ಸಿಡಿ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್.. ಮತ್ತೆ ಹೇಳಿಕೆ ನೀಡಲು ಅವಕಾಶ ಕೇಳಿದ ಸಿಡಿ ಲೇಡಿ..

0

ಬೆಂಗಳೂರು : ಇಂದು ಎಸ್‍ಐಟಿ ಅಧಿಕಾರಿಗಳ ಮುಂದೆ ಹೇಳಿಕೆ ನೀಡಲು ಮುಂದಾದ ಸಿಡಿ ಯುವತಿ ಇದೀಗ ಮತ್ತೆ ಸಮಯಾವಕಾಶ ಕೇಳಿದ್ದಾರೆ.‎ ಹೌದು. ಇದ್ದಕ್ಕಿದ್ದಂತೆ ಇಂದು ಸಿಡಿ ಯುವತಿ ಎಸ್‍ಐಟಿ ಅಧಿಕಾರಿಗಳ ಮುಂದೆ ಬಂದು, ಈ ಹಿಂದೆ ಬಲವಂತದ ಹೇಳಿಕೆ ನೀಡಿದ್ದೇನೆ.

ಹೀಗಾಗಿ ನನಗೆ ಮತ್ತೆ ಹೇಳಿಕೆ ನೀಡಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದರು. ಆದರೆ ಇದೀಗ ಹೇಳಿಕೆ ನೀಡಲು ಕೂಡ ಸಮಯವನ್ನು ಸಿಡಿ ಯುವತಿ ಕೇಳಿದ್ದಾರೆ.ವಕೀಲರು ಬಂದು ಹೇಳಿಕೆ ಕೊಡದಂತೆ ಒತ್ತಾಯ ಹೇರಿದ್ದಾರೆ. ಹೀಗಾಗಿ ನಾನು ಇಂದು ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಲ್ಲ ಎಂದು ಹೇಳುವ ಮೂಲಕ ಯುವತಿ ಮತ್ತೆ ಸಮಯಾವಕಾಶ ಕೇಳಿದ್ದಾರೆ.ನಾನು ಮಾಡದ ತಪ್ಪಿಗೆ ನಾನು ಶಿಕ್ಷೆ ಅನುಭವಿಸಿದ್ದು, ಒತ್ತಾಯ ಪೂರ್ವಕವಾಗಿ ಹೇಳಿಕೆ ಕೊಡಿಸಿದರು. ನಂಬಿದವರಿಂದಲೇ ನಾನು ಮೋಸ ಹೋಗಿದ್ದೇನೆ. ನನ್ನ ಮರ್ಯಾದೆ ಹಾಳಾಗಿದ್ದು, ಪ್ರಕರಣ ಇಷ್ಟರ ಮಟ್ಟಿಗೆ ಆಗುತ್ತೆ ಅಂತ ನಾನು ಅಂದುಕೊಂಡಿರಲಿಲ್ಲ.

ನ್ಯಾಯ ಸಿಗುವ ನಿರೀಕ್ಷೆ ಇತ್ತು, ಆದ್ರೆ ನನಗೆ ಗೊತ್ತಿಲ್ಲದೆ ಕೆಲವೊಂದು ವಿಚಾರಗಳು ನಡೆಯಿತು. ನನ್ನ ಬೆನ್ನ ಹಿಂದೆ ನಡೆದ ವಿಚಾರ ತಿಳಿದುಕೊಳ್ಳೋದಕ್ಕೆ ಸಾಕಷ್ಟು ದಿನಗಳೇ ಆಯಿತು. ನನ್ನ ಸ್ನೇಹಿತ ಆಕಾಶ್ ಗೆ ಕೂಡ ಕೆಲವೊಂದು ವಿಚಾರ ಮುಚ್ಚು ಮರೆ ಮಾಡಿದ್ದಾರೆ ಎಂದು ಯುವತಿ ಹೇಳಿದ್ದಾರೆ ಎನ್ನಲಾಗಿದೆ. ಅಪ್ಪ-ಅಮ್ಮನಿಗೂ ಕೂಡ ನಾನು ನೋವು ನೀಡಿದ್ದೇನು. ಒಳ್ಳೆಯ ಮಗಳಾಗಬೇಕು ಅಂತ ನನ್ನ ಅಪ್ಪ ನಿರೀಕ್ಷೆ ಮಾಡಿದ್ದರು. ನನ್ನನ್ನು ಕೂಡ ಕೆಲವೊಮ್ಮೆ ದೂರ ಇಟ್ಟು ಮಾತುಕತೆ ಮಾಡಿರುವ ಬಗ್ಗೆ ಅನುಮಾನ ಇದೆ. ಆದರೆ ನಿಜವಾಗಲೂ ಅನ್ಯಾಯಕ್ಕೆ ಒಳಗಾದವಳು ನಾನು ಮಾತ್ರ. ನಾನು ಸತ್ಯವನ್ನು ಮಾತ್ರ ಹೇಳಬೇಕೆಂದು ಬಯಸಿದ್ದೀನಿ. ನನ್ನ ಈ ಹೇಳಿಕೆಗಳಿಗೆ ನಾನು ಬದ್ಧವಾಗಿರ್ತೀನಿ ಎಂದು ಯುವತಿ ಎಸ್‍ಐಟಿ ಮುಂದೆ ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Spread the love
Leave A Reply

Your email address will not be published.

Flash News