ಎಲ್ಲವೂ ಸರಿಹೋದ ತಕ್ಷಣ ಪರೀಕ್ಷೆಗಳು ಎಂದಿನಂತೆ ನಡೆಯಲಿವೆ; ಡಾ.ಅಶ್ವತ್ಥ ನಾರಾಯಣ

0

ಬೆಂಗಳೂರು: ರಾಜ್ಯದಲ್ಲಿ ಕೊವಿಡ್-19 ಎರಡನೇ ಅಲೆ ತೀವ್ರವಾಗುತ್ತಿದೆ. ಇದರಿಂದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ತಮ್ಮ ಪರೀಕ್ಷೆಗಳು ನಡೆಯುವ ಕುರಿತು ಅನುಮಾನ ಮೂಡುತ್ತಿವೆ. ಆದರೆ ಈ ಕುರಿತು ಸ್ಪಷ್ಟನೆ ನೀಡಿರುವ ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ್, ಪದವಿ, ಸ್ನಾತಕ ಪದವಿ, ಎಂಜಿನಿಯರಿಂಗ್, ಡಿಪ್ಲೋಮಾ ಮತ್ತು ಇತರ ಎಲ್ಲ ಪರೀಕ್ಷೆಗಳೂ ನಡೆಯಲಿವೆ. ಈ ಕುರಿತು ಯಾವುದೇ ಗೊಂದಲ ಬೇಡ ಎಂದು ಸ್ಪಷ್ಪಪಡಿಸಿದ್ದಾರೆ. ಸದ್ಯ ಸಾರಿಗೆ ಸಿಬ್ಬಂದಿಗಳ ಮುಷ್ಕರ, ಕೊರೊನಾ ಸೋಂಕಿನ ಹೆಚ್ಚಳದಿಂದ ಪರೀಕ್ಷೆ ನಡೆಸುವಲ್ಲಿ ಕೆಲಕಾಲ ವ್ಯತ್ಯಯವಾಗಿದೆ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಹೋದ ತಕ್ಷಣ ಪರೀಕ್ಷೆಗಳು ಎಂದಿನಂತೆ ನಡೆಯಲಿವೆ ಎಂದು ಅವರು ತಿಳಿಸಿದರು.

ರಾಜ್ಯದ ವಿವಿಧ ಭಾಗಗಳಲ್ಲಿ ಹಲವಾರು ಪೋಷಕರು ಆನ್​ಲೈನ್ ಪರೀಕ್ಷೆ ನಡೆಸುವಂತೆ ಬೇಡಿಕೆಯಿಡುತ್ತಿದ್ದಾರೆ, ಆದರೆ ಕರ್ನಾಟಕದಲ್ಲಿ ಆನ್​ಲೈನ್ ಪರೀಕ್ಷೆ ನಡೆಸುವುದಿಲ್ಲ. ಪರಿಸ್ಥಿತಿ ಹತೋಟಿಗೆ ಬಂದ ನಂತರ ಆಫ್​ಲೈನ್​ನಲ್ಲೇ ಪರೀಕ್ಷೆ ನಡೆಸುತ್ತೇವೆ. ನಮ್ಮ ಸದ್ಯದ ವ್ಯವಸ್ಥೆಯಲ್ಲಿ ಆನ್​ಲೈನ್ ಪರೀಕ್ಷೆ ನಡೆಸುವುದು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.

Spread the love
Leave A Reply

Your email address will not be published.

Flash News