ದಳಪತಿ ವಿಜಯ್ ಜೊತೆ​ ಹೊಸ ಸಿನಿಮಾದಲ್ಲಿ ನಟಿಸಲು 3 ಕೋಟಿ ರೂ. ಪಡೆಯುತ್ತಿರುವ ಕನ್ನಡತಿ! ಯಾರ್ ಗೊತ್ತಾ..?

0

ಪರಭಾಷೆ ಸಿನಿಮಾಗಳಲ್ಲಿ ಕರ್ನಾಟಕದ ಸುಂದರಿಯರು ಸಖತ್​ ಸದ್ದು ಮಾಡುತ್ತಿದ್ದಾರೆ. ತೆಲುಗು, ತಮಿಳಿನ ಸ್ಟಾರ್​ ನಟರ ಸಿನಿಮಾಗಳಿಗೆ ನಾಯಕಿಯಾಗಿ ಕನ್ನಡತಿಯರು ಆಯ್ಕೆ ಆಗುತ್ತಿದ್ದಾರೆ. ದಿನದಿಂದ ದಿನಕ್ಕೆ ಅವರ ಬೇಡಿಕೆ ಕೂಡ ಹೆಚ್ಚಾಗುತ್ತಿದೆ. ಅಂಥವರಲ್ಲಿ ಮೊದಲು ಕೇಳಿಬರುವ ಹೆಸರು ನಟಿ ಪೂಜಾ ಹೆಗ್ಡೆ ಅವರದ್ದು. ಟಾಲಿವುಡ್​, ಕಾಲಿವುಡ್​, ಬಾಲಿವುಡ್​ನಲ್ಲಿ ನಟಿಸಿರುವ ಈ ಸುಂದರಿಗೆ ಹೊಸ ಹೊಸ ಆಫರ್​ಗಳು ಹರಿದು ಬರುತ್ತಿವೆ. ಸಂಭಾವನೆ ವಿಚಾರದಲ್ಲಿ ಅವರು ಸಿಕ್ಕಾಪಟ್ಟೆ ದುಬಾರಿ ಆಗಿದ್ದಾರೆ. ಈ ಬಗ್ಗೆ ಒಂದು ಸುದ್ದಿ ಕೇಳಿಬರುತ್ತಿದೆ. 2012ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಪೂಜಾ ಹೆಗ್ಡೆ ಈಗಾಗಲೇ ಹೃತಿಕ್​ ರೋಷನ್​, ಜ್ಯೂ. ಎನ್​ಟಿಆರ್​, ಅಲ್ಲು ಅರ್ಜುನ್​, ಮಹೇಶ್​ ಬಾಬು ಮುಂತಾದ ಸ್ಟಾರ್​ ಕಲಾವಿದರ ಜೊತೆ ತೆರೆಹಂಚಿಕೊಂಡಿದ್ದಾರೆ. ಬಹುದಿನಗಳ ಬಳಿಕ ಅವರು ತಮಿಳು ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ದಳಪತಿ ವಿಜಯ್​ ನಟನೆಯ 65ನೇ ಚಿತ್ರಕ್ಕೆ ನಾಯಕಿಯಾಗಿ ಪೂಜಾ ಆಯ್ಕೆ ಆಗಿದ್ದಾರೆ. ಅದರಲ್ಲಿ ಅವರು ಪಡೆಯುತ್ತಿರುವ ಸಂಭಾವನೆಯ ಮೊತ್ತ ಕೇಳಿ ಇನ್ನುಳಿದ ನಟಿಯರಿಗೆ ತಲೆ ಗಿರಗಿರ ಎನ್ನುತ್ತಿದೆ. ಹೌದು, ದಳಪತಿ ವಿಜಯ್​ ಜೊತೆ ನಟಿಸಲು ಪೂಜಾ ಹೆಗ್ಡೆ ಬರೋಬ್ಬರಿ 3 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. ಈ ಚಿತ್ರಕ್ಕೆ ಈಗಾಗಲೇ ರಷ್ಯಾದಲ್ಲಿ ಶೂಟಿಂಗ್​ ಆರಂಭ ಆಗಿದೆ. ವಿಜಯ್​ ಸೇರಿದಂತೆ ಅನೇಕ ಕಲಾವಿದರು ರಷ್ಯಾಗೆ ತೆರಳಿದ್ದಾರೆ. ಶೀಘ್ರದಲ್ಲೇ ಪೂಜಾ ಹೆಗ್ಡೆ ಕೂಡ ಶೂಟಿಂಗ್​ ಸೆಟ್​ ಸೇರಿಕೊಳ್ಳಲಿದ್ದಾರೆ. ಅಂದಹಾಗೆ, ಈವರೆಗಿನ ವೃತ್ತಿಜೀವನದಲ್ಲಿ ಪೂಜಾ ಅತಿ ಹೆಚ್ಚು ಸಂಭಾವನೆ ಪಡೆದ ಸಿನಿಮಾ ಇದು ಎಂಬುದು ವಿಶೇಷ.

Spread the love
Leave A Reply

Your email address will not be published.

Flash News