ನಾಳೆಯೂ ಮುಂದುವರಿಯಲಿದೆ ಮುಷ್ಕರ; ಕೋಡಿಹಳ್ಳಿ ಚಂದ್ರಶೇಖರ್

0

ಬೆಂಗಳೂರು: ಈಗಾಗಲೇ ಸಾರಿಗೆ ನಿಗಮಗಳ ಸಿಬ್ಬಂದಿ ನಡೆಸುತ್ತಿರುವ ಮುಷ್ಕರ 5 ದಿನ ಕಳೆದಿದೆ. ನಾಳೆಯೂ  ಮುಷ್ಕರ ಮುಂದುವರೆಯುತ್ತದೆ. ಸರ್ಕಾರಕ್ಕೆ ಉಪ ಚುನಾವಣೆ ಬಗ್ಗೆ ಚಿಂತೆ ಇದೆ, ಆದರೆ ನೌಕರರ ಸಮಸ್ಯೆ ಕಾಣಿಸುತ್ತಿಲ್ಲ. ಇಂತಹ ಸರ್ಕಾರ ಇರುವುದು ಈ ರಾಜ್ಯದ ಜನರ ದುರಂತ ಎಂದು ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್​ ಸಾರಿಗೆ ನೌಕರರ ಸಭೆ ಮುಕ್ತಾಯಗೊಂಡ ನಂತರ ಆಕ್ರೋಶ ವ್ಯಕ್ತಪಡಿಸಿದರು.

ಕೊಟ್ಟ ಮಾತು ಜಾರಿ ಮಾಡದೇ ಸರ್ಕಾರ ತಪ್ಪು ಮಾಡುತ್ತಿದೆ. ಮಾರ್ಚ್​​​ 16ರಂದು ಸರ್ಕಾರಕ್ಕೆ ನೋಟಿಸ್​ ಕೊಟ್ಟಿದ್ದೆವು. ಸರ್ಕಾರಕ್ಕೆ ಸಾಕಷ್ಟು ಕಾಲಾವಕಾಶವನ್ನೂ ಕೊಟ್ಟಿದ್ದೇವೆ. ಸರ್ಕಾರದ ಮಾತುಕತೆಗಳು ವಿಫಲವಾದಾಗ ಚಳುವಳಿಗಳು ಆರಂಭವಾಗಿವೆ. ಸಿಎಂ ಯಡಿಯೂರಪ್ಪ ಅಥವಾ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ನಮ್ಮನ್ನು ಚರ್ಚೆಗೆ ಕರೆದಿಲ್ಲ ಎಂದು ಟೀಕಿಸಿದರು. ಸರ್ಕಾರ ಸ್ಪಂದಿಸದಿರುವುದು ದುರಂತದ ಸಂಗತಿ. ನಮಗೆ ಅರ್ಧಕೂಲಿ, ಅರೆಹೊಟ್ಟೆ ಊಟ ಹಾಕುತ್ತಿದ್ದೀರಿ. ಮನೆಯಲ್ಲಿ ಯುಗಾದಿ ಊಟ ಮಾಡಲು ಆಗುತ್ತಿಲ್ಲ ಅಂತ ಹೇಳೋಕೆ ನಿಯಮಗಳ ಅಡ್ಡಿ ಬರುತ್ತಾ? ಇದಕ್ಕೆ ಎಸ್ಮಾ ಜಾರಿ ಆಗುತ್ತಾ? ಸಾರಿಗೆ ಸಂಸ್ಥೆಯ ನೌಕರರ ಸಮುದಾಯ ದೊಡ್ಡಸಂಖ್ಯೆಯಲ್ಲಿದೆ. ಇವರ ಕಷ್ಟ ನಿವಾರಣೆಗೆ ಸರ್ಕಾರ ಇಚ್ಛಾಶಕ್ತಿ ತೋರಬೇಕು. 6ನೇ ವೇತನ ಆಯೋಗ ಜಾರಿ ಮಾಡ್ತೀವಿ ಅಂತ ಸರ್ಕಾರವೇ ಒಪ್ಪಿದೆ. ನಮ್ಮನ್ನು ಸರ್ಕಾರಿ ನೌಕರರು ಅಂತ ಒಪ್ಪಲು ಆಗಲ್ಲ ಅಂತ ಹೇಳ್ತಿದ್ದಾರೆ. ಹಾಗಿದ್ರೆ ಆಂಧ್ರದಲ್ಲಿ ಹೇಗೆ ಒಪ್ಪಿಕೊಂಡ್ರು? ಇಚ್ಛಾಶಕ್ತಿಯಿದ್ರೆ ಎಲ್ಲವೂ ಸಾಧ್ಯವಿದೆ ಎಂದು ಆಗ್ರಹಿಸಿದರು

Spread the love
Leave A Reply

Your email address will not be published.

Flash News