ಬಿಗ್ ಬಾಸ್ ಮನೆಯಲ್ಲಿ ಒಂದೇ ದಿನ ಇಬ್ಬರು ಗರ್ಲ್ಸ್.. ವೈಲ್ಡ್ ಕಾರ್ಡ್ ಎಂಟ್ರಿ..

0

ಬಿಗ್​ ಬಾಸ್​ ಏಪ್ರಿಲ್​ 8ರ ಎಪಿಸೋಡ್​ನಲ್ಲಿ ಸ್ಪರ್ಧಿಗಳಿಗೆ ಸರ್​ಪ್ರೈಸ್​ ಮೇಲೆ ಸರ್​ಪ್ರೈಸ್​ ಸಿಕ್ಕಿದೆ. ಮನೆಗೆ ಒಂದೇ ದಿನ ಎರಡೆರಡು ವೈಲ್ಡ್​ ಕಾರ್ಡ್​ ಎಂಟ್ರಿ ಸಿಕ್ಕಿದೆ. ಪ್ರಿಯಾಂಕಾ ತಿಮ್ಮೇಶ್​ ಹಾಗೂ ವೈಜಯಂತಿ ಅಡಿಗ ಬಿಗ್​ ಬಾಸ್​ ಮನೆಗೆ ಹೊಸ ಸ್ಪರ್ಧಿಯಾಗಿ ಬಂದಿದ್ದಾರೆ. ಈ ಮೂಲಕ ಮನೆಯ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ಈ ವಾರ ನೂತನ ಸ್ಪರ್ಧಿಯಾಗಿ ಮೊದಲು ವೈಜಯಂತಿ ಅಡಿಗ ಬಿಗ್​ ಬಾಸ್​ ಮನೆ ಪ್ರವೇಶಿಸಿದ್ದಾರೆ. ಕನ್​ಫೆಷನ್​ ರೂಂನಿಂದ ಅವರು ನೇರವಾಗಿ ಬಿಗ್​ ಬಾಸ್​ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ವಾಸುದೇವ ಅಡಿಗ ಅವರ ಮಗಳು ವೈಜಯಂತಿ ಅಡಿಗ. ಹೋಟೆಲ್​ ಉದ್ಯಮ ಇವರ ಮುಖ್ಯ ವೃತ್ತಿ. ಅಮ್ಮಚ್ಚಿಯೆಂಬ ನೆನಪು ಸಿನಿಮಾದಲ್ಲೂ ವೈಜಯಂತಿ ಬಣ್ಣ ಹಚ್ಚಿದ್ದಾರೆ. ಇವರನ್ನು ನೋಡಿ ಮಂಜು ತುಂಬಾನೇ ಖುಷಿ ಆಗಿದ್ದಾರೆ. ಪ್ರಿಯಾಂಕಾ ತಿಮ್ಮೇಶ್ ಕೂಡ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಭೀಮಸೇನ ನಳಮಹಾರಾಜ ಚಿತ್ರದ ನಾಯಕಿ ಇದೀಗ ಬಿಗ್​ಬಾಸ್​ ಮನೆಗೆ ಕಾಲಿಟ್ಟಿರುವುದು ಭಾರೀ ಕುತೂಹಲ ಮೂಡಿಸಿದೆ. 2015ರಲ್ಲಿ ಗಣಪ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಪ್ರಿಯಾಂಕಾ ತಿಮ್ಮೇಶ್ ಕೆಲ ಅನ್ಯ ಭಾಷೆ ಸಿನಿಮಾಗಳಲ್ಲೂ ನಟಿಸಿದ್ದಾರೆ. ಪ್ರಿಯಾಂಕಾ ತಿಮ್ಮೇಶ್ ಮತ್ತು ಪ್ರಿಯಾಂಕಾ ಬಿಗ್​ಬಾಸ್ ಮೂಲಕ ಹೇಗೆ ಮನರಂಜಿಸಲಿದ್ದಾರೆ ಎಂಬ ಕುತೂಹಲ ಎಲ್ಲರಿಗೂ ಇದೆ. ಎಲ್ಲಕ್ಕಿಂತ ಮಿಗಿಲಾಗಿ ಮನೆಗೆ ಯಾರಾದರೂ ಹೊಸ ಹುಡುಗಿ ಬರಲಿ ಎಂದು ಕಾಯುತ್ತಿದ್ದ ಮಂಜುಗೆ ಇದು ಖುಷಿ ಕೊಟ್ಟಿರುತ್ತದೆ ಎಂದು ಕೆಲವರು ಕಾಲೆಳೆದಿದ್ದಾರೆ. ಅಂದಹಾಗೆ, ಕಾಣೆಯಾಗಿದ್ದ ಮಂಜು ಕನ್​ಫೆಷನ್​​ರೂಂನಲ್ಲೇ ಕುಳಿತಿದ್ದರು. ಅವರು ಹೊರ ಬಂದ ನಂತರ ಮನೆಯವರೆಲ್ಲರಿಗೂ ಪರಿಚಯಿಸಿದರು. ನಂತರ ಪ್ರಿಯಾಂಕಾ ಚಿಕನ್​ ಹಿಡಿದುಕೊಂಡೇ ಬಿಗ್​ ಬಾಸ್​ ಮನೆಗೆ ಕಾಲಿಟ್ಟಿದ್ದಾರೆ.

Spread the love
Leave A Reply

Your email address will not be published.

Flash News