ಇದೇ 9 ರಿಂದ ‘ಕೊಡೆಮುರುಗ’ನ ಫುಲ್ ಮೀಲ್ಸ್ ಕಾಮಿಡಿ ಶುರು

0

ಸಿನಿಮಾ ಎಂದಾಕ್ಷಣ ಎಲ್ಲರ ತಲೆಗೆ ಬರೋದು ಸುಂದರ ಅತಿ ಸುಂದರ ಎನಿಸುವ ಫೇಸ್ ಕಟ್, ಕಣ್ಣು ಕುಕ್ಕುವ ಲೋಕೇಷನ್, ಹೊಡಿ ಬಡಿ ಫೈಟ್ ಹೀಗೆ ಅನೇಕಾನೇಕ ಆಲೋಚನೆಗಳು. ಇದೆಲ್ಲ ಇಲ್ಲದೆ ಇದ್ರು ಸಿನಿಮಾ ಓಡಿಸಬೇಕು ಅಂತ ಪಣತಿಟ್ಟವರು ಯುವ ನಿರ್ದೇಶಕ ಸುಬ್ರಮಣ್ಯ. ಆದ್ರೆ ಅದೇಗೆ. ಸಿಂಪಲ್ ಕಂಟೆಂಟ್ ಓರಿಯೆಂಟೆಡ್ ಮೂವಿ ಕೊಟ್ರೆ ಜನ ಆತ್ಮತೃಪ್ತಿಯಾದಷ್ಟು ಖುಷಿಯಲ್ಲಿ ನೋಡ್ತಾರೆ. ಇದನ್ನೇ ಬಂಡವಾಳವನ್ನಾಗಿಸಿಕೊಂಡ ಸುಬ್ರಮಣ್ಯ ಪ್ರಸಾದ್ ರೆಡಿ ಮಾಡಿದ್ದು ‘ಕೊಡೆಮುರುಗ’ ಸಿನಿಮಾವನ್ನ. ಟೈಟಲ್ ಎಷ್ಟು ಡಿಫ್ರೆಂಟ್ ಇದೆಯೋ ಸಿನಿಮಾ ಕೂಡ ಅಷ್ಟೇ ಡಿಫ್ರೆಂಟ್ ಇದೆ. ಕಿರುತೆರೆ ಪ್ರಿಯರಿಗೆ ನೆನಪಿರದೆ ಇರದು. ಅಗ್ನಿಸಾಕ್ಷಿ ಎಂಬ ಮೆಗಾ ಧಾರಾವಾಹಿ. ಅದ್ರಲ್ಲಿ ಮುರುಗ ಅನ್ನೋ ವಿಲನ್ ಯಾರಿಗೆ ಗೊತ್ತಿಲ್ಲ ಹೇಳಿ. ಆ‌ಮುರುಗ ವಿಲನ್ ಗಷ್ಟೇ ಮ್ಯಾಚ್ ಆಗ್ತಾರೆ ಹೀರೋಗಲ್ಲ.
ಆದ್ರೆ ಅವ್ರನ್ನೇ ಹೀರೋ ಮಾಡ್ತೀನಿ ಅಂತ ಪಣತೊಟ್ಟವರು ಸುಬ್ರಮಣ್ಯ ಪ್ರಸಾದ್. ಎಸ್..ಇವ್ರೆ ಹೀರೋ ಅಂದಾಗ ಅದೆಷ್ಟೋ ಜನ ಗೇಲಿ ಮಾಡಿದ್ರಂತೆ. ಕಥೆ ಹೇಳಿದಾಗ ಸುಮ್ಮನಾದವರು ಟ್ರೇಲರ್ ನೋಡಿ ವಾವ್ ಅಂದಿದ್ರಂತೆ.
ಸಿನಿಮಾದಲ್ಲೊಂದು ಸಿನಿಮಾ ಇರುವ ಕಥೆ ಈ ಕೊಡೆಮುರುಗ. ನಿರ್ದೇಶನದ ಜೊತೆ ಜೊತೆಗೆ ಕಥೆ-ಚಿತ್ರಕಥೆ-ಸಾಹಿತ್ಯ ರಚಿಸಿ ನಾಯಕ ನಟನಾಗಿಯೂ ಸುಬ್ರಮಣ್ಯ ಪ್ರಸಾದ್ ಮಿಂಚಿದ್ದಾರೆ. ಇಬ್ಬರು ಹೀರೋಗಳಿದ್ದು, ಮುನಿಕೃಷ್ಣ ಕೂಡ ಹೀರೋ ಆಗಿದ್ದಾರೆ. ಪಲ್ಲವಿ ಗೌಡ ಇಬ್ಬರ ನಾಯಕಿಯಾಗಿದ್ದಾರೆ. ಮಮ್ಮಿ ಚಿತ್ರದ ನಿರ್ಮಾಪಕ ಕೆ ರವಿಕುಮಾರ್ ಅವರೇ ಈ ಸಿನಿಮಾಗೂ ಬಂಡವಾಳ ಹೂಡಿದ್ದಾರೆ. ಅದ್ದೂರಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಡಿಫ್ರೆಂಟ್ ಕೊಡೆಮುರುಗ ಸಿನಿಮಾ ಇದೇ ತಿಂಗಳ 9ರಂದು ತೆರೆಗೆ ಬರಲಿದೆ.
ಟೈಟಲ್, ಪೋಸ್ಟರ್, ಟ್ರೇಲರ್, ಹಾಡುಗಳಿಂದಲೇ ಓ ಇದು ಪಕ್ಕಾ ಕಾಮಿಡಿ ಸಿನಿಮಾ. ಪಂಚಿಂಗ್ ಡೈಲಾಗ್ ಮೂಲಕವೂ ಎಲ್ಲರ ಮನಗೆದ್ದಿದೆ. ಮುರುಗ ಖ್ಯಾತಿ ಮುನಿಕೃಷ್ಣ, ಪಲ್ಲವಿ ಗೌಡ, ಕುರಿ ಪ್ರತಾಪ್ ಸೇರಿದಂತೆ ಹಲವು ಪ್ರತಿಭೆಗಳು ತಾರಾಬಳಗದಲ್ಲಿದ್ದಾರೆ.

Spread the love
Leave A Reply

Your email address will not be published.

Flash News