ಕಿರಿಕ್ ಪಾರ್ಟಿ ಸಿನಿಮಾ ಕಿರಿಕಿರಿ: ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿಗೆ ಕೋರ್ಟ್ ವಾರೆಂಟ್..

0

ಬೆಂಗಳೂರು: 2016ರಲ್ಲಿ ಬಿಡುಗಡೆಗೊಂಡಿದ್ದ ಪ್ರಸಿದ್ಧ ಚಲನಚಿತ್ರ ಕಿರಿಕ್​ ಪಾರ್ಟಿಗೆ ಇದೀಗ ಕಿರಿಕಿರಿ ಶುರುವಾಗಿದೆ. ಇದಕ್ಕೆ ಕಾರಣ, ಕೋರ್ಟ್​ನಿಂದ ಇಡೀ ಚಿತ್ರತಂಡಕ್ಕೆ ಜಾಮೀನುರಹಿತ ವಾರೆಂಟ್​ ಜಾರಿ ಮಾಡಲಾಗಿದೆ. ಕಿರಿಕ್ ಪಾರ್ಟಿ ಚಿತ್ರದಲ್ಲಿ ಲಹರಿ ಹಾಡುಗಳ ಅಕ್ರಮ ಬಳಕೆ ಮಾಡಿದ್ದ ಆರೋಪವನ್ನು ಚಿತ್ರತಂಡ ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ನಿರ್ದೇಶಕ ರಿಷಬ್ ಶೆಟ್ಟಿ, ಚಿತ್ರ ನಟ ರಕ್ಷಿತ್ ಶೆಟ್ಟಿ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಮತ್ತು ಪರಮ್ವಾ ಸ್ಟುಡೀಯೋಸ್ ಆರೋಪಿಗಳ ಸ್ಥಾನದಲ್ಲಿ ನಿಂತಿದ್ದು ಎಲ್ಲರಿಗೂ ವಾರೆಂಟ್​ ಜಾರಿ ಮಾಡಿ 9 ನೇ ಎಸಿಎಂಎಂ ಕೋರ್ಟ್ ಆದೇಶಿಸಿದೆ. ಯಾರದ್ದೇ ಅನುಮತಿ ಇಲ್ಲದೇ ನಿಯಮ ಬಾಹಿರವಾಗಿ ಹಾಡುಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ ಎಂದು ಲಹರಿ ರೆಕಾರ್ಡಿಂಗ್ಸ್ ಚಿತ್ರತಂಡದ ವಿರುದ್ಧ ಕ್ರಿಮಿನಲ್ ಮತ್ತು ಸಿವಿಲ್ ಕೇಸ್ ಹಾಕಿತ್ತು. ಕಾಪಿ ರೈಟ್ಸ್ ಆಕ್ಟ್ ಸೆಕ್ಷನ್​ 63ಎ ಮತ್ತು 63 ಬಿ ಅಡಿಯಲ್ಲಿ ಕೇಸ್ ಹಾಕಲಾಗಿತ್ತು. ಈ ಕೇಸ್​ 2019ರಲ್ಲಿ ದಾಖಲಾಗಿತ್ತು. ಅರ್ಜಿಯಲ್ಲಿ ಸಿನಿಮಾ ರಿಲೀಸ್ ಮಾಡದಂತೆ ಕೋರಿಕೆ ಮಾಡಲಾಗಿತ್ತು. ಆದರೆ ಚಿತ್ರತಂಡ ಅನುಮತಿ ಪಡೆದು ಸಿನಿಮಾ ಬಿಡುಗಡೆ ಮಾಡಿತ್ತು. ಆದರೆ ಕೇಸ್​ಗಳು ಮಾತ್ರ ಕೋರ್ಟ್​ನಲ್ಲಿ ನಡೆಯುತ್ತಲೇ ಇತ್ತು. ಇದೀಗ ಆದೇಶ ಹೊರಬಂದಿದ್ದು ಎಲ್ಲರಿಗೂ ಜಾಮೀನುರಹಿತ ವಾರೆಂಟ್​ ಜಾರಿ ಮಾಡಲಾಗಿದೆ. ಇದಾಗಲೇ ಎಂಟು ಬಾರಿ ಕೋರ್ಟ್​ ನೋಟಿಸ್​ ಜಾರಿಗೊಳಿಸಿದ್ದರೂ ಅದಕ್ಕೆ ಉತ್ತರಿಸದ ಹಿನ್ನೆಲೆಯಲ್ಲಿ ಈಗ ಜಾಮೀನುರಹಿತ ವಾರೆಂಟ್​ ಜಾರಿಯಾಗಿದ್ದು, ಆರೋಪಿಗಳನ್ನು ಮೇ 27ರಂದು ಕೋರ್ಟ್​ಗೆ ಹಾಜರುಪಡಿಸುವಂತೆ ಆದೇಶಿಸಲಾಗಿದೆ.

Spread the love
Leave A Reply

Your email address will not be published.

Flash News