ಕರ್ನಾಟಕದಲ್ಲಿ ಈಗ ಉಪಚುನಾವಣೆ ಮಾಡಬಾರದಿತ್ತು: ವಿಪಕ್ಷ ನಾಯಕ ಸಿದ್ದರಾಮಯ್ಯ

0

ಬೆಂಗಳೂರು: ಕೊರೊನಾ ನಿರ್ವಹಣೆ ವೈಫಲ್ಯಕ್ಕೆ ರಾಜ್ಯ ಸರ್ಕಾರವೇ ಹೊಣೆ. ಕರ್ನಾಟಕದಲ್ಲಿ ಈಗ ಉಪಚುನಾವಣೆ ಮಾಡಬಾರದಿತ್ತು. ಸದ್ಯಕ್ಕೆ ಉಪಚುನಾವಣೆ ಬೇಡವೆಂದು ಸರ್ಕಾರ ಚುನಾವಣಾ ಆಯೋಗಕ್ಕೆ ಪತ್ರ ಬರೆಯಬೇಕಿತ್ತು. ಚುನಾವಣೆ ಹಿನ್ನೆಲೆ ಅವರು ಪ್ರಚಾರಕ್ಕೆ ಹೋಗುತ್ತಿದ್ದಾರೆ. ಅವರು ಪ್ರಚಾರಕ್ಕೆ ಹೋಗದಿದ್ದರೆ ನಾವೂ ಹೋಗುತ್ತಿರಲಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಜನರು ಕಾಂಗ್ರೆಸ್​ಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಮೂರು ಕ್ಷೇತ್ರಗಳಲ್ಲು ನಾವು ಗೆಲ್ಲುತ್ತೇವೆ. ಬಿಜೆಪಿ ಪರವಾಗಿ ಜನಾಭಿಪ್ರಾಯ ಇಲ್ಲ. ಅವರು ಜನ ವಿರೋಧಿಗಳಾಗಿದ್ದಾರೆ. ಅದಕ್ಕಾಗಿ ದುಡ್ಡು ಕೊಟ್ಟು ಕೊಂಡುಕೊಳ್ಳೋಕೆ ಬಿಜೆಪಿಯವರು ಮುಂದಾಗಿದ್ದಾರೆ ಎಂದು ಮಾತನಾಡಿದ ಸಿದ್ದರಾಮಯ್ಯ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರದ ಬಗ್ಗೆ ಪ್ರತಿಕ್ರಿಯೆ ನೀಡಿದರು. ಸರ್ಕಾರ ಪ್ರತಿಷ್ಠೆಗೆ ಹೋಗಬಾರದು. ಸಾರಿಗೆ ನೌಕರರ ಜೊತೆ ರಾಜ್ಯ ಸರ್ಕಾರ ಚರ್ಚಿಸಬೇಕು. ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ ಮನವೊಲಿಸಬೇಕು. ಅವರನ್ನ ಹೆದರಿಸಿ, ಬೆದರಿಸಿ ಚಳವಳಿ ಹತ್ತಿಕ್ಕಬಾರದು ಎಂದರು. ನಂತರ ಕೊರೊನಾ ನಿಯಂತ್ರಣ ಸಂಬಂಧ ಸರ್ವಪಕ್ಷ ಸಭೆ ವಿಚಾರದ ಕುರಿತು ಮಾತನಾಡಿದ ಅವರು, ನನಗೆ ನನಗೆ ಇನ್ನೂ ಆಹ್ವಾನ ಬಂದಿಲ್ಲ. ಬಂದ ಮೇಲೆ ನೋಡುತ್ತೇನೆ. ರಾಜ್ಯದಲ್ಲಿ ಕೊರೊನಾ ಹೆಚ್ಚುತ್ತಿರುವುದು ಸರ್ಕಾರದ ವೈಫಲ್ಯ. ಹೊರಗಿನಿಂದ ಬರುವವರ ಟೆಸ್ಟ್ ಮಾಡುವುದನ್ನು ನಿಲ್ಲಿಸಿದರು. ಜಾತ್ರೆ, ಸಮಾರಂಭಗಳನ್ನು ಸರಿಯಾಗಿ ನಿಯಂತ್ರಣ ಮಾಡಿಲ್ಲ. ಉಪ ಚುನಾವಣಾ ಪ್ರಚಾರಕ್ಕೆ ನಿಯಂತ್ರಣ ಹಾಕಬೇಕಿತ್ತು. ಇದಕ್ಕೆಲ್ಲಾ ಸರ್ಕಾರವೇ ನೇರ ಹೊಣೆ. ಸೋಂಕಿತರಿಗೆ ಬೆಡ್​ಗಳು, ಐಸಿಯು ಕೊರತೆ ಆಗಬಾರದು. ಲಾಕ್​ಡೌನ್​ ಬಗ್ಗೆ ಸರ್ವಪಕ್ಷ ಸಭೆಯಲ್ಲಿ ಮಾತನಾಡುತ್ತೇನೆ ಎಂದು ತಿಳಿಸಿದರು.

Spread the love
Leave A Reply

Your email address will not be published.

Flash News