ಮೃತ ಮಗನ ಫೋಟೋ ಹಿಡಿದು ‘ಯುವರತ್ನ ವೀಕ್ಷಿಸಿದ ಪೋಷಕರು..!

0

ಪುನೀತ್ ರಾಜ್‍ ಕುಮಾರ್ ಅವರ ಅಪ್ಪಟ ಅಭಿಮಾನಿ ಮಗನನ್ನು ಕಳೆದುಕೊಂಡು ದುಃಖದ ಮಡುವಿನಲ್ಲಿದ್ದ ಕುಟುಂಬ  ಅವನ ಫೋಟೋ ಇಟ್ಟುಕೊಂಡು, ಆತನ ಹೆಸರಲ್ಲಿ ಟಿಕೆಟ್ ಪಡೆದು ಸಿನಿಮಾ ನೋಡುವ ಮೂಲಕ ಗಮನ ಸೆಳೆದಿದೆ. ಮೈಸೂರಿನ ಮುರಳಿಧರ್ ಅವರ ಮಗ ಹರಿಕೃಷ್ಣನ್ ನಾಲ್ಕು ತಿಂಗಳ ಹಿಂದೆಯಷ್ಟೇ ಅಕಾಲಿಕ ಸಾವಗೀಡಾದನು. ಹರಿಕೃಷ್ಣನ್ ಪುನೀತ್ ರಾಜ್‍ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿದ್ದನಂತೆ. ಅಲ್ಲದೆ ಯುವರತ್ನ ಸಿನಿಮಾ ನೋಡಬೇಕೆಂಬ ಮಹದಾಸೆ ಇಟ್ಟುಕೊಂಡಿದ್ದನಂತೆ.ಆದರೆ ದುರ್ವಿಧಿ ಈಜಲು ಹೋಗಿ ನೀರಲ್ಲಿ ಮುಳುಗಿ ಹರಿಕೃಷ್ಣನ್ ಸಾವನ್ನಪ್ಪಿದ್ದನು. ಮಗನ ಆಸೆ ಈಡೇರಿಸುವ ಉದ್ದೇಶದಿಂದ ಮೈಸೂರಿನ ಡಿಆರ್ ಸಿ ಮಲ್ಟಿಪ್ಲೆಕ್ಸ್ ನಲ್ಲಿ ತಂದೆ, ತಾಯಿ, ಯುವಕನ ಅಣ್ಣ ಸಿನಿಮಾ ವೀಕ್ಷಿಸಿದ್ದಾರೆ. ಸಾವನ್ನಪ್ಪಿದ ಮಗನಿಗೂ ಒಂದು ಟಿಕೆಟ್ ತೆಗೆದುಕೊಂಡು, ಆ ಸೀಟ್ ನಲ್ಲಿ ಮಗನ ಫೋಟೋ ಇಟ್ಟುಕೊಂಡು ಚಲನಚಿತ್ರ ವೀಕ್ಷಿಸಿದರು.  ಈ ಕುರಿತು ಟ್ವೀಟ್  ಪುನೀತ್ ರಾಜ್‍ಕುಮಾರ್  ‘ಮೈಸೂರಿನ ಮುರಳಿಧರ್ ಹಾಗೂ ಕುಟುಂಬದವರು ಅವರ ದಿವಂಗತ ಪುತ್ರ ಹರಿಕೃಷ್ಣನ್ ಫೋಟೋ ಜೊತೆಗೆ ಯುವರತ್ನ ಸಿನಿಮಾ ನೋಡಿರುವ ದೃಶ್ಯಗಳನ್ನು ನೋಡಿ ನನ್ನ ಮನಸು ಭಾರವಾಯಿತು. ಬಾಲಕ ಹರಿಕೃಷ್ಣನ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.  ಮಗನನ್ನು ಕಳೆದುಕೊಂಡು ದುಖಃದ ಮಡುವಿನಲ್ಲಿರುವ ತಂದೆ, ಮಗನ ಫೋಟೋ ಇಟ್ಕೊಂಡು ಥಿಯೇಟರ್ ಗೆ ಹೋಗಿ ಆ ಫೋಟೋಗೂ ಒಂದು ಟಿಕೆಟ್ ತಗೊಂಡು ಸಿನಿಮಾ ನೋಡೋದು ನಿಜವಾಗಿಯೂ ಮನ ಕಲಕುವ ಸಂಗತಿ ಅಲ್ವೇ..?

Spread the love
Leave A Reply

Your email address will not be published.

Flash News