2021 IPL ನಲ್ಲಿ ಧೋನಿ ಮುಂದೆ 3 ಸವಾಲು ಮೆಟ್ಟಿ ನಿಲ್ಲುತ್ತಾ CSK

0

ಐಪಿಎಲ್​ ಸೀಸನ್-14ಕ್ಕೆ ಭರ್ಜರಿ ತಯಾರಿ ನಡೆಸ್ತಿರೋ ಮಾಸ್ಟರ್​ ಧೋನಿ ಮುಂದೆ, ಮೂರು ಸವಾಲುಗಳಿವೆ. ಆ ಮೂರು ಸವಾಲುಗಳನ್ನ ಮೆಟ್ಟಿ ನಿಂತು ಧೋನಿ, ತಮ್ಮ ಕೊನೆಯ ಐಪಿಎಲ್​ಗೆ ಗುಡ್​ಬೈ ಹೇಳ್ತಾರಂತೆ. 14ನೇ ಆವೃತ್ತಿಯ ಐಪಿಎಲ್​ ನಾಳೆಯಿಂದ ಶುರುವಾಗಲಿದೆ. ಈಗಾಗಲೇ ಎಲ್ಲಾ ತಂಡಗಳು ಅಂತಿಮ ಹಂತದ ಸಿದ್ಧತೆ ನಡೆಸಿಕೊಂಡಿವೆ. ಕಳೆದ ಆವೃತ್ತಿಯಲ್ಲಿ ಹೀನಾಯ ಪ್ರದರ್ಶನ ನೀಡಿದ್ದ ಚೆನ್ನೈ ಸೂಪರ್ ಕಿಂಗ್ಸ್, ಈ ಬಾರಿ ಪುಟಿದೇಳಲು ಪಣತೊಟ್ಟಿದೆ. ಇದೇ ಕಾರಣಕ್ಕೆ ಎಲ್ಲಾ ತಂಡಗಳಿಗಿಂತ ಮುನ್ನವೇ ಅಭ್ಯಾಸ ಆರಂಭಿಸಿದ್ದ ಚೆನ್ನೈ, ನೂತನ ಸೀಸನ್​ನಲ್ಲಿ ಭರ್ಜರಿ ಕಮ್​ಬ್ಯಾಕ್ ಮಾಡೋ ಉತ್ಸಾಹದಲ್ಲಿದೆ. ಒಂದೆಡೆ ಚೆನ್ನೈ ತಾಲೀಮು ನಡೆಸ್ತಿದ್ರೆ, ಮತ್ತೊಂದೆಡೆ 5 ತಿಂಗಳ ಬಳಿಕ ಮೈದಾನಕ್ಕಿಳಿಯುತ್ತಿರುವ ಧೋನಿ, ಐಪಿಎಲ್​ನಲ್ಲಿ ಮೈಲುಗಲ್ಲು ಸೃಷ್ಟಿಸೋಕೆ ರೆಡಿಯಾಗಿದ್ದಾರೆ.

Spread the love
Leave A Reply

Your email address will not be published.

Flash News