ಕೇವಲ 24 ಗಂಟೆಯಲ್ಲಿ ಬಾಹುಬಲಿ ದಾಖಲೆ ಮುರಿದ ಅಲ್ಲು ಅರ್ಜುನ್ ನಟನೆಯ ಪುಷ್ಪ​!

0

ನಟ ಅಲ್ಲು ಅರ್ಜುನ್​ ಅಭಿಮಾನಿಗಳು ‘ಪುಷ್ಪ’ ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಈ ಸಿನಿಮಾದಲ್ಲಿ ಅಲ್ಲು ಅರ್ಜುನ್​ ಅವರು ಸಂಪೂರ್ಣ ಭಿನ್ನ ಗೆಟಪ್​ನಲ್ಲಿ ಕಾಣಿಸಿಕೊಳ್ಳಲಿದ್ದು, ಈಗಾಗಲೇ ಪೋಸ್ಟರ್​ ಮತ್ತು ಟೀಸರ್​ನಿಂದ ಕೌತುಕ ಮೂಡಿದೆ. ‘ಪುಷ್ಪ’ ಮೇಲೆ ಅಲ್ಲು ಫ್ಯಾನ್ಸ್​ಗೆ ಸಿಕ್ಕಾಪಟ್ಟೆ ನಿರೀಕ್ಷೆ ಇದೆ. ಈ ಹಿಂದೆ ಟಾಲಿವುಡ್​ನಲ್ಲಿ ಸೂಪರ್ ಹಿಟ್​ ಎನಿಸಿಕೊಂಡ ಬಾಹುಬಲಿ ಚಿತ್ರವನ್ನೂ ಪುಷ್ಪ ಮೀರಿಸಲಿದೆಯೇನೋ ಎಂಬ ಸೂಚನೆ ಸಿಗುತ್ತಿದೆ. ಅಲ್ಲು ಅರ್ಜನ್​ ಜನ್ಮದಿನದ ಸಲುವಾಗಿ ಇತ್ತೀಚೆಗೆ ಪುಷ್ಪ ಚಿತ್ರದ ಟೀಸರ್​ ಬಿಡುಗಡೆ ಆಯಿತು. ಟ್ರಕ್​ ಡ್ರೈವರ್​ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅಲ್ಲು ಅರ್ಜುನ್​ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. ಕಥಾನಾಯಕನ ಪಾತ್ರವನ್ನು ಪರಿಚಯಿಸುವ ಈ ಟೀಸರ್​ನಲ್ಲಿ ಸಾಹಸ ದೃಶ್ಯಗಳ ಝಲಕ್​ ಕೂಡ ಇದೆ. ಅದು ಫ್ಯಾನ್ಸ್​ಗೆ ತುಂಬ ಇಷ್ಟವಾಗಿದೆ. ಹಾಗಾಗಿ ಎಲ್ಲರೂ ಇದನ್ನು ಮುಗಿಬಿದ್ದು ನೋಡುತ್ತಿದ್ದಾರೆ. ಆ ಮೂಲಕ ಯೂಟ್ಯೂಬ್​ನಲ್ಲಿ ಪುಷ್ಪ ಟೀಸರ್​ ದಾಖಲೆ ಬರೆದಿದೆ.
ಕೇವಲ 24 ಗಂಟೆಗಳಲ್ಲಿ ಬರೋಬ್ಬರಿ 25 ಮಿಲಿಯನ್​ (2.5 ಕೋಟಿ) ಬಾರಿ ವೀಕ್ಷಣೆ ಕಂಡಿದೆ. ಈ ಸಾಧನೆಯನ್ನು ತೆಲುಗು ಚಿತ್ರರಂಗದ ಬೇರೆ ಯಾವುದೇ ಸಿನಿಮಾಗಳೂ ಮಾಡಿಲ್ಲ. ಬಾಹುಬಲಿ, ರಾಧೆ ಶ್ಯಾಮ್​, ಆರ್​ಆರ್​ಆರ್​ ಟೀಸರ್​ಗಳನ್ನೂ ಮೀರಿಸಿ ಪುಷ್ಪ ಟೀಸರ್ ಯಶಸ್ಸು ಕಂಡಿದೆ. 7 ಲಕ್ಷಕ್ಕೂ ಅಧಿಕ ಮಂದಿ ಇದನ್ನು ಲೈಕ್​ ಮಾಡಿದ್ದಾರೆ. ಸದ್ಯ ಈ ಟೀಸರ್​ 37 ಮಿಲಿಯನ್​ ವೀವ್ಸ್​​ ದಾಟಿ ಮುನ್ನುಗ್ಗುತ್ತಿದೆ.

Spread the love
Leave A Reply

Your email address will not be published.

Flash News