ನಮ್ಮ ಮೆಟ್ರೊ ದುರಂತ.. ಅಧಿಕಾರಿಗಳ ಬೇಜವಾಬ್ದಾರಿಗೆ ಬಲಿಯಾದ ವ್ಯಕ್ತಿ..

0

ಬೆಂಗಳೂರು: ನಮ್ಮೆ ಹೆಮ್ಮೆಯ ಮೆಟ್ರೋ ಒಳ್ಳೆಯ ಕಾರಣಗಳಿಗೆ ಸುದ್ದಿಯಾಗಿದ್ದೇ ಕಡಿಮೆ. ಅಲ್ಲಿ ಕೆಲಸ ಮಾಡುವ ಅಧಿಕಾರಿಗಳು ಮಾಡುವ ಅಂದಾ ದರ್ಬಾರ್ ಕೆಳ ಹಂತದ ಸಿಬ್ಬಂದಿಯನ್ನು ಮಾನಸಿಕವಾಗಿ ನರಳುವಂತೆ ಮಾಡ್ತಿರುವುದು ಸುಳ್ಳಲ್ಲ..ಇದನ್ನು ಹೇಳೊಕ್ಕೆ ಕಾರಣವೂ ಇದೆ. ಮೂರ್ನಾಲ್ಕು ದಿನಗಳ ಹಿಂದೆ ಮೆಟ್ರೋದ ಪುಟ್ಟೇನಳ್ಳಿ (ಯಲಚೇನಹಳ್ಳಿ) ಮೆಟ್ರೋ ನಿಲ್ದಾಣದಲ್ಲಿ ಆಸ್ಕಿಲೇಟರ್ ಪಕ್ಕದ ಡಕ್ಟ್ ನಲ್ಲಿ ಆಯತಪ್ಪಿ ಬಿದ್ದು ವ್ಯಕ್ತಿಯೋರ್ವ ಸಾವನ್ನಪ್ಪಿದ್ದ. ಆತನ ಶವ ನಿನ್ನೆ ಕೊಳೆತ ಸ್ತಿತಿಯಲ್ಲಿ ಪತ್ತೆಯಾಗಿತ್ತು. ಪ್ರಕರಣವನ್ನು ಒಳಗೊಳಗೆ ಮುಚ್ಚಿ ಹಾಕೊಕ್ಕೆ ಮೆಟ್ರೋದ ಆಡಳಿತ ಮಂಡಳಿ ಮುಂದಾಗಿದೆ.ನಿಜವಾಗಿ ನೋಡುವುದಾದ್ರೆ ಇದರ ಹೊಣೆಯನ್ನು ಸೆಕ್ಯೂರಿಟಿ ವಿಭಾಗದವರು ಹೊತ್ತುಕೊಳ್ಳಬೇಕು. ಏಕೆಂದ್ರೆ ಟೆಕ್ನಿಕಲ್ಲಾಗಿ ಎಲ್ಲವು ಸರಿಯಾಗಿದಿದ್ದರೆ ಇಂಥ ದುರಂತ ಸಂಭವಿಸುತ್ತಿರಲಿಲ್ಲವೇನೋ..ಆದ್ರೆ ವಿಚಾರಣೆ ಶುರುವಾದ್ರೆ ತಮ್ಮ ಬುಡಕ್ಕೆ ಬರಬಹುದೆನ್ನುವ ಕಾರಣಕ್ಕೆ ಎಚ್ಚೆತ್ತುಕೊಂಡ ಆಪರೇಷನ್ ಅಂಡ್ ಮ್ಯಾನೇಜ್ಮೆಂಟ್ ಇ.ಡಿ ಶಂಕರ್ ಇಡೀ ಪ್ರಕರಣದಕ್ಕೆ ಟೆಕ್ನಿಕಲ್ ಸೆಕ್ಷನ್ ಸಿಬ್ಬಂದಿಯೇ ಕಾರಣ ಎಂದು ಇನ್ನೊಬ್ಬರ ಮೇಲೆ ಗೂಬೆ ಕೂರಿಸುವ ಯತ್ನ ಮಾಡ್ತಿದ್ದಾರೆ.
ವಾಸ್ತವ ಸಂಗತಿಯನ್ನು ಅವಲೋಕಿಸಿ ಕ್ರಮ ಕೈಗೊಳ್ಳಬೇಕಿದ್ದ ಮುಖ್ಯ ಎಂಜಿನಿಯರ್ ಹಾಗೂ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತರಾವ್ ಚವ್ಹಾಣ್ ಕೂಡ ಶಂಕರ್ ಅವರ ಬೆನ್ನಿಗೆ ನಿಂತು ಕೆಲಸ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಸಂಬಂಧವೇ ಪಡದ ವಿಷಯದಲ್ಲಿ ತಮ್ಮನ್ನು ಸಿಕ್ಕಾಕಿಸಿರುವುದರಿಂದ ಅಕ್ಷರಶಃ ಗೊಂದಲಕ್ಕೀಡಾಗಿರು ಟೆಕ್ನಿಕಲ್ ವಿಭಾಗದ ಸಿಬ್ಬಂದಿ ದಿಕ್ಕು ತೋಚದಂತಾಗಿದ್ದಾರೆ. ಪೊಲೀಸರು ಕೂಡ ಈ ವಿಭಾಗದ ಅಧಿಕಾರಿ ಸಿಬ್ಬಂದಿಯನ್ನು ವಿಚಾರಣೆ ನೆವದಲ್ಲಿ ಕಿರುಕುಳ ನೀಡುತ್ತಿದ್ದಾರಂತೆ.
ಸೆಕ್ಯೂರಿಟಿ ವಿಭಾಗದ ನಿರ್ಲಕ್ಷ್ಯದಿಂದ ಸಂಭವಿಸಿದ ಅವಘಡದ ಹೊಣೆ ತಪ್ಪಿಸಿಕೊಳ್ಳೊಕ್ಕೆ ಅಧಿಕಾರಿಗಳು ಇನ್ನೊಂದು ವಿಭಾಗದ ಮೇಲೆ ಗೂಬೆ ಕೂರಿಸಿ ಸುಮ್ಮನಾಗುವ ಕೆಲಸ ಮಾಡಿರುವುದರಿಂದ ಟೆಕ್ನಿಕಲ್ ವಿಭಾಗದ ಅಧಿಕಾರಿ ಸಿಬ್ಬಂದಿಗೆ ಏನ್ ಮಾಡಬೇಕೆಂದು ದಿಕ್ಕು ತೋಚದಂತಾಗಿದೆ

 

 ಶಂಕರ್

Spread the love
Leave A Reply

Your email address will not be published.

Flash News