ಕೊರೊನಾ ಎರಡನೇ ಅಲೆಯ ಆತಂಕ; ಮತ್ತೆ ಲಾಕ್ ಆದ್ರೆ ಏನ್ ಗತಿ..?

0

ಬೆಂಗಳೂರು: ದೇಶದೆಲ್ಲೆಡೆ ಕೊರೊನಾ ಸೋಂಕು ಮತ್ತೆ ತೀವ್ರವಾಗುತ್ತಿದ್ದು, ಕೊವಿಡ್ 19 ರ ಎರಡನೇ ಅಲೆಗೆ ಇಡಿ ದೇಶವೇ ತತ್ತರಿಸುವ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಕಳೆದ ವರ್ಷದ ಲಾಕ್​ಡೌನ್​ ನಿಂದಲೇ ಸಾಕಷ್ಟು ನಷ್ಟವಾಗಿದ್ದು, ಇನ್ನೇನು ಜನರು ಈ ನಷ್ಟದಿಂದ ಮೇಲೆದ್ದು, ಮತ್ತೆ ಮೊದಲಿನಂತೆ ಜೀವನ ನಡೆಸಲು ಮುಂದಾಗಿದ್ದರು. ಆದರೆ ಈ ನಿರಾಳತೆಗೆ ಮತ್ತೆ ತಡೆಯೊಡ್ಡಿದಂತಾಗಿದ್ದೆ. ಈಗಾಗಲೇ ನೈಟ್ ಕಫ್ಯೂ ಜಾರಿಯಾಗಿದ್ದು, ಜನರ ವ್ಯಾಪಾರದ ಮೇಲೆ ಮತ್ತೆ ಕೊಡಲಿ ಏಟು ಬಿದ್ದಂತಾಗಿದೆ. ಹಿಂದಿನ ವರ್ಷ ಲಾಕ್​ಡೌನ್​ನಿಂದಾಗಿ ಆದ ನಷ್ಟವನ್ನು ಗಮನಿಸಿದರೆ ಮತ್ತೆ ಲಾಕ್​ಡೌನ್ ಆದರೆ ಇದರ ದುಪ್ಪಟ್ಟು ನಷ್ಟ ಎದುರಿಸಬೇಕಾಗುತ್ತದೆ ಎನ್ನುವುದು ಮಾತ್ರ ನಿಜ.​

ಕಳೆದ ವರ್ಷದ ಲಾಕ್​ಡೌನ್​ನಿಂದಾದ ನಷ್ಟ: ಬೆಂಗಳೂರಿನಲ್ಲಿ 75 ಸಾವಿರ ಜನ ಬೀದಿ ಬದಿ ವ್ಯಾಪಾರಿಗಳಿದ್ದು, ರಾಜ್ಯದಲ್ಲಿ ಒಟ್ಟು 4.5 ಲಕ್ಷ ಬೀದಿ ಬದಿ ವ್ಯಾಪಾರಿಗಳಿದ್ದಾರೆ. ಒಬ್ಬ ಬೀದಿ ಬದಿ ವ್ಯಾಪಾರಿಯ ದಿನದ ಆದಾಯ 200 ರಿಂದ 500 ರೂಪಾಯಿಯಾಗಿದ್ದು, ಕಳೆದ ಬಾರಿಯ ಲಾಕ್​ಡೌನ್​ನಿಂದ ಒಂದು ದಿನಕ್ಕೆ ಬರೋಬ್ಬರಿ 13.5 ಕೋಟಿ ರೂಪಾಯಿ ನಷ್ಟವಾಗಿತ್ತು.

Spread the love
Leave A Reply

Your email address will not be published.

Flash News