ಅಲ್ಲು ಅರ್ಜುನ್​ ಜನ್ಮ ದಿನಕ್ಕೆ ಫ್ಯಾನ್ಸ್ ಗಳಿಂದ ಸಿಕ್ತು ಮರೆಯಲಾರದ ಗಿಫ್ಟ್​

0

ಅಲ್ಲು ಅರ್ಜುನ್​ಗೆ ಇಂದು ಜನ್ಮದಿನದ ಸಂಭ್ರಮ. ಸ್ಟಾರ್​ ನಟನ ಜನ್ಮದಿನಕ್ಕೆ ಸಾಕಷ್ಟು ಸೆಲೆಬ್ರಿಟಿಗಳು ವಿಶ್​ ಮಾಡಿದ್ದಾರೆ. ನಟಿ ರಶ್ಮಿಕಾ ಮಂದಣ್ಣ, ಕಾಜಲ್​ ಅಗರ್​ವಾಲ್​ ಸೇರಿ ಅನೇಕರು ಶುಭಾಶಯ ತಿಳಿಸಿದ್ದಾರೆ. ಅಲ್ಲು ಅರ್ಜುನ್​ ಜನ್ಮದಿನಕ್ಕೆ ಅಭಿಮಾನಿಗಳಂತೂ ಶುಭಾಶಯಗಳ ಸುರಿಮಳೆಯನ್ನೇ ಸುರಿಸಿದ್ದಾರೆ. #HBDAlluArjun ಎನ್ನುವ ಹ್ಯಾಶ್​ಟ್ಯಾಗ್​ ಅಡಿಯಲ್ಲಿ ಸಾಲು ಸಾಲು ಟ್ವೀಟ್​ ಮಾಡುತ್ತಿದ್ದಾರೆ. ಪರಿಣಾಮ ಈ ಹ್ಯಾಶ್​ಟ್ಯಾಗ್​ ಟ್ರೆಂಡಿಗ್​ನಲ್ಲಿ ಬಂದಿದೆ. ಅಲ್ಲು ಅರ್ಜುನ್​ ಜನ್ಮದಿನದ ಹಿನ್ನೆಲೆಯಲ್ಲಿ ಅವರ ಫ್ಯಾನ್ಸ್​ ಮನೆ ಎದುರು ನೆರೆದಿದ್ದರು. ಗೇಟ್​ ಬಳಿ ಬಂದು ಅಲ್ಲು ಅರ್ಜುನ್​ ಅಭಿಮಾನಿಗಳನ್ನು ಭೇಟಿಮಾಡಿದ್ದಾರೆ. ಸದ್ಯ, ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಇನ್ನು, ಅಭಿಮಾನಿಗಳಿಂದ ಅಲ್ಲು ಅರ್ಜುನ್​ಗೆ ವಿಶೇಷ ಗಿಫ್ಟ್​ ಒಂದು ದೊರೆತಿದೆ. ಅನೇಕ ಸ್ಟಾರ್​ಗಳು ಗಿಡ ನೆಟ್ಟು ಪರಿಸರ ಉಳಿಸಿ ಎಂದು ಕರೆ ನೀಡಿದ್ದಾರೆ. ಇದಕ್ಕೆ ಅಲ್ಲು ಅರ್ಜುನ್​ ಕೂಡ ಹೊರತಾಗಿಲ್ಲ. ಹೀಗಾಗಿ, ಅವರಿಗೆ ಅಭಿಮಾನಿಗಳು ಗಿಡವನ್ನು ಗಿಫ್ಟ್​ ಆಗಿ ನೀಡಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

Spread the love
Leave A Reply

Your email address will not be published.

Flash News