ಮುಂಬೈನ ಸ್ಥಿತಿ ಬೆಂಗಳೂರಿಗೆ ಬರುವ ಸಾಧ್ಯತೆ ಇದೆ: ಡಾ.ಸಿ.ಎನ್.ಮಂಜುನಾಥ್

0

ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಸರಿಯಾಗಿ ಪಾಲಿಸದೇ ಹೋದರೆ 2ನೇ ಅಲೆಯ ಹೊಡೆತದಿಂದ ಈಗಾಗಲೇ ತತ್ತರಿಸಿರುವ ಮುಂಬೈನ ಸ್ಥಿತಿ ಬೆಂಗಳೂರಿಗೆ ಬರುವ ದಿನ ದೂರವಿಲ್ಲ ಎಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ, ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸದಸ್ಯ ಡಾ.ಸಿ.ಎನ್.ಮಂಜುನಾಥ್ ಎಚ್ಚರಿಸಿದ್ದಾರೆ. ಮುಂಬೈನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿದ ಹಿನ್ನೆಲೆ, ಅಲ್ಲಿ ವೈದ್ಯಕೀಯ ಸವಲತ್ತುಗಳ ಕೊರತೆ ಸೃಷ್ಟಿಯಾಗಿದೆ. ಸದ್ಯದ ಸ್ಥಿತಿಯಲ್ಲಿ ಬೆಂಗಳೂರಿನಲ್ಲಿ ಸಾಕಷ್ಟು ವೈದ್ಯಕೀಯ ಸೌಲಭ್ಯ ಲಭ್ಯವಿದ್ದರೂ ಸೋಂಕು ಬಹು ವೇಗವಾಗಿ ಹಬ್ಬುತ್ತಿರುವುದು ಆತಂಕ ಹುಟ್ಟಿಸಿದೆ ಎಂದು ಹೇಳಿದ್ದಾರೆ. 2ನೇ ಅಲೆಯಲ್ಲಿ ಮರಣ ದರ ಕಡಿಮೆ ಇದೆ ಎಂಬುದು ಧನಾತ್ಮಕ ಅಂಶ. ಆದರೆ ಸೋಂಕು ಹಬ್ಬುವ ವೇಗ ತೀವ್ರವಾಗಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ದೊಡ್ಡ ಮಟ್ಟದಲ್ಲಿ ಏರಿಕೆ ಆಗಿದೆ. ಸೋಂಕಿನ ಹರಡುವಿಕೆಗೆ ಲಗಾಮು ಹಾಕದಿದ್ದರೆ ರಾಜ್ಯ ಸಂಕಷ್ಟಕ್ಕೆ ಸಿಲುಕಬಹುದು ಎಂದು ಡಾ.ಮಂಜುನಾಥ್ ಅಭಿಪ್ರಾಯ ಪಟ್ಟಿದ್ದಾರೆ. ಜನರಿಗೆ ಕೋವಿಡ್ ವ್ಯಾಪಕವಾಗಿ ಹರಡಿರುವ ಬಗ್ಗೆ ಮಾಹಿತಿ ಇದ್ದರೂ, ಸೋಂಕು ಬಾರದಂತೆ ತಡೆಯಲು ಯಾವ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂಬ ಸಂಪರ‍್ಣ ತಿಳವಳಿಕೆ ಇದ್ದರೂ ಕೂಡ ನಿರ್ಲಕ್ಷ್ಯ ಧೋರಣೆ ತಾಳುತ್ತಿದ್ದಾರೆ. ಜನರು ತಮ್ಮ ವರ್ತನೆಯನ್ನು ಬದಲಾಯಿಸಿಕೊಳ್ಳಲೇ ಬೇಕು. ಸಾರ್ವಜನಿಕ ಸಮಾರಂಭ, ಗುಂಪುಸೇರುವ ಚಟುವಟಿಕೆ ಮತ್ತು ಜನ ದಟ್ಟಣೆಯ ಪ್ರದೇಶಗಳಿಂದ ಜನರು ದೂರ ಇರಬೇಕು ಎಂದು ಡಾ.ಮಂಜುನಾಥ್ ತಿಳಿಸಿದರು.

Spread the love
Leave A Reply

Your email address will not be published.

Flash News