್ ಸಂಘಟನೆಯನ್ನಾಗಿಸೊಕ್ಕೆ ಕೈಲಾದಷ್ಟು ಹಣ ನೀಡಿ 50 ಲಕ್ಷದಷ್ಟು ಹಿಡಿಗಂಟಾಗುವಂತೆ ಮಾಡಿದ ಸಾರಿಗೆ ಕಾರ್ಮಿಕರ ಹಿತಾಸಕ್ತಿಯ ಸಾಕ್ಷಿಪ್ರಜ್ಞೆಯಾಗಬೇಕಿದ್ದ ಕೂಟ ಇಷ್ಟು ಬೇಗ ಅವಸಾನದ ಅಂಚಿಗೆ ತಲುಪುವಂಥ ಸಾಧ್ಯತೆಗಳನ್ನು ಹುಟ್ಟಾಕಿರುವುದು..ಇದಕ್ಕೆಲ್ಲಾ ಮುಖಂಡ ಚಂದ್ರು ಅವರೇ ಕಾರಣ ಎನ್ನುವಂಥ ಆಪಾದನೆ ಕೇಳಿಬರುತ್ತಿರುವುದು ಎರಡು ಕೂಡ ದುರಂತ..ವಿಪರ್ಯಾಸ..ವಿಷಾದಕರ.

Spread the love
Leave A Reply

Your email address will not be published.

Flash News