123 ನೇ ಸಿನಿಮಾದ ಎರಡನೇ ಹಂತದ ಚಿತ್ರೀಕರಣದಲ್ಲಿ ಶಿವಣ್ಣ

0

ಡಾ. ಶಿವರಾಜ್‌ಕುಮಾರ್ ತಮ್ಮ 123ನೇ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಇನ್ನು ಹೆಸರಿಡದ ಚಿತ್ರಕ್ಕೆ ತಾತ್ತಾಲಿಕವಾಗಿ ಶಿವಪ್ಪ ಎಂದು ಶೀರ್ಷಿಕೆ ಕೊಡಲಾಗಿದೆ. ಆಕ್ಷನ್-ಪ್ಯಾಕ್ಡ್ ಕಮರ್ಷಿಯಲ್ ಎಂಟರ್ಟೈನರ್ ಚಿತ್ರಕ್ಕೆ ನಿರ್ದೇಶಕ ವಿಜಯ್ ಮಿಲ್ಟನ್ ಆಯಕ್ಷನ್ ಕಟ್ ಹೇಳುತ್ತಿದ್ದಾರೆ. 35 ದಿನಗಳ ಶೂಟಿಂಗ್ ಪೂರ್ಣಗೊಳಿಸಿರುವ ಚಿತ್ರತಂಡ ಇದೀಗ ಎರಡನೇ ವೇಳಾಪಟ್ಟಿಯನ್ನು ಪ್ರಾರಂಭಿಸಿದ್ದು ಮುಂದಿನ 45 ದಿನಗಳಲ್ಲಿ ಚಿತ್ರವನ್ನು ಪೂರ್ಣಗೊಳಿಸಲು ಯೋಜಿಸಿದೆ. ಚಿತ್ರ ತಂಡವು ಬಹಿರಂಗಪಡಿಸಿದ ಫಿಲ್ಮ್ ಸೆಟ್‌ಗಳ ಒಂದೆರಡು ಚಿತ್ರಗಳಲ್ಲಿ ದಿಯಾ ನಾಯಕ ಪೃಥ್ವಿ ಅಂಬಾರ್ ಅವರೊಂದಿಗೆ ಸೆಂಚುರಿ ಸ್ಟಾರ್ ಸಂಭಾಷಣೆ ನೋಡೆಸುತ್ತಿರುವ ನೋಡಬಹುದು. ಮೊದಲ 10 ದಿನಗಳಲ್ಲಿ ನಿರ್ದೇಶಕರು ಟಾಕಿ ಭಾಗದ ಚಿತ್ರೀಕರಣ ಮಾಡಲಿದ್ದು ಇದು ಏಪ್ರಿಲ್ 10ರವರೆಗೆ ನಡೆಯಲಿದೆ. ಇದರ ನಂತರ ಶಿವರಾಜ್‌ಕುಮಾರ್ ಮತ್ತು ಧನಂಜಯ್ ನಡುವೆ ಬೃಹತ್ ಕ್ಲೈಮ್ಯಾಕ್ಸ್ ಶೂಟ್ ನಡೆಯಲಿದ್ದು, ಇದರ ಸಿದ್ಧತೆ ಪ್ರಸ್ತುತ ನಡೆಯುತ್ತಿದೆ. ಟಗರು ನಂತರ ಇವರಿಬ್ಬರು ಒಟ್ಟಿಗೆ ನಟಿಸುತ್ತಿರುವ ಎರಡನೇ ಚಿತ್ರ. ಇದರ ನಂತರ ನಾವು ನಾಯಕನ ಪರಿಚಯದ ಫೈಟ್ ಗಳನ್ನು ಚಿತ್ರೀಕರಿಸಲು ಯೋಜಿಸಿದ್ದೇವೆ ಎಂದು ನಿರ್ಮಾಪಕ ಕೃಷ್ಣ ಸಾರ್ಥಕ್ ಹೇಳಿದ್ದಾರೆ. ಶಿವಣ್ಣನ 123ನೇ ಚಿತ್ರದಲ್ಲಿ ದಕ್ಷಿಣ ಭಾರತದ ನಾಯಕಿ ಅಂಜಲಿ ಮತ್ತು ಮಹಿಳಾ ಪಾತ್ರಗಳಲ್ಲಿ ಯಾಶೋ ಶಿವಕುಮಾರ್, ಹಿರಿಯ ನಟರಾದ ಶಶಿಕುಮಾರ್ ಮತ್ತು ಉಮಾಶ್ರೀ ಕಾಣಿಸಿಕೊಂಡಿದ್ದಾರೆ. ಅನೂಪ್ ಸೀಲಿನ್ ಸಂಗೀತ ನೀಡುತ್ತಿದ್ದಾರೆ.

Spread the love
Leave A Reply

Your email address will not be published.

Flash News