ಕೂಡಲೇ ಸಾರಿಗೆ ನೌಕರರ ‌ಸಮಸ್ಯೆಯನ್ನು ಬಗೆಹರಿಸಿ: ವಿಪಕ್ಷ ನಾಯಕ ಸಿದ್ದರಾಮಯ್ಯ

0

ಕರ್ನಾಟಕ ಸರ್ಕಾರದ ವಿರುದ್ಧ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಕೋರಿ ಕೆಎಸ್​ಆರ್​ಟಿಸಿ, ಬಿಎಂಟಿಸಿ ಸೇರಿದಂತೆ ಇತರ ನಾಲ್ಕು ಸಾರಿಗೆ ನಿಗಮದ ನೌಕರರು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದ್ದಾರೆ. ಅದೆಷ್ಟೋ ಕಡೆಗಳಲ್ಲಿ ಪ್ರಯಾಣಿಕರು ಕಾಲ್ನಡಿಗೆಯಲ್ಲಿಯೇ ಪ್ರಯಾಣ ಕೈಗೊಳ್ಳುವಂತಾಗಿದೆ. ಇನ್ನು ಕೆಲವೆಡೆ ಪುಟ್ಟ ಕಂದಮ್ಮನನ್ನು ಹೊತ್ತ ಮಹಿಳೆಯರು, ಆಸ್ಪತ್ರೆಗೆಂದು ಹೊರಟಿದ್ದ ವೃದ್ಧರು, ಬೆಳಿಗ್ಗೆಯೇ ಕೆಲಸಕ್ಕೆ ಹಾಜರಾಗಬೇಕಿದ್ದ ಉದ್ಯೋಗಿಗಳು ಬಸ್​ಗಳಿಲ್ಲದೇ ಪರದಾಡುವ ಪರಿಸ್ಥಿತಿ ಎದುರಾಗಿತ್ತು. ಕೆಲವು ಜಿಲ್ಲೆಗಳಲ್ಲಿ ಮುಷ್ಕರದ ಬಿಸಿ ಅತಿಯಾಗಿಯೇ ತಟ್ಟಿತ್ತು.

ಈ ಕುರಿತಾಗಿ ಸಾರಿಗೆ ನೌಕರರ ಮುಷ್ಕರದಿಂದ ಸಾರ್ವಜನಿಕರಿಗೆ ಕಷ್ಟವಾಗಿದೆ. ಕೂಡಲೇ ಸಾರಿಗೆ ನೌಕರರ ‌ಸಮಸ್ಯೆಯನ್ನ ಬಗೆ ಹರಿಸುವ ಕೆಲಸ ಸರಕಾರ‌ ಮಾಡಬೇಕಾಗಿದೆ ಎಂದು ವಿಪಕ್ಷನಾಯಕ ಸಿದ್ದರಾಮಯ್ಯ ಜಿಲ್ಲೆಯ ಬಸವಕಲ್ಯಾಣ ಪಟ್ಟಣದಲ್ಲಿ ಹೇಳಿಕೆ ನೀಡಿದ್ದಾರೆ.

ಯಾವುದೇ ಸರಕಾರವಾದರು ಕೂಡಾ ಅವರ ಸಮಸ್ಯೆ ‌ಸರಿಪರಿಸುವ ಕೆಲಸ ಮಾಡಬೇಕು. ಖಾಸಗಿ ಬಸ್ ಓಡಿಸುತ್ತೇವೆ ಎನ್ನುವುದಾಗಲೀ ಅಥವಾ ಎಸ್ಮಾ ಜಾರಿಮಾಡುತ್ತೇವೆ ಎನ್ನುವುದು ಬೆದರಿಕೆಯ ತಂತ್ರ ಸರಕಾರ ಹಾಗೆ ಮಾಡಬಾರದು. ಸಾರಿಗೆ ನೌಕರರ ನ್ಯಾಯುತ ಬೇಡಿಕೆ ಈಡೇರಿಸಬೇಕು ಎಂದು ಅವರು ತಿಳಿಸಿದ್ದಾರೆ.

Spread the love
Leave A Reply

Your email address will not be published.

Flash News