ಕೆ.ಮಂಜು ಅಂದ್ರೆ ಯಾರಂತಾನೇ ಗೊತ್ತಿಲ್ಲ: ಸುಧಾಕರ್

0

ಬೆಂಗಳೂರು: ಕೆ. ಮಂಜು ಅಂದರೆ ಯಾರೂ ಅಂತಾನೆ ನನಗೆ ಗೊತ್ತಿಲ್ಲ ಎಂದು ಆರೋಗ್ಯ ಸಚಿವ ಸುಧಾಕರ್ ತಿರುಗೇಟು ನೀಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಸುಧಾಕರ್, ಎಲ್ಲವನ್ನೂ ನಾನೇ ಮಾಡಲು ಸಾಧ್ಯವಿಲ್ಲ. ಸರ್ಕಾರದ ಮಾರ್ಗಸೂಚಿ ಸರಿಯಾಗಿ ಪಾಲನೆಯಾಗುತ್ತಿಲ್ಲ. ಬಸ್ ಗಳಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪ್ರಯಾಣಿಸುತ್ತಿದ್ದಾರೆ ಎಂದು ಹೇಳಿದರು. ಈ ವೇಳೆ ಸುಧಾಕರ್ ಅವರಿಂದ ಆರೋಗ್ಯ ಖಾತೆಯನ್ನು ಬದಲಾಯಿಸಿ ಎಂಬ ನಿರ್ಮಾಪಕ ಕೆ.ಮಂಜು ಹೇಳಿಕೆಗೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ, ಕೆ. ಮಂಜು ಅಂದ್ರೆ ಯಾರೂ ಅಂತಾನೆ ನನಗೆ ಗೊತ್ತಿಲ್ಲ. ನಾನು ಯಾರ ಟೀಕೆಗಳಿಗೂ ತಲೆ ಕೆಡಿಸಿಕೊಳ್ಳೋದಿಲ್ಲ. ಆರೋಗ್ಯ ಸಚಿವನಾಗಿ ಏನು ಮಾಡಬೇಕೋ ಅದನ್ನು ಮಾಡುತ್ತಿದ್ದೇನೆ. ನಮಗೆ ಜನರ ರಕ್ಷಣೆ ಬಹಳ ಮುಖ್ಯ. ಟೀಕೆಗಳಿಗೆ ತಲೆಕೆಡಿಕೊಳ್ಳುವುದಿಲ್ಲ ಎಂದರು. ಸಿಎಂ ಚಿತ್ರರಂಗದ ಮನವಿಗೆ ಸ್ಪಂದಿಸಿದ್ದಾರೆ. ಇದು ತಪ್ಪು ಅಂತಾನೂ ಹೇಳೋದಿಲ್ಲ. ಆದರೆ, ಈಗ ಕಠಿಣ ಕ್ರಮ ಕೈಗೊಳ್ಳದೇ ಇದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಸಮಸ್ಯೆ ಎದುರಿಸಬೇಕಾಗುತ್ತದೆ. ಜಿಮ್ ಮಾಲೀಕರು, ಶಿಕ್ಷಣ ಸಂಸ್ಥೆಗಳಿಂದ ಒತ್ತಡ ಬರುತ್ತಿದೆ. ನಮಗೆ ಜನರ ಜೀವ, ಜೀವನೋಪಾಯ ಎರಡೂ ಮುಖ್ಯ ಎಂದು ತಿಳಿಸಿದರು. ಯಾರನ್ನೋ ಮೆಚ್ಚಿಸಲು ತೀರ್ಮಾನ ಬದಲಿಸಲು ಸಾಧ್ಯವಿಲ್ಲ. ನಮಗೆ ರಾಜ್ಯದ ಜನರ ಆರೋಗ್ಯ ಮುಖ್ಯ. ಕೆಲವರು ನನ್ನನ್ನ ಟೀಕೆ ಮಾಡುತ್ತಿದ್ದರೂ ಬೇಜಾರಿಲ್ಲ. ರಾಜ್ಯದ ಜನರ ಆರೋಗ್ಯ ಕಾಪಾಡೋದು ಮೊದಲ ಆದ್ಯತೆ. ಕೆಲವರಿಗೆ ರಿಯಾಯಿತಿ ಕೊಟ್ಟಿದ್ದಾರೆ. ಅದರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದು ಹೇಳಿದರು.

Spread the love
Leave A Reply

Your email address will not be published.

Flash News