ಕೆಜಿಎಫ್ 2 ಸಿನಿಮಾದ ಶೂಂಟಿಗ್ ಕಂಪ್ಲೀಟ್ ಆದ್ರೂ ರಾಕಿ ಭಾಯ್ ಯಾಕ್ ಗಡ್ಡ ಶೇವ್ ಮಾಡ್ತಿಲ್ಲ..?

0

‘ಕೆಜಿಎಫ್ ಚಾಪ್ಟರ್​ 2’ ನಂತರ ರಾಕಿಂಗ್​ ಸ್ಟಾರ್​ ಯಶ್​ ಅವರ ಮುಂದಿನ ಸಿನಿಮಾ ಯಾವುದು ಅನ್ನೋ ಗುಟ್ಟು ಸದ್ಯ ಚಿತ್ರಪ್ರೇಮಿಗಳಿಗೆ ಗೊತ್ತಾಗುತ್ತಿದೆ. ಸದ್ಯ ರಾಕಿ ಭಾಯ್​ ಮುಂದಿನ ಸಿನಿಮಾದ ಪಾತ್ರ ಹಾಗೂ ಆ ಪಾತ್ರದ ವೈಶಿಷ್ಟ್ಯ, ಲುಕ್ಕು, ಖದರು ಏನು ಅನ್ನೋದ್ರ ಸಣ್ಣ ಸುಳಿವು ಸಿಕ್ಕಿದೆ. ಕೆಜಿಎಫ್​ ಬರೋವರೆಗೂ ಯಶ್​ ಗಾಂಧಿನಗರದ ಓಡೋ ವೈಟ್​ ಕುದುರೆ ಆಗಿದ್ದರು. ಆದ್ರೆ ಕೆಜಿಎಫ್​ ಸಿನಿಮಾ ಬಂದ ಮೇಲೆ ಯಶ್​ ಭಾರತೀಯ ಚಿತ್ರರಂಗದ ಬಾನಂಗಳದ ತಾರೆಯಾದರು. ಕೆಜಿಎಫ್​​​​​ ಅಧ್ಯಾಯದ ಕಡೆಯ ಹಂತದಲ್ಲಿ ನಿಂತಿರೋ ಯಶ್​ ಅವರ ನಡೆ ಈಗ ಕೌತುಕವಾಗಿದೆ. ಕೆಜಿಎಫ್​​ ನಂತರ ಯಶ್​ ಮಫ್ತಿ ಸಿನಿಮಾ ನಿರ್ದೇಶಕ ನರ್ತನ್ ಜೊತೆಗೆ ಸಿನಿಮಾ ಮಾಡಲಿದ್ದಾರೆ ಅನ್ನೊ ಸುದ್ದಿ ಸಮಾಚಾರ ಹಾರಾಡುತ್ತಿದೆ. ನರ್ತನ್​ ನಿರ್ದೇಶನದಲ್ಲಿ ಯಶ್​ ನಟಿಸಲಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದ್ದರು ಯಶ್​ ಮಾತ್ರ ಯಾವುದೇ ಸುಳಿವು ನೀಡುತ್ತಿಲ್ಲ. ಕೆಜಿಎಫ್​ ಚಾಪ್ಟರ್​ 2 ಸಿನಿಮಾ ಶೂಟಿಂಗ್​ ಸಂಪೂರ್ಣ ಸಮಾಪ್ತಿಯಾಗಿದ್ದರು ಇಂದಿಗೂ ಅದೇ ಲುಕ್​​ನಲ್ಲೇ ಕಾಲ ಕಳೆಯುತ್ತಿದ್ದಾರೆ ಯಶ್​. ಹೀಗಾಗಿ ಇದು ಹೊಸ ಸಿನಿಮಾ ಲುಕ್ಕಾ? ಅಂತ ಫ್ಯಾನ್ಸ್​ ಊಹಿಸ್ತಿದ್ದಾರೆ. ಯಾವಾಗ ಯಶ್​ ತನ್ನ ಅರ್ಧ ಮೊಳ ಗಡ್ಡಕ್ಕೆ ಕತ್ತರಿ ಹಾಕಿ ಸ್ಮಾರ್ಟ್​ ಸುಪ್ರಿಂ ಸೂಪರ್​ ಲುಕ್​​ನಲ್ಲಿ ಕಾಣಿಸಿಕೊಳ್ತಾರೆ ಅನ್ನೋ ವಿಚಾರ ಗೂಗಲ್​ ಬುದ್ಧಿವಂತನಿಗೂ ಗೊತ್ತಾಗದಾಗಿದೆ. ಕೆಜಿಎಫ್​ ಚಾಪ್ಟರ್​ 1 ತೆರೆಕಂಡು ಸ್ಪಲ್ಪದಿನಕ್ಕೆ ರಾಕಿ ಭಾಯ್​ ತಮ್ಮ ಗಡ್ಡಕ್ಕೆ ಕತ್ತರಿ ಹಾಕಿಸಿಕೊಂಡಿದ್ದರು​ . ಕೆಜಿಎಫ್​​ಗೆ ಕೊಂಚ ಗ್ಯಾಪ್​ ಕೊಟ್ಟು ಮೈನೇಮ್​ ಈಸ್​ ಕಿರಾತಕನಾಗಲು ಹೊರಟ್ಟಿದ್ದರು. ಆದ್ರೆ ಕೆಜಿಎಫ್​ ಚಾಪ್ಟರ್-1 ಹಿಟ್ಟಾದ ಕ್ರೇಜ್​ ನೋಡಿ ಸ್ವತಃ ಯಶ್​ ಅವರೇ ಗಾಬರಿಯಾಗಿ ಕೆಜಿಎಫ್​ ಮುಂದುವರೆದ ಭಾಗಕ್ಕೆ ತಮ್ಮನ್ನ ತಾವು ಸಮರ್ಪಿಸಿಕೊಂಡರು. ಈಗ ಕೆಜಿಎಫ್​ ಚಾಪ್ಟರ್​ 2 ಶೂಟಿಂಗ್​ ಕೂಡಾ ಮುಗಿದಿದೆ. ಆದ್ರೆ ಯಶ್​ ಗಡ್ಡಕ್ಕೆ ಕತ್ತರಿ ಬಿಳೋದ್ಯಾವಾಗ ಎಂದು ರಾಕಿ ಭಾಯ್​​ ಫ್ಯಾನ್ಸ್​ ಎದುರುನೋಡ್ತಿದ್ದಾರೆ. ಈಗ ದೊಡ್ಡ ಮಾಸ್​ ಸಿನಿಮಾ ಮಾಡೋ ಮನಸ್ಸಿನಲ್ಲಿದ್ದಾರೆ ರಾಕಿ ಭಾಯ್. ಯಶಸ್ವಿಯಾಗಿ ಕೆಜಿಎಫ್​ ಪಾರ್ಟ್​ 2 ಸಿನಿಮಾವನ್ನ ತೆರೆಗೆ ತರಿಸಿ ಮುಂದಿನ ಸಿನಿಮಾ ಘೋಷಣೆ ಮಾಡೋ ಗುರಿಯಲ್ಲಿದ್ದಾರೆ ಯಶ್​. ಕೆಜಿಎಫ್​ ಚಾಪ್ಟರ್​ 2 ಸಿನಿಮಾ ತೆರೆಕಂಡ ನಂತರ ಆಗಸ್ಟ್​ ತಿಂಗಳಲ್ಲಿ ಹೊಸ ಸಿನಿಮಾದ ಘೋಷಣೆ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಒಂದು ಮಾಹಿತಿ ಇತ್ತು, ದುಬೈ ಮೂಲದ ಉದ್ಯಮಿಯೊಬ್ಬರು ಬಂಡವಾಳ ಹೂಡ್ತಾರೆ. ಯಶ್​ ಫಸ್ಟ್​ ಟೈಮ್​ ತಮ್ಮದೆ ಬ್ಯಾನರ್ಸ್​ ಸೃಷ್ಟಿಸಿ ಹೊಸ ಸಿನಿಮಾ ಪ್ರೊಡಕ್ಷನ್​ ಮಾಡ್ತಾರೆ ಅಂತ ಹೇಳಲಾಗಿತ್ತು. ಆದ್ರೆ ಈಗ ಯಶ್​ ಅವರೇ ಬಂಡವಾಳ ಹೂಡಿ ನಿರ್ಮಾಣದ ಜೊತೆಗೆ ನಟನೆಯನ್ನು ಮಾಡ್ತಾರೆ ಅನ್ನೋ ಮಾತುಗಳು ಕೇಳಿಬರುತ್ತಿವೆ. ಇನ್ನು ನರ್ತನ್​ ನಿರ್ದೇಶಿಸುತ್ತಾರೆ ಎಂದು ಹೇಳಲಾಗುತ್ತಿರುವ ಯಶ್​ ಅವರ ಮುಂದಿನ ಸಿನಿಮಾ ತಂಡದಲ್ಲಿ ಸದ್ಯ ಈಗ ಸ್ಕ್ರಿಪ್ಟ್​ ಕಾರ್ಯದಲ್ಲಿರುವವರು ಕೇವಲ ನಾಲ್ಕೇ ಜನರಂತೆ. ಕಥೆ ಎಲ್ಲಿಯೂ ಸೋರಿಕೆಯಾಗಬಾರದೆಂದು ಗೌಪ್ಯವಾಗಿ ಸ್ಕ್ರಿಪ್ಟ್​ ವರ್ಕ್​ ಆಗುತ್ತಿದೆಯಂತೆ. ಯಶ್​ ಮುಂದಿನ ಸಿನಿಮಾ ಟೈಟಲ್​ ‘‘ಜಟಸ್ಯ’’ ಎಂದು ಹೇಳಲಾಗುತ್ತಿದೆ. ಆದ್ರೆ ಇದು ಇನ್ನೂ ಅಧಿಕೃತವಾಗಿಲ್ಲ. ಕೆಜಿಎಫ್​ ಚಾಪ್ಟರ್​ 2 ತೆರೆಕಂಡ ನಂತರ ಯಶ್​ ಅವರ ಮುಂದಿನ ಸಿನಿಮಾ ಕೆಲಸ ಕಾರ್ಯಕ್ಕೆ ಅಧಿಕೃತ ಚಾಲನೆ ಸಿಗಲಿದೆ.

Spread the love
Leave A Reply

Your email address will not be published.

Flash News