ಏಪ್ರಿಲ್ 7 ರಂದು ‘ಪುಷ್ಪ’ ಚಿತ್ರದ ಫಸ್ಟ್ ಲುಕ್ ರಿವೀಲ್..

0

ನಿರ್ದೇಶಕ ಸುಕುಮಾರ್​ ಆ್ಯಕ್ಷನ್​ ಕಟ್​ ಹೇಳ್ತಿರುವ ಪ್ಯಾನ್​ ಇಂಡಿಯಾ ‘ಪುಷ್ಪ’ ಸಿನಿಮಾ ಆಗೊಮ್ಮೆ ಈಗೊಮ್ಮೆ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಇಂಟ್ರೆಸ್ಟಿಂಗ್​ ವಿಚಾರಗಳಿಂದಲೇ ಸುದ್ದಿಯಾಗ್ತಿರುವ ‘ಪುಷ್ಪ’, ಸದ್ಯ ಹೊಸ ಅಪ್ಡೇಟ್​ ನೀಡಿದೆ. ಇದೇ ಏಪ್ರಿಲ್​ 7ರಂದು ‘ಪುಷ್ಪ’ ಸಿನಿಮಾದ ಪಾತ್ರವೊಂದರ ಫಸ್ಟ್​ ಲುಕ್​ ಲಾಂಚ್​ ಆಗಲಿದೆ. ಅಂತಿಂಥ ಪಾತ್ರವಲ್ಲ, ದಟ್ಟಾರಣ್ಯದಲ್ಲಿ ಅಟ್ಟಹಾಸ ಮೆರೆಯುತ್ತಿರುವ ಪುಷ್ಪರಾಜನ ಪಾತ್ರ. ಹೌದು.. ಸಿನಿಮಾದ ಟೈಟಲ್​ ಹೇಳುವಂತೆ, ‘ಪುಷ್ಪ’ ಅಲಿಯಾಸ್ ಪುಷ್ಪರಾಜನ ಪಾತ್ರದಲ್ಲಿ ಸ್ಟೈಲಿಶ್​ ಸ್ಟಾರ್​ ಅಲ್ಲು ಅರ್ಜುನ್ ನಟಿಸ್ತಿದ್ದಾರೆ. ಈಗಾಗಲೇ ಅಭಿಮಾನಿಗಳಿಗೆ ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್​ ಹೇಗೆ ಕಾಣಿಸಿಕೊಳ್ತಿದ್ದಾರೆ ಅನ್ನೋದು ಅವರ ಹೇರ್​ಸ್ಟೈಲ್​ನಿಂದ ಅಲ್ಪ ಸ್ವಲ್ಪ ಹಿಂಟ್​ ಸಿಕ್ಕಿದೆ. ಇನ್ನು ದಟ್ಟಾರಣ್ಯದಲ್ಲಿ ‘ಪುಷ್ಪ’ ಸಿನಿಮಾದ ಹೆಚ್ಚಿನ ಭಾಗದ ಶೂಟಿಂಗ್​ ನಡೆಯುತ್ತಿದ್ದು, ಅಲ್ಲು ಅರ್ಜುನ್​ ಈ ಲುಕ್​​ಗೂ ಅಲ್ಲಿಗೂ ಏನು ಕನೆಕ್ಷನ್​ ಅನ್ನೋದೇ ಸದ್ಯ ಇರುವ ಕುತೂಹಲ. ಈ ಕುತೂಹಲಕ್ಕೆ ನಿರ್ದೇಶಕ ಸುಕುಮಾರ್​ ಹಾಗೂ ‘ಪುಷ್ಪ’ ಟೀಂ ಏಪ್ರಿಲ್​ 7ರಂದು ಅಂತ್ಯ ಹಾಡಲಿದೆ. ಏಪ್ರಿಲ್​ 8ರಂದು ನಟ ಅಲ್ಲು ಅರ್ಜುನ್​ ಹುಟ್ಟುಹಬ್ಬ. ಈ ಪ್ರಯುಕ್ತ ಏಪ್ರಿಲ್​ 7ರ ಸಂಜೆ 6.12ಕ್ಕೆ ಅಲ್ಲು ಅರ್ಜುನ್​ ಪುಷ್ಪರಾಜ್​ ಪಾತ್ರದ ಫಸ್ಟ್​ ಲುಕ್​ ರಿವೀಲ್​​ ಆಗಲಿದೆ. ಪುಷ್ಪನಿಗೆ ನಾಯಕಿಯಾಗಿ ನ್ಯಾಷನಲ್​ ಕ್ರಷ್​, ಕನ್ನಡತಿ ರಶ್ಮಿಕಾ ಮಂದಣ್ಣ ನಟಿಸ್ತಿದ್ದು, ನಾಯಕನಿಗೆ ಸೆಡ್ಡು ಹೊಡೆಯುವ ವಿಲನ್​ ಆಗಿ ಡಾಲಿ ಧನಂಜಯ ಕಾಣಿಸಿಕೊಳ್ತಿದ್ದಾರೆ. ಇನ್ನುಳಿದಂತೆ ಬಹು ತಾರಾಗಣ ‘ಪುಷ್ಪ’ ಸಿನಿಮಾದಲ್ಲಿ ಇರಲಿದೆ ಅಂತ ಈಗಾಗಲೇ ಚಿತ್ರತಂಡ ಬಹಿರಂಗ ಪಡಿಸಿತ್ತು.

Spread the love
Leave A Reply

Your email address will not be published.

Flash News