ಸೂಪರ್ ಸಂಡೇ ಫೈಟ್ನಲ್ಲಿ SRH-KKR ಕಾದಾಟ; ಉಭಯ ತಂಡಗಳ ಸ್ಟ್ರೆಂತ್ ಹೇಗಿದೆ..?

0

ದಿನೇ ದಿನೇ 14ನೇ ಆವೃತ್ತಿಯ ಐಪಿಎಲ್​​​​ ಕಾವು ರಂಗೇರುತ್ತಿದೆ. ಸನ್‌ರೈಸರ್ಸ್ ಹೈದ್ರಾಬಾದ್, ಕೋಲ್ಕತಾ ನೈಟ್ ರೈಡರ್ಸ್ ನಡುವಿನ ಮತ್ತೊಂದು ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಕಳೆದ ಸೀಸನ್​​ನಲ್ಲಿ ಪ್ಲೇ ಆಫ್​ ಕನಸು ಭಗ್ನಗೊಳಿಸಿದ್ದ ಸನ್​ ರೈಸರ್ಸ್​ಗೆ ಇಯಾನ್ ಮಾರ್ಗನ್ ಪಡೆ ಟಕ್ಕರ್ ನೀಡೋ ಲೆಕ್ಕಚಾರದಲ್ಲಿದೆ. ಇತ್ತ ವಾರ್ನರ್​ ನೇತೃತ್ವದ ಸನ್ ರೈಸರ್ಸ್, ಕೆಕೆಆರ್ ಆರ್ಭಟಕ್ಕೆ ಬ್ರೇಕ್ ಹಾಕಿ ಶುಭಾರಂಭ ಮಾಡೋ ಉತ್ಸಾಹದಲ್ಲಿದೆ.  13ನೇ ಆವೃತ್ತಿಯ ಐಪಿಎಲ್​ನಲ್ಲಿ ಪ್ಲೇ ಆಫ್​​​​​​​​​​​​ ತಲುಪಿದ್ದ ಸನ್​ ರೈಸರ್ಸ್ ಹೈದ್ರಾಬಾದ್, ಕ್ವಾಲಿಫೈಯರ್​ನಿಂದ ಔಟ್​ ಆಗಿತ್ತು. ಆದ್ರೀಗ ತಂತ್ರ-ರಣ ತಂತ್ರದೊಂದಿಗೆ ಕಣಕ್ಕಿಳಿಯುತಿರುವ ಆರೆಂಜ್ ಆರ್ಮಿ, ಈ ಬಾರಿ ಕಪ್ ಗೆಲ್ಲೋ ಹುರುಪಿನಲ್ಲಿದೆ. ಕೊಲ್ಕತ್ತಾ ವಿರುದ್ಧದ ಮೊದಲ ಕದನದಲ್ಲೇ ಶುಭಾರಂಭ ಮಾಡೋ ಕನಸಿನಲ್ಲಿರುವ ಸನ್ ರೈಸರ್ಸ್​, ಕೆಕೆಆರ್​ಗೆ ಮಣಿಸಲು ತನ್ನದೇ ಆದ ಸ್ಟಾಟರ್ಜಿ, ಗೇಮ್​ಪ್ಲಾನ್ ರೂಪಿಸಿಕೊಂಡಿದೆ. ಅದ್ರಲ್ಲೂ ಸ್ಟಾರ್​​ ಬ್ಯಾಟ್ಸ್​ಮನ್​​​ಗಳ ದಂಡನ್ನೇ ಹೊಂದಿರುವ ಹೈದ್ರಾಬಾದ್​, ಇಂದಿನ ಪಂದ್ಯ ಗೆಲ್ಲೋ ಫೇವರಿಟ್​ ಎನಿಸಿದೆ. ಜಾನಿ ಬೇರ್‌ಸ್ಟೋ, ವಾರ್ನರ್​ರಂತಹ ಆರಂಭಿಕ ದಾಂಡಿಗರಿದ್ದರೆ, ಮಧ್ಯಮ ಕ್ರಮಾಂಕದಲ್ಲಿ ಪರಿಸ್ಥಿತಿಗೆ ತಕ್ಕಂತೆ ಬ್ಯಾಟ್ ಬೀಸಬಲ್ಲ ಮನೀಷ್ ಪಾಂಡೆ, ಕೇನ್​ ವಿಲಿಯಮ್ಸನ್​​, ವಿಜಯ್ ಶಂಕರ್, ವೃದ್ಧಿಮಾನ್ ಸಹಾ, ಅಬ್ದುಲ್ ಸಾಮದ್, ಜಸನ್ ಹೋಲ್ಡರ್​ ಇದ್ದಾರೆ. ಇನ್ನೂ ಸದ್ಯ ಜಾನಿ ಬೇರ್​ ಸ್ಟೋ ಅದ್ಭುತ ಫಾರ್ಮ್​ನಲ್ಲಿದ್ದು, ಸನ್​ ರೈಸರ್ಸ್​ ಮುಖದಲ್ಲಿ ಮಂದಹಾಸ ಮೂಡಿಸಿದೆ. ಆದ್ರೆ, ಉತ್ತಮ ಆಟಗಾರರನ್ನ ಹೊಂದಿರುವ ಸನ್ ರೈಸರ್ಸ್, ಮಧ್ಯಮ ಕ್ರಮಾಂಕದಲ್ಲಿ ತಜ್ಞ ಬ್ಯಾಟ್ಸ್‌ಮನ್ ಕೊರತೆ ಎದುರಿಸುತ್ತಿದೆ. ಬ್ಯಾಟಿಂಗ್ ವಿಭಾಗಕ್ಕೆ ಹೋಲಿಸಿದ್ರೆ, ಹೈದ್ರಾಬಾದ್ ಬೌಲಿಂಗ್ ಡಿಪಾರ್ಟ್​ಮೆಂಟ್ ಮತ್ತಷ್ಟು ಬಲಿಷ್ಠವಾಗಿದೆ. ಒಂದೆಡೆ ಸ್ವಿಂಗ್ ಕಿಂಗ್​​ ಭುವನೇಶ್ವರ್ ಕುಮಾರ್, ಸಂದೀಪ್ ಶರ್ಮಾ ಕಾಡಿದ್ರೆ, ಮತ್ತೊಂದೆಡೆ ಯಾರ್ಕರ್ ಸ್ಪೆಷಲಿಸ್ಟ್ ಟಿ.ನಟರಾಜನ್ ಎದುರಾಳಿಗೆ ಕಂಟಕವಾಗಲಿದ್ದಾರೆ. ಗುಣಮಟ್ಟ ಸ್ಪಿನ್ನರ್ ರಶೀದ್ ಖಾನ್ ಎದುರಾಳಿಗೆ ಸವಾಲ್ ಆಗೋದ್ರಲ್ಲಿ ಅನುಮಾನ ಇಲ್ಲ. ಬ್ಯಾಟಿಂಗ್ ಹಾಗೂ ಬೌಲಿಂಗ್​​ನಲ್ಲಿ ಸಮತೋಲನದಿಂದ ಕೂಡಿರೋ ಸನ್​ ರೈಸರ್ಸ್, ರೈಡರ್ಸ್​ ಮೇಲೆ ರೈಡ್ ನಡೆಸೋ ವಿಶ್ವಾಸದಲ್ಲಿದೆ.

 

Spread the love
Leave A Reply

Your email address will not be published.

Flash News