ಇದೆಂಥಾ ನ್ಯಾಯ..?!  ರಿಪೋರ್ಟರ್ಸ್ ಗಳಿಂದ ಕಾರು ಕಸಿದುಕೊಂಡ ಕನ್ನಡ ನ್ಯೂಸ್ ಚಾನೆಲ್ – ಲಕ್ಷ ಲಕ್ಷ ಸಂಬಳದ ಜತೆಗೆ ಆಂಕರ್ಸ್ ಗಳಿಗೆ  ರೆಡ್ ಕಾರ್ಪೆಟ್ ಮರ್ಯಾದೆ..!!

0

ಬೆಂಗಳೂರು:ಒಂದು ಚಾನೆಲ್ ಗೆ ರಿಪೋರ್ಟರ್ಸ್ ಮುಖ್ಯವೋ…ಅಥವಾ ಆಂಕರ್ಸ್ ಇಂಪಾರ್ಟೆಂಟೋ..ಎರಡು ಕಣ್ಣುಗಳಲ್ಲಿ ಯಾವುದು ಮುಖ್ಯ..ಇನ್ನ್ಯಾವುದು ಅಮುಖ್ಯವೋ ಎನ್ನುವಷ್ಟು ಕ್ಲೀಷೆಯ ಪ್ರಶ್ನೆಯಾಗ ಬಹುದೇನೋ ಇದು..ಇಬ್ಬರೂ ಜೋಡೆತ್ತುಗಳಿದ್ದಂತೆ ಎಂಬ ಉತ್ತರ ದೊರೆತರೂ,ಬದಲಾಗಿರುವ ವಿಷ್ಯುಯೆಲ್ ಮೀಡಿಯಾದ ಪರಿಭಾಷೆಯಲ್ಲಿ  ಗ್ಲ್ಯಾಮರಸ್ ಆಗಿ ಕಾಣೋ ಆಂಕರ್ಸ್ ಗಳದೇ ಒಂದು ಕೈ ಮೇಲೆ ಎನ್ನುವುದು ಒಪ್ಪಿಕೊಳ್ಳಲೇಬೇಕಾದ ಸತ್ಯ..

ಕಷ್ಟಪಟ್ಟು ಸುದ್ದಿ ಮಾಡಿಕೊಂಡು ಬರೋದು ನಾವು..ಸ್ಕ್ರೀನ್ ಮುಂದೆ ಕುತ್ಕೊಂಡು ತಮ್ಮ ಸ್ಟೈಲ್ ನಲ್ಲಿ ಅದನ್ನು ಪ್ರಸೆಂಟ್ ಮಾಡಿ ಪ್ರಶಂಸೆ ಗಿಟ್ಟಿಸೋದು ಆಂಕರ್ಸಾ..ಇದು ಸುದ್ದಿ ಚಾನೆಲ್ ಗಳಲ್ಲಿ ರಿಪೋರ್ಟರ್ಸ್ ಗಳ ಮಾಮೂಲು ಆರೋಪ.ಈ ವಿಷಯದಲ್ಲಿ ಬಹುತೇಕ ಮ್ಯಾನೇಜ್ಮೆಂಟ್ಸ್ ಕೂಡ ನಮ್ಮ ಚಾನೆಲ್ ಗೆ ಟಿಆರ್ ಪಿ ಮುಖ್ಯ,ಹಾಗಾಗಿ ಸುಂದರವಾಗಿ ಕಾಣೋ ಆಂಕರ್ಸೇ ನಮಗೆ ಮುಖ್ಯ ಎಂದ್ಹೇಳಿ ಕೈತೊಳೆದುಕೊಂಡು ಬಿಡ್ತವೆ.

ಟಿವಿ5 ನಲ್ಲಿರುವ ಉತ್ತಮ ನಿರೂಪಕರ ದಂಡು
                       ಟಿವಿ5  ನಲ್ಲಿರುವ ಉತ್ತಮ ನಿರೂಪಕರ ದಂಡು

ಹೋಗ್ಲಿ ಬಿಡಿ..ಚಾನೆಲ್ ಗೆ ಇಬ್ಬರೂ ಜೋಡೆತ್ತುಗಳಿದ್ದಂತೆ..ಎಂದೇ ಒಪ್ಪಿ ಕೊಳ್ಳೋಣ,ಆದ್ರೆ ಈ  ಚಾನೆಲ್ ವೊಂದರ ಕಥೆ ಮಾತ್ರ ಭಿನ್ನ.ಏಕೆಂದ್ರೆ ಈ ಚಾನೆಲ್ ಗೆ ರಿಪೋರ್ಟರ್ಸ್ ಗಿಂತ ಆಂಕರ್ಸ್ ಗಳೇ ಮುಖ್ಯ ಎನಿಸುತ್ತದೆ. ಹಾಗಾಗಿನೇ ರಿಪೋರ್ಟರ್ಸ್ ಗಳು ದಿನವಿಡೀ ಸುದ್ದಿಗಾಗಿ ತಮ್ಮದೇ ಟೂ ವೀಲ್ಹರ್ ನಲ್ಲಿ ಕಷ್ಟಪಡುತ್ತಿದ್ದರೆ,ಆಂಕರ್ಸ್ ಗಳಿಗೆ ಮಾತ್ರ ಲಕ್ಷಾಂತರ ಹಣ ಕೊಟ್ಟು ಅವರನ್ನು ಉಪ್ಪರಿಗೆ ಮೇಲೆ ಪ್ರತಿಷ್ಟಾಪಿಸುವ ಕೆಲಸ ನಡೆಯುತ್ತಿದೆ ಎನ್ನುವ ಆರೋಪ ಚಾನೆಲ್ ನ ಕೆಲ ಸಿಬ್ಬಂದಿಯಿಂದ್ಲೇ ಕೇಳಿಬಂದಿದೆ.

ಇದನ್ನು ಕನ್ನಡ ನ್ಯೂಸ್ ಚಾನೆಲ್ ವೊಂದರ ದುರಂತ ಎಂದೇ ವಿಶ್ಲೇಷಿಸಲಾ ಗುತ್ತಿದೆ.ಚಾನೆಲ್ ಆರ್ಥಿಕವಾಗಿ ಕಷ್ಟದಲ್ಲಿದೆ ಎನ್ನುವ ಕಾರಣಕ್ಕೆ ಬಹುತೇಕ ಸಿಬ್ಬಂದಿಗೆ ಸೋಡಾ ಚೀಟಿ ಕೊಟ್ಟ ಚಾನೆಲ್ ನ ಆಡಳಿತ ಮಂಡಳಿ,ಅಟ್ಲೀಸ್ಟ್ ಉಳಿಸಿಕೊಂಡವರಿಗಾದ್ರೂ ನ್ಯಾಯಯುತ ಸವಲತ್ತು ಕೊಡ್ಬೇಕಿತ್ತು.ಆದ್ರೆ ಮಾಡಿದ್ದು ಮಾತ್ರ ಅಮಾನವೀಯ ಕೆಲಸ ಎನ್ನಲಾಗ್ತಿದೆ.

ನೂರಾರು ಕಿಲೋಮೀಟರ್ ವಿಸ್ತೀರ್ಣ ಇರುವ ಬೆಂಗಳೂರನ್ನು ಸುದ್ದಿಗಾಗಿ ಸುತ್ತೊಕ್ಕೆ ಎಲ್ಲಾ ಚಾನೆಲ್ ಗಳು ಕಾರುಗಳನ್ನು ನೀಡುತ್ವೆ.ಆದ್ರೆ ಪಾಪ ಈ ಚಾನೆಲ್ ರಿಪೋರ್ಟರ್ಸ್ ಗಳು ಅದ್ಯಾವ ಜನ್ಮದ ಕರ್ಮವೋ ಗೊತ್ತಿಲ್ಲ,ಕಾರಿನ ಸೌಲಭ್ಯವನ್ನೇ ಕಸಿದುಕೊಂಡು ಅವರದೇ ಟೂ ವೀಲ್ಹರ್ ನಲ್ಲಿ ತೆರಳಿ ಸುದ್ದಿ ಮಾಡಿಕೊಂಡು ಬರುವಂತೆ ಫರ್ಮಾನ್ ಹೊರಡಿಸಿಬಿಟ್ಟಿತು. ಆಗೊಲ್ಲ ಎಂದವರಿಗೆ ಎಚ್ ಆರ್ ಬಳಿ ರಿಸಿಗ್ನೇಷನ್ ಕೊಟ್ಟು ತೆರಳುವಂತೆ ನಿಷ್ಟೂರವಾಗಿ ಹಾಕಿದ ಅವಾಜ್ ಗೆ ಹೆದರಿ  ಕಷ್ಟನೋ..ನಷ್ಟನೋ ಎನ್ನುವಂತೆ ಬೈಕ್ ನಲ್ಲೇ ಸುದ್ದಿ ಸಂಗ್ರಹಿಸಿ ಕೊಡುವ ಕೆಲಸ ಮಾಡುತ್ತಿದ್ದಾರಂತೆ.

ಸ್ಟಾರ್ ಚಂದನ್ ಶರ್ಮಾ
ಸ್ಟಾರ್ ಆಂಕರ್  ಚಂದನ್ ಶರ್ಮಾ
ರಮಾಕಾಂತ್
ರಮಾಕಾಂತ್
ಶ್ರೀ ಲಕ್ಷ್ಮಿ ರಾಜಕುಮಾರ್
ಶ್ರೀ ಲಕ್ಷ್ಮಿ ರಾಜಕುಮಾರ್

ಚಾನೆಲ್ ನಲ್ಲಿ ಕೆಲಸ ಮಾಡುವ ಎಲ್ಲರನ್ನೂ ಸಮಾನವಾಗಿ ದುಡಿಸಿಕೊ ಳ್ಳುವ,ನೋಡಿಕೊಳ್ಳುವ ಕೆಲಸ ಮಾಡಿದಿದ್ದರೆ ಟಿವಿ-5 ರಿಪೋರ್ಟರ್ಸ್ ಕೊತ ಕೊತ ಕುದಿಯುತ್ತಿರಲಿಲ್ಲವೇನೋ..ಒಂದು ಕಣ್ಣಿಗೆ ಬೆಣ್ಣೆ..ಮತ್ತೊಂದು ಕಣ್ಣಿಗೆ ಸುಣ್ಣ ಎನ್ನುವ ತಾರತಮ್ಯ ಮಾಡಿದ್ದೇ ಈಗ ಬಹುದೊಡ್ಡ ವಿವಾದಕ್ಕೆ ಕಾರಣವಾಗಿದೆ.

ಏಕೆಂದ್ರೆ ಸಂಬಳ-ಪುಡಿಗಾಸಿನ ಪೆಟ್ರೋಲ್ ಅಲಯನ್ಸ್ ಕೊಟ್ಟು ಕೆಲಸ ಮಾಡಿಸಿಕೊಳ್ಳುತ್ತಿರುವ ಇದೇ ಮ್ಯಾನೇಜ್ಮೆಂಟ್, ಟಿವಿ ಪರದೆಗಳನ್ನು ರಂಗೀನ್ ಗೊಳಿಸೊಕ್ಕೆ  ಬೇರೆ ಬೇರೆ ಚಾನೆಲ್ ಗಳಿಂದ ಆಂಕರ್ಸ್ ಗಳನ್ನು ಅವರು ಕೇಳಿದಷ್ಟು ಹಣವನ್ನು ಖಂಜೂಸ್ ತನ ತೋರದೆ ಕರೆ ತಂದು,ತೆರೆ ಮೇಲೆ ಅವರನ್ನು ರಾರಾಜಿಸುವಂತೆ ಮಾಡಿರುವುದು ರಿಪೋರ್ಟರ್ಸ್ ಗಳನ್ನು ನಿಗಿನಿಗಿ ಕೆಂಡ ಮಾಡಿದೆಯಂತೆ.

ಈಗಾಗ್ಲೇ ಚಾನೆಲ್ ನಲ್ಲಿ ಒಂದಷ್ಟು ಆಂಕರ್ಸ್ ಗಳು ಕೆಲಸ ಮಾಡುತ್ತಿದ್ದಾರೆ. ಅವರ್ಯಾರು ಜರಿಯುವಷ್ಟು ಕಳಪೆಯೇನಲ್ಲ.ಚಾನೆಲ್ ಉತ್ತಮ ಸ್ಥಿತಿಯ ಲ್ಲಿದ್ದ ದಿನಗಳಿಂದ್ಲೂ ಸಾಮರ್ಥ್ಯ ಮೀರಿ ಕೆಲಸ ಮಾಡಿದವರೇ.. ಚಾನೆಲ್ ಉತ್ತಮ ಟಿಆರ್ ಪಿ ಪಡೆಯುವುದಕ್ಕೆ ಕಾರಣಕರ್ತರಾದವ್ರೇ..ಹೆಚ್ಚು ಕಡ್ಮೆ4-5 ಆಂಕರ್ಸ್ ಗಳು ಹಾಲಿ ಉತ್ತಮವಾದ ರೀತಿಯಲ್ಲೇ ಕೆಲಸ ಮಾಡುತ್ತಿರುವಾಗ ಹೆಚ್ಚುವರಿ ಆಂಕರ್ಸ್ ಗಳು,ಅದು ಜರ್ನಲಿಸಂ ಮಾರುಕಟ್ಟೆಯಲ್ಲಿ “ದುಬಾರಿ” ಎನಿಸಿರುವ ಆಂಕರ್ಸ್ ಗಳನ್ನು ಕರೆ ತರಲಾಗಿದೆ.ಇದು ಚಾನೆಲ್ ಆರಂಭವಾದಾಗಿನಿಂದ್ಲೂ ಕೆಲಸ ಮಾಡುತ್ತಿರುವ ಮೂಲ ಆಂಕರ್ಸ್ ಗಳಲ್ಲಿ ಬೇಸರ-ಸಿಟ್ಟು-ಆಕ್ರೋಶ-ಅಸಹನೆ-ಅಸಮಾಧಾನ ಎಲ್ಲವನ್ನೂ ಸೃಷ್ಟಿಸಿದೆಯಂತೆ.

ಇವರನ್ನೆಲ್ಲಾ ಕರೆ ತರುವ “ದುಬಾರಿ”ತನದ ಅವಶ್ಯಕತೆ ಏನಿತ್ತು..? ಇದು ಚಾನೆಲ್ ನಲ್ಲಿರುವ ಸಿಬ್ಬಂದಿಗಷ್ಟೇ ಅಲ್ಲ,ಚಾನೆಲ್ ನ ಹೊರಗೆ ಇರುವ ಪ್ರತಿಯೋರ್ವರನ್ನು ಕಾಡುವ ಪ್ರಶ್ನೆ. ಟಿವಿ-5 ಚಾನೆಲ್ ನ ಆರ್ಥಿಕತೆ ಹೇಳಿಕೊಳ್ಳುವಷ್ಟು ಚೆನ್ನಾಗಿಲ್ಲ,ಮಾದ್ಯಮ ಜಗತ್ತಿನಲ್ಲಿ “ಮುಳುಗುತ್ತಿರುವ ಹಡಗು”ಎಂದೇ ವಿಶ್ಲೇಷಿಸಲಾಗುತ್ತಿರುವ  ಚಾನೆಲ್ ನ್ನು ಉಳಿಸಿಕೊಂಡು ಹೋಗುವುದೇ ಕಷ್ಟಸಾಧ್ಯ ಎನ್ನುವಂತ ಪರಿಸ್ತಿತಿಯಿದೆಯಂತೆ.

ಒಂದೊಂದು ಪೈಸೆ ಹಣವನ್ನು ಉಳಿಸಬೇಕಾದ ಸಧ್ಯದ ಸ್ತಿತಿಯಲ್ಲಿ ರಿಪೋರ್ಟರ್ಸ್ ಗಳಿಂದ ಕಾರು ಕಸಿದುಕೊಂಡು,ಅವರ ಕೈಗೆ ಬೈಕ್ ಕೊಟ್ಟು ಕೆಲಸ ಮಾಡಿಸಿಕೊಳ್ಳುತ್ತಿರುವ ಮ್ಯಾನೇಜ್ಮೆಂಟ್ ಚಂದನ್ ಶರ್ಮಾ,ರಮಾಕಾಂತ್,ಶ್ರೀ ಲಕ್ಷ್ಮಿ ರಾಜ್ ಕುಮಾರ್ ಅವರಂಥ ದುಬಾರಿ ಆಂಕರ್ಸ್ ಗಳನ್ನು ತಂದು ಕೂರಿಸುವ ಅವಶ್ಯಕತೆ ನಿಜಕ್ಕೂ ಇತ್ತೆ? ಎನ್ನುವುದು ಚಾನೆಲ್ ಸಿಬ್ಬಂದಿಯ ಪ್ರಶ್ನೆ.

ರಮಾಕಾಂತ್, ಚಂದನ್ ಶರ್ಮಾ ಹಾಗೂ ಶ್ರೀ ಲಕ್ಷ್ಮಿ ಅವರಂಥ ಆಂಕರ್ಸ್ ಗಳ ಫರ್ಫಾಮೆನ್ಸ್,ಸಾಮರ್ಥ್ಯ,ಅರ್ಹತೆ ಬಗ್ಗೆ ಯಾವುದೇ ಸಣ್ಣ ಆಕ್ಷೇಪವಿಲ್ಲ. ತೆರೆ ಮೇಲೆ ತಮ್ಮ ಪ್ರದರ್ಶನದಿಂದ್ಲೇ ವೀಕ್ಷಕರನ್ನು ಸೆಳೆದಿಡುವ ಕೆಪಾಸಿಟಿ ಇವರಿಗಿದೆ.ಇವರೆಲ್ಲರಿಗೂ ತಮ್ಮದೇ ಆದ ಫ್ಯಾನ್ ಫಾಲೋವರ್ಸ್ ಕೂಡ ಇದ್ದಾರೆ. ಆದ್ರೆ..ಚಾನೆಲ್ ನ ಸಧ್ಯದ ಸ್ಥಿತಿಯಲ್ಲಿ ರಿಪೋರ್ಟರ್ಸ್ ಗಳನ್ನು ಬಿಸಿಲು-ಮಳೆ-ಚಳಿಗಾಳಿಯಲ್ಲಿ ದುಡಿಯೊಕ್ಕೆ ಬಿಟ್ಟು ಹತ್ತಿರತ್ತಿರ ಪ್ರತಿಯೋರ್ವರನ್ನು ಲಕ್ಷದಷ್ಟು ಸ್ಯಾಲರಿ ಕೊಟ್ಟು ಪ್ರತಿಷ್ಟಾಪಿಸುವ ಅವಶ್ಯಕತೆ ಏನಿತ್ತು..? ಎನ್ನುವ ಪ್ರಶ್ನೆ ಪರಿಸ್ಥಿತಿಯನ್ನು ಅವಲೋಕಿಸಿದಾಗ ಉದ್ಭವವಾಗುತ್ತೆ.

ಸಾಮಾನ್ಯವಾಗಿ ಇತ್ತೀಚೆಗೆ ಟಿವಿ 5 ಚಾನೆಲ್ ನ್ನು ನೋಡುವಾಗ  ಪ್ರೇಕ್ಷಕರಲ್ಲಿ ಇದೇನು ಸುದ್ದಿ ಚಾನೆಲ್ಲೋ..ಅಥವಾ ಆಂಕರ್ಸ್ ಗಳ ಚಾನೆಲ್ಲೊ ಎನ್ನುವ ಗೊಂದಲ ಮೂಡುತ್ತದೆಯಂತೆ.ರಿಪೋರ್ಟರ್ಸ್ ಗಿಂತ ಆಂಕರ್ಸ್ ಗಳೇ ಹೆಚ್ಚು ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತಿದ್ದಾರಂತೆ.ಇದು ರಿಪೋರ್ಟರ್ಸ್ ಗಳಲ್ಲಿ ಅಷ್ಟೇ ಅಲ್ಲ,ಚಾನೆಲ್ ನಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೂ ಬೇಸರ-ಸಿಟ್ಟು ತರಿಸಿದೆಯಂತೆ.

ನಮಗಿಲ್ಲದ ಪ್ರಾತಿನಿಧ್ಯತೆ ಅವರಿಗೇಕೆ ಎಂದು ಪ್ರಶ್ನೆ ಮಾಡಿಕೊಳ್ಳುತ್ತಿದ್ದಾರಂತೆ..ಚಾನೆಲ್ ವೊಂದರ ಬೆಳವಣಿಗೆ ದೃಷ್ಟಿಯಲ್ಲಿ ಟಿವಿ 5  ಮ್ಯಾನೇಜ್ಮೆಂಟ್, ರಿಪೋರ್ಟರ್ಸ್- ಆಂಕರ್ಸ್ ಗಳಲ್ಲಿ ತಾರತಮ್ಯ ಮಾಡುತ್ತಿರುವುದು ಸರಿನಾ..? ಎಂಬ ಪ್ರಶ್ನೆ ನಮಗು ಮೂಡುತ್ತದೆ. 

Spread the love
Leave A Reply

Your email address will not be published.

Flash News