ಮೇಡ್ ಇನ್ ಇಂಡಿಯಾ ನ್ಯೂ BMW 6 ಸೀರೀಸ್ ಕಾರು ಬಿಡುಗಡೆ!

0

ನವದೆಹಲಿ: ನ್ಯೂ BMW 6 ಸೀರೀಸ್ ಭಾರತದಲ್ಲಿ ಬಿಡುಗಡೆಯಾಗಿದೆ.ಸ್ಥಳೀಯವಾಗಿ BMW ಗ್ರೂಪ್ ಪ್ಲಾಂಟ್ ಚೆನ್ನೈನಲ್ಲಿ ಉತ್ಪಾದನೆಯಾದ ಈ ಕಾರು ಒಂದು ಪೆಟ್ರೋಲ್  ಹಾಗೂ ಎರಡು ಡೀಸೆಲ್ ವಿರಿಯೆಂಟ್‌ನಲ್ಲಿ ಲಭ್ಯವಿದೆ. ಪೆಟ್ರೋಲ್ ಕಾರು BMW 630iM ಸ್ಪೋರ್ಟ್ ಹಾಗೂ ಡೀಸೆಲ್ ವಿರಿಯೆಂಟ್‌ಗಳಾದ BMW 630d M ಸ್ಪೋರ್ಟ್ ಮತ್ತು BMW 620D ಲಕ್ಷುರಿ ಲೈನ್ ಕಾರು ಬಿಡುಗಡೆಯಾಗಿದೆ.
ಎಕ್ಸಿಕ್ಯೂಟಿವ್ ಸೆಡಾನ್ ಸೆಗ್ಮೆಂಟ್‍ನಲ್ಲಿ ತನ್ನದೇ ಮಾನದಂಡ ರೂಪಿಸಿದ ನಂತರ ನ್ಯೂ BMW 6 ಸೀರೀಸ್ ಈ ಸರ್ವೋಚ್ಛ ಗುಣವನ್ನು ಈಗ ಹೊಸ ಎತ್ತರಗಳಿಗೆ ಕೊಂಡೊಯ್ಯುತ್ತಿದೆ.ಅನನ್ಯ ವಿನ್ಯಾಸ, ಕಣ್ಸೆಳೆಯುವ ಉಪಸ್ಥಿತಿ ಮತ್ತು ಹೊರಗಡೆಯ BMW ಸ್ಪೋರ್ಟಿನೆಸ್ ಈ ವರ್ಗದ ಅತ್ಯುತ್ತಮ ಲಕ್ಷುರಿ ಮತ್ತು ಟ್ರಾವೆಲ್ ಅನುಭವ ತನ್ನ ಸ್ಥಾನವನ್ನು ಹಲವು ಪಟ್ಟು ಹೆಚ್ಚಿಸಿದೆ.ಎಂಜಿನ್‍ಗಳ ಹರವು ಮತ್ತು ಅತ್ಯಾಧುನಿಕ ಆವಿಷ್ಕಾರಗಳ ಅಭಿವೃದ್ಧಿಯಿಂದ ಚಾಲನೆ ಮತ್ತು ದಕ್ಷತೆಯನ್ನು ಹೆಚ್ಚಿಸಲಾಗಿದೆ.
ನ್ಯೂBMW 6 ಸೀರೀಸ್ ಐಷಾರಾಮವನ್ನು ಮರು ರೂಪಿಸುತ್ತದೆ ಮತ್ತು ಎಕ್ಸಿಕ್ಯೂಟಿವ್ ಕ್ಲಾಸ್ ವಿಭಾಗಕ್ಕೆ ನಿಜಕ್ಕೂ ವಿಶಿಷ್ಟ ಆಯಾಮ ಸೇರ್ಪಡೆ ಮಾಡುತ್ತದೆ.ಇದಕ್ಕೆ ಕ್ರಾಸ್‍ಓವರ್ ಮಾಡುವ ಪ್ರಾಯೋಗಿಕತೆ ಇದ್ದು ಇದು ಸ್ಪೋಟ್ರ್ಸ್‍ಕಾರಿನ ಡೈನಮಿಕ್ಸ್ ಮತ್ತು ಫಾಸ್ಟ್‍ಬ್ಯಾಕ್ ಮತ್ತು ಸೆಡಾನ್‍ನ ಲಕ್ಷುರಿಯ ಫಾಸ್ಟ್‍ಬ್ಯಾಕ್‍ನ ಸಿಲ್ಹೌಟ್ ಇದೆ. BMW 6 ಸೀರೀಸ್‍ನ ವ್ಯಕ್ತಿತ್ವ ಗುಂಪಿನಿಂದ ಪ್ರತ್ಯೇಕವಾಗಿ ಇರಿಸುತ್ತದೆ ಮತ್ತು ಅದರ ದೀರ್ಘಾವಧಿ ಯಶಸ್ಸಿಗೆ ಅದೇ ಕಾರಣವಾಗಿದೆ.ಇದು ಲಕ್ಷುರಿ ಶ್ರೇಷ್ಠತೆಯನ್ನು ನಿರೀಕ್ಷಿಸುವ ಆಧುನಿಕ ನಾಯಕರಿಗೆ ಆಯ್ಕೆಯ ವಾಹನವಾಗಿದೆ ಮತ್ತು ಅವರು ಹಿಂಬದಿಯಲ್ಲಿರುವಾಗಲೂ ಅನುಕೂಲಕರವಾಗಿರುತ್ತದೆ.ಅವರು ಚಾಲನೆಯಲ್ಲಿರುವಾಗ “ಶೀರ್ ಡ್ರೈವಿಂಗ್ ಪ್ಲೆಷರ್”ಗೆ ಏನೂ ಕಡಿಮೆ ಇರುವುದಿಲ್ಲ. ಇದು ಸ್ಟೈಲ್‍ನ ಅಭಿವ್ಯಕ್ತಿಯಾಗಿದೆ ಮತ್ತು ಶ್ರೇಷ್ಠತೆ ಹೊರತಾಗಿ ಯಾವುದನ್ನೂ ಒಪ್ಪಿಕೊಳ್ಳದೇ ಇರುವವರಿಗೆ ಸೂಕ್ತವಾಗಿದೆ ಎಂದು BMW ಇಂಡಿಯಾ ಅಧ್ಯಕ್ಷ ವಿಕ್ರಮ್ ಪಾವಾಹ್ ಹೇಳಿದ್ದಾರೆ.
30 ಏಪ್ರಿಲ್ 2021 ರವರೆಗೆ ಆನ್‍ಲೈನ್ ಬುಕಿಂಗ್ಸ್ ಮಾಡುವವರು ಆಕರ್ಷಕ ಕೊಡುಗೆ ಸೀಮಿತ ಯೂನಿಟ್‍ಗಳ ಮೇಲೆ ಪಡೆಯುತ್ತಾರೆ. ಈ ಕಾರುಗಳು   1.5 ಲಕ್ಷ ರೂಪಾಯಿ ಮೌಲ್ಯದ ಉಚಿತ ಒರಿಜಿನಲ್ ಅಕ್ಸೆಸರೀಸ್ ಮತ್ತು ಲೈಫ್‍ಸ್ಟೈಲ್ ಕಲೆಕ್ಷನ್ ಉತ್ಪನ್ನಗಳೊಂದಿಗೆ ಬರುತ್ತವೆ.

Spread the love
Leave A Reply

Your email address will not be published.

Flash News