ನಾಳೆಯಿಂದ ಎಂದಿನಂತೆ ಬಸ್ಗಳು ಸಂಚರಿಸಲಿವೆ: ಕೆಎಸ್‌ಆರ್‌ಟಿಸಿ ಮುಖ್ಯ ವ್ಯವಸ್ಥಾಪಕ ಪ್ರಭಾಕರ್ ರೆಡ್ಡಿ ವಿಶ್ವಾಸ..

0

ಬೆಂಗಳೂರು: ನಾಳೆಯಿಂದ ಎಂದಿನಂತೆ ಬಸ್ ಸಂಚಾರ ಆರಂಭವಾಗುವ ಸಾಧ್ಯತೆಯಿದೆ. ಇಂದು ಸಂಜೆ ವೇಳೆಗೆ ರಾಜ್ಯದ 4 ನಿಗಮಗಳಿಂದ 4 ಸಾವಿರ ಬಸ್ ಸಂಚರಿಸಲಿವೆ. ಮುಷ್ಕರದ ಮಧ್ಯೆ ಹಲವು ನೌಕರರು ಕರ್ತವ್ಯಕ್ಕೆ ಹಾಜರಾಗುತ್ತಿದ್ದು, ದಿನೇ ದಿನೆ ಕರ್ತವ್ಯಕ್ಕೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸಾರಿಗೆ ಸಿಬ್ಬಂದಿ ಮುಷ್ಕರದ ಮೊದಲು ಮತ್ತು ಎರಡನೇ ದಿನ ಮೊಬೈಲ್ ಸ್ವಿಚ್ ಆಫ್ ಮಾಡಿದ್ದರು. ಆದರೆ ಇಂದು ಎಲ್ಲಾ ನೌಕರರು ಮೊಬೈಲ್ ಆನ್ ಮಾಡಿದ್ದಾರೆ ಎಂದು ಬೆಂಗಳೂರಿನಲ್ಲಿ ಕೆಎಸ್‌ಆರ್‌ಟಿಸಿ ಸಂಚಾರ ವಿಭಾಗದ ಮುಖ್ಯ ವ್ಯವಸ್ಥಾಪಕ ಪ್ರಭಾಕರ್ ‌ರೆಡ್ಡಿ ಹೇಳಿದರು. 

ಉತ್ತರ ಕರ್ನಾಟಕದಲ್ಲಿ ಹೆಚ್ಚು ಬಸ್‌ಗಳು ಸಂಚರಿಸುತ್ತಿವೆ. ಇಂದು 2 ಸಾವಿರ ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ರಾಜ್ಯದಲ್ಲಿ ಶೇ 20ರಷ್ಟು ಬಸ್​ಗಳು ಕಾರ್ಯಾಚರಣೆ ಮಾಡುತ್ತಿವೆ. ಕರ್ತವ್ಯಕ್ಕೆ ಬಾರದ ಸಾರಿಗೆ ನೌಕರರಿಗೆ ಸಂಬಳ ನೀಡುತ್ತಿಲ್ಲ. ಈಗಲೂ ಸಮಯ ಮೀರಿಲ್ಲ. ಎಲ್ಲ ಸಿಬ್ಬಂದಿಗಳೂ ಕರ್ತವ್ಯ ಬನ್ನಿ ಎಂದು ಅವರು ಮನವಿ ಮಾಡಿಕೊಂಡರು. ಮುಂದಿನ ಎರಡರಿಂದ ಮೂರು ದಿನಗಳಲ್ಲಿ ಎಲ್ಲವೂ ಯಥಾಸ್ಥಿತಿಗೆ ಬರಲಿದೆ. ಇವತ್ತು ಸಂಜೆಯೊಳಗೆ ಎರಡು ಸಾವಿರ ಬಸ್ ಸಂಚಾರ ಮಾಡಲಿವೆ. ನಾಳೆ 3ರಿಂದ4 ಸಾವಿರ ಬಸ್​ಗಳು ಸಂಚಾರ ನಡೆಸಲಿವೆ. ನಾಡಿದ್ದು 5 ಸಾವಿರಕ್ಕೂ ಹೆಚ್ಚು ಬಸ್​ಗಳು ಸಂಚರಿಸಲಿವೆ ಎಂದು ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ವಿಶ್ವಾಸ ವ್ಯಕ್ತಪಡಿಸಿದರು. ಮುಷ್ಕರದ ನಡುವೆಯೂ ರಾಜ್ಯದಲ್ಲಿ ಕೆಲ ಬಸ್‌ಗಳ ಸಂಚರಿಸಿವೆ. ಇಂದು ಮಧ್ಯಾಹ್ನ 2 ಗಂಟೆಯವರೆಗೆ 2,110 ಬಸ್‌ಗಳು ಸಂಚಾರ ಮಾಡಿವೆ. 1,000 ಕೆಎಸ್‌ಆರ್‌ಟಿಸಿ, 521 ಎನ್‌ಇಕೆಆರ್‌ಟಿಸಿ, 253 ಬಿಎಂಟಿಸಿ, 336 ಎನ್​ಡಬ್ಲ್ಯುಕೆಆರ್​ಟಿಸಿ ಬಸ್​ಗಳು ಸಂಚರಿಸಿವೆ.

Spread the love
Leave A Reply

Your email address will not be published.

Flash News