ಈ ಸಲ ಪಕ್ಕಾ ಕಪ್ ನಮ್ದೇ ಅಂತಿದೆ ಆರ್.ಸಿಬಿ ಟೀಮ್…

0

ಈ ಸಲ ಕಪ್​ ನಮ್ದೇ, ಈ ಸಲ ಕಪ್​ ನಮ್ದೇ, ಪ್ರತಿ ಐಪಿಎಲ್​ ಸೀಸನ್ ಶುರುವಾದಾಗಲೂ, ಆರ್​ಸಿಬಿ ಅಭಿಮಾನಿಗಳ ಸ್ಲೋಗನ್ ಇದು. ಬೆಂಗಳೂರು ತಂಡ ಅಂದ್ರೆ ನಮ್ಮ ಉಸಿರು, ನಮ್ಮ ಹೆಮ್ಮೆ ಅಂತಾನೇ ಭಾವಿಸುವ ಆರ್​ಸಿಬಿ ಫ್ಯಾನ್ಸ್​ ತಂಡಕ್ಕೆ ಜೈಕಾರ ಹಾಕಿ, ಹಾಡು ಹಾಡಿ, ಡ್ಯಾನ್ಸ್​ ಮಾಡಿ ಜೋಶ್​ ತುಂಬ್ತಾರೆ. ಆದ್ರೆ ಕೊನೆಯಲ್ಲಿ ಅಭಿಮಾನಿಗಳಿಗೆ ಮಾತ್ರ ನಿರಾಸೆಯಾಗುತ್ತದೆ. 2013ರಿಂದ ವಿರಾಟ್​ ಕೊಹ್ಲಿಯೇ ತಂಡವನ್ನ ಮುನ್ನಡೆಸ್ತಿದ್ದಾರೆ. ತಂಡದಲ್ಲಿ ಸೂಪರ್​ಸ್ಟಾರ್​ ಬ್ಯಾಟ್ಸ್​ಮ್ಯಾನ್​ಗಳಿದ್ದರೂ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಸಾಧನೆ ಮಾತ್ರ ಅಷ್ಟಕಷ್ಟೆ. ಇಷ್ಟೇಲ್ಲಾ ಆದ್ರೂ ಅಭಿಮಾನಿಗಳ ಅಭಿಮಾನ ಮಾತ್ರ ಸ್ವಲ್ಪವೂ ಕಡಿಮೆ ಆಗಿಲ್ಲ. ಆದ್ರೆ ಈ ಬಾರಿ ಅಭಿಮಾನಿಗಳ ಆಸೆ ಈಡೇರುವ ಕಾಲ ಸನ್ನಿಹಿತವಾಗಿದೆ. ಅಭಿಮಾನಿಗಳು ಮತ್ತಷ್ಟು ಜೋರಾಗಿ ಈ ಸಲ ಕಪ್​ ನಮ್ದೇ ಅಂತಾ, ಕೂಗಿ ಹೇಳುವಂತೆ ಮಾಡೋಕೆ ವಿರಾಟ್​ ಪಡೆ ಸಜ್ಜಾಗಿದೆ. ಸತತ 13 ವರ್ಷಗಳಿಂದ ಕಪ್​ ಗೆಲ್ಲೋಕೆ ವಿಫಲರಾಗಿರೋ ಆರ್​ಸಿಬಿ, ಈ ಬಾರಿ ಶತಾಯ ಗತಾಯ ಕಪ್​ ಗೆಲ್ಲೋಕೆ ತಯಾರಿ ನಡೆಸಿಕೊಂಡಿದೆ. ಈಗಾಗಲೇ ಐಪಿಎಲ್​ ಮಿನಿ ಹರಾಜಿನಲ್ಲಿ ಸ್ಟಾರ್​ ಆಟಗಾರರ ಜೊತೆ ಯುವ ಆಟಗಾರರನ್ನ ಖರೀದಿಸಿರುವ ರೆಡ್​ ಆರ್ಮಿ ಕಠಿಣ ಅಭ್ಯಾಸದಲ್ಲಿ ನಿರತವಾಗಿದೆ. ಇಷ್ಟೇ ಅಲ್ಲ ಫೈನಲ್​ಗೆ ಮೂರು ಬಾರಿ ಎಂಟ್ರಿ ಕೊಟ್ಟರೂ ಕಪ್​ ಗೆಲ್ಲಲಾಗದ ನತದೃಷ್ಟ ತಂಡ ಎಂಬ ಹಣೆಪಟ್ಟಿಯನ್ನ ಕಳಚೋಕೆ ಕ್ಯಾಪ್ಟನ್​ ಕೊಹ್ಲಿ ನಿರ್ಧರಿಸಿದ್ದಾರೆ. ಹಾಗಾಗಿಯೇ ಈ ಬಾರಿ ಬಲಿಷ್ಟ ತಂಡವನ್ನ ಆರ್​ಸಿಬಿ ಮ್ಯಾನೇಜ್​ಮೆಂಟ್​ ಕಟ್ಟಿದೆ. ಈ ಸಧೃಡ ತಂಡದ ಜೊತೆ ಗೇಮ್​ ಪ್ಲ್ಯಾನ್​ ಸ್ಟ್ರಾಟರ್ಜಿಯೊಂದಿಗೆ ಕಪ್​ ಗೆಲ್ಲೋ ನಿರೀಕ್ಷೆಯಲ್ಲೂ ಇದೆ ಆರ್​ಸಿಬಿ ತಂಡದ ಬಹುತೇಕ ವೈಫಲ್ಯಕ್ಕೆ ಕಾರಣವೇ ಓಪನರ್ಸ್​. ಇದಕ್ಕೆ ಬೆಸ್ಟ್​ ಎಕ್ಸಾಂಪಲ್​ 2011 ಹಾಗೂ 2016ರಲ್ಲಿ ನಡೆದ ಐಪಿಎಲ್​ ಟೂರ್ನಿ. ಉತ್ತಮ ಆರಂಭ ಪಡೆದಿದ್ದ ಬೆಂಗಳೂರು ತಂಡ, ಫೈನಲ್​ಗೆ ಎಂಟ್ರಿಕೊಟ್ಟಿತ್ತು, ಈಗ ಅದೇ ಸ್ಟ್ರಾಟಜಿಯೊಂದಿಗೆ ಆರ್​ಸಿಬಿ, ಐಪಿಎಲ್​ ಸೀಸನ್​ 14ರಲ್ಲಿ ಕಣಕ್ಕಿಳಿಯೋ ಪ್ಲಾನ್​ ರೂಪಿಸಿಕೊಂಡಿದೆ. ಈ ಬಾರಿಯ ಹೊಸ ಜೋಡಿ​ ರನ್​ ಪ್ರವಾಹವನ್ನೇ ಸೃಷ್ಟಿಸೋ ವಿಶ್ವಾಸದಲ್ಲಿದೆ. ಹಾಗೇ 3ನೇ ಕ್ರಮಾಂಕದಲ್ಲಿ ಎಬಿ ಡಿವಿಲಿಯರ್ಸ್​ರಿಂದ, ಆರ್​ಸಿಬಿ ಟಾಪ್​ ಆರ್ಡರ್​ಗೆ ಹೊಸ ಕಳೆ ಬರಲಿದೆ  ಏನೇ ಆಗ್ಲಿ ಆರ್​ಸಿಬಿ ಮ್ಯಾನೇಜ್ಮೆಂಟ್​ ಪರ್ಫೆಕ್ಟ್​ ಮ್ಯಾಚ್​ ವಿನ್ನಿಂಗ್​ ಕಾಂಬಿನೇಷನ್​ ಕಣಕ್ಕಿಳಿಸಬೇಕಿದೆ. ಜೊತೆಗೆ ವಿರಾಟ್​ ಕೊಹ್ಲಿ ಕ್ಯಾಪ್ಟನ್ಸಿ, ಸ್ಟ್ರಾಟರ್ಜಿ, ಗೇಮ್​ಪ್ಲ್ಯಾನ್​ ವರ್ಕೌಟ್​ ಆಗಿಬಿಟ್ರೆ, ಅಭಿಮಾನಿಗಳ ಬಹು ವರ್ಷಗಳ ಕನಸು, ನನಸಾಗೋದ್ರಲ್ಲಿ ಅನುಮಾನವೇ ಇಲ್ಲ.

Spread the love
Leave A Reply

Your email address will not be published.

Flash News