ಹಾಸನ ಜಿಲೆಟಿನ್ ಸ್ಫೋಟ ದುರಂತ; ಸ್ಫೋಟಕ ಸರಬರಾಜು ಮಾಡಿದ್ದ ನಾಗೇಶ್ ಅರೆಸ್ಟ್

0

ಹಾಸನ: ಚಾಕೇನಹಳ್ಳಿಯಲ್ಲಿ ಜಿಲೆಟಿನ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಸ್ಫೋಟಕ ಸರಬರಾಜು ಮಾಡಿದ್ದ ನಾಗೇಶ್​ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸುರಕ್ಷತಾ ಕ್ರಮಕೈಗೊಳ್ಳದ ಹಿನ್ನೆಲೆ ನಾಗೇಶ್​ನನ್ನು ಬಂಧಿಸಲಾಗಿದೆ. ಸ್ಪೋಟಕ‌ ವಿತರಣೆಗೆ ಲೈಸೆನ್ಸ್ ಹೊಂದಿದ್ದ ಮಾಲೀಕ‌ ನಾಗೇಶ್ ಸ್ಪೋಟಕ ಬಂದ ವೇಳೆ ಸುರಕ್ಷತಾ ಕ್ರಮ ವಹಿಸದೆ ಅನ್ಲೋಡ್ ಮಾಡಿಸಿದ್ದಾರೆ. ಅನ್ಲೋಡ್‌ ವೇಳೆ‌ ಅಜಾಗರೂಕತೆಯಿಂದ ಸ್ಪೋಟ ಸಂಭವಿಸಿತ್ತು. ಈ ಪ್ರಕರಣ ಸಂಬಂಧ ಹೊಳೆನರಸೀಪುರ ನಗರ ಠಾಣೆ ಪೊಲೀಸರು ಕೇಸ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಸದ್ಯ ಈಗ ನಾಗೇಶ್​ನನ್ನು ಅರೆಸ್ಟ್ ಮಾಡಿದ್ದು ಮಾಲೀಕನ‌‌ ನಿರ್ಲಕ್ಷ್ಯದಿಂದಲೇ ಸ್ಪೋಟ ಸಂಭವಿಸಿದೆ ಎಂದು ಕೇಸ್ ದಾಖಲಿಸಿಕೊಂಡಿದ್ದಾರೆ
ಏಪ್ರಿಲ್ 4 ರ ಮಧ್ಯಾಹ್ನ ಹೊಳೆನರಸೀಪುರ ತಾಲ್ಲೂಕಿನ ಚಾಕೇನಹಳ್ಳಿಯಲ್ಲಿ ಜಿಲೆಟಿನ್ ಸ್ಫೋಟ ನಡೆದಿತ್ತು. ಘಟನೆ ವೇಳೆ ಸ್ಥಳದಲ್ಲೇ ಸಂಪತ್(27) ಎಂಬ ವ್ಯಕ್ತಿ ಮೃತಪಟ್ಟಿದ್ದರು. ಹಾಗೂ ಇಬ್ಬರು ಗಾಯಗೊಂಡಿದ್ದರು. ಏಪ್ರಿಲ್ 5 ರಂದು ಗಾಯಾಳು ರವಿ ಮೃತಪಟ್ಟಿದ್ದು ಏಪ್ರಿಲ್ 8ರಂದು ಬೆಳಿಗ್ಗೆ ಚಿಕಿತ್ಸೆ ಫಲಿಸದೆ ನಟರಾಜ್ ಕೂಡ ಮೃತಪಟ್ಟಿದ್ದರು. ಕಲ್ಲು ಗಣಿಗಾರಿಕೆಗಾಗಿ ಸ್ಫೋಟಕವನ್ನು ಸಂಗ್ರಹಿಸಲಾಗಿತ್ತು. ಸ್ಫೋಟಕ ವಿತರಣೆ ವೇಳೆ ಸ್ಪೋಟವಾಗಿದ್ದು, ಸ್ಪೋಟದ ತೀವ್ರತೆಗೆ ಚಾಕೇನಹಳ್ಳಿ ಗ್ರಾಮಸ್ಥರು ಬೆಚ್ಚಿಬಿದ್ದಿದ್ದರು. ಈ ಪ್ರಕರಣ ಹೊಳೆನರಸೀಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

Spread the love
Leave A Reply

Your email address will not be published.

Flash News