IPL 2021 ಆರ್.ಸಿ.ಬಿ ತಂಡದ ಭವಿಷ್ಯ ಹೇಳಿದ ಗೌತಮ್ ಗಂಭೀರ್

0

14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು ಇದೇ ತಿಂಗಳ 9ರಂದು ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಲಿವೆ.

ಕಳೆದ ಬಾರಿಯ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯ ದುಬೈ ಇಂಟರ್‌ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಿತು. ಐಪಿಎಲ್ ಇತಿಹಾಸದಲ್ಲಿಯೇ ಅದೇ ಮೊದಲ ಬಾರಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಫೈನಲ್ ಪ್ರವೇಶಿಸಿತ್ತು. ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಗೆಲ್ಲಲು 157 ರನ್‌ಗಳ ಗುರಿ ನೀಡಿತ್ತು.
ಕಳೆದ 13 ಆವೃತ್ತಿಗಳಿಂದ ಐಪಿಎಲ್‌ನಲ್ಲಿ ಟ್ರೋಫಿಯ ಬರವನ್ನು ಎದುರಿಸುತ್ತಿರುವ ಪ್ರಮುಖ ತಂಡ ಆರ್‌ಸಿಬಿ. ಸಾಕಷ್ಟು ಬಲಿಷ್ಠ ಆಟಗಾರರನ್ನು ಹೊಂದಿದ ಹೊರತಾಗಿಯೂ ಆರ್‌ಸಿಬಿ ಚಾಂಪಿಯನ್ ಪಟ್ಟಕ್ಕೇರುವಲ್ಲಿ ವಿಫಲವಾಗಿದೆ. ಈ ಬಾರಿ ಮತ್ತೊಮ್ಮೆ ಕೊಹ್ಲಿ ಪಡೆ ಅದೃಷ್ಟ ಪರೀಕ್ಷೆಗೆ ಇಳಿದಿದೆ. ಆದರೆ ಟೂರ್ನಿಯ ಆರಂಭಕ್ಕೂ ಮುನ್ನ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಮುಂಬರುವ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಭವಿಷ್ಯವನ್ನು ಊಹಿಸಿದ್ದಾರೆ. ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿ ಮುಂಬರುವ ಐಪಿಎಲ್‌ನಲ್ಲಿ ಅಗ್ರ 4 ತಂಡಗಳಲ್ಲಿ ಸ್ಥಾನವನ್ನು ಪಡೆದುಕೊಳ್ಳಲಿದೆ ಎಂದು ಗೌತಮ್ ಗಂಭೀರ್ ತಮ್ಮ ಊಹೆಯನ್ನು ಹೇಳಿಕೊಂಡಿದ್ದಾರೆ. ಈ ಮೂಲಕ ಆರ್‌ಸಿಬಿ ಪ್ಲೇಆಫ್ ಹಂತಕ್ಕೇರುವ ಬಗ್ಗೆ ಗಂಭೀರ್ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಕಳೆದ ಬಾರಿಯ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ತಂಡ ನಾಲ್ಕನೇ ಸ್ಥಾನವನ್ನು ಪಡೆದು ಪ್ಲೇಆಫ್ ಹಂತದಿಂದ ಟೂರ್ನಿಯಿಂದ ಹೊರಬಿದ್ದಿತ್ತು.
ಗೆಲ್ಲುವ ಉತ್ಸಾಹದಲ್ಲಿ ಬೆಂಗಳೂರು ಮೂಲದ ಫ್ರಾಂಚೈಸಿ ಇದೆ. ಈ ಬಾರಿಯ ಐಪಿಎಲ್‌ಗಾಗಿ ಆರ್‌ಸಿಬಿ ತಂಡ ಕೆಲ ಬದಲಾವಣೆಗಳನ್ನು ಮಾಡಿಕೊಂಡಿದೆ. ಪ್ರಮುಖವಾಗಿ ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಿದೆ. ಜೊತೆಗೆ ಡೇನಿಯಮ್ ಸ್ಯಾಮ್ಸ್, ನ್ಯೂಜಿಲೆಂಡ್‌ನ ಕೈಲ್ ಜೇಮಿಸನ್ ಈ ಬಾರಿ ಆರ್‌ಸಿಬಿಯನ್ನು ಮತ್ತಷ್ಟು ಬಲಿಷ್ಠಗೊಳಿಸಲಿದ್ದಾರೆ. ಜೊತೆಗೆ ನ್ಯೂಜಿಲೆಂಡ್‌ನ ಫಿನ್ ಅಲೆನ್, ಭಾರತದ ಯುವ ಬ್ಯಾಟ್ಸ್‌ಮನ್‌ ರಜತ್ ಪಾಟಿದಾರ್, ಮೊಹಮ್ಮದ್ ಅಜರುದ್ದೀನ್ ಬಗ್ಗೆಯೂ ಹೆಚ್ಚಿನ ನಿರೀಕ್ಷೆಗಳಿವೆ.

ಆರ್‌ಸಿಬಿ ಸಂಪೂರ್ಣ ತಂಡ: ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್, ದೇವದತ್ ಪಡಿಕ್ಕಲ್, ಯುಜುವೇಂದ್ರ ಚಾಹಲ್, ಮೊಹಮ್ಮದ್ ಸಿರಾಜ್, ಕೇನ್ ರಿಚರ್ಡ್ಸನ್, ವಾಷಿಂಗ್ಟನ್ ಸುಂದರ್, ಪವನ್ ದೇಶಪಾಂಡೆ, ಫಿನ್ ಅಲೆನ್, ಶಹಬಾಜ್ ಅಹಮದ್, ನವದೀಪ್ ಸೈನಿ, ಆಯಡಂ ಝಂಪಾ, ಕೈಲ್ ಜೇಮಿಸನ್, ಗ್ಲೆನ್ ಮ್ಯಾಕ್ಸ್‌ವೆಲ್, ರಜತ್ ಪಾಟಿದಾರ್, ಸಚಿನ್ ಬೇಬಿ, ಮೊಹಮ್ಮದ್ ಅಜರುದ್ದೀನ್, ಡೇನಿಯಲ್ ಕ್ರಿಶ್ಚಿಯನ್, ಕೆ.ಎಸ್.ಭರತ್, ಸುಯಶ್ ಪ್ರಭುದೇಸಾಯಿ, ಡೇನಿಯಲ್ ಸ್ಯಾಮ್ಸ್, ಹರ್ಷಲ್ ಪಟೇಲ್.

Spread the love
Leave A Reply

Your email address will not be published.

Flash News