ಇನ್ನೂ ಒಂದು ತಿಂಗಳು ಪ್ರತಿಭಟನೆ ನಡೆಸಿದರೂ ಬಗ್ಗಲ್ಲ.. ಮುಷ್ಕರ ನಿರತರಿಗೆ ಸಂಬಳ ಇಲ್ಲ-ಬಿಎಸ್ ವೈ

0

ಬೆಂಗಳೂರು : ಮುಷ್ಕರನಿರತ ಸಾರಿಗೆ ನೌಕರರಿಗೆ ವೇತನ ನೀಡುವುದಿಲ್ಲ, ಅವರೊಂದಿಗೆ ಮಾತುಕತೆಯೂ ಇಲ್ಲ. ಇನ್ನೊಂದು ತಿಂಗಳು ಪ್ರತಿಭಟನೆ ನಡೆಸಿದರೂ ಆರನೇ ವೇತನ ನೀಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಅಧಿಕೃತ ನಿವಾಸ ಕಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುಗಾದಿ ಹಬ್ಬದ ಸಂದರ್ಭದಲ್ಲಿ ಈ ರೀತಿ ಮುಷ್ಕರ ಮಾಡಿ ಜನರಿಗೆ ತೊಂದರೆ ಮಾಡುತ್ತಿರುವುದನ್ನು ಕ್ಷಮಿಸಲು ಸಾಧ್ಯವಿಲ್ಲ. ಯಾವ ಕಾರಣಕ್ಕೂ ಮುಷ್ಕರನಿರತ ನೌಕರರಿಗೆ ವೇತನ ಬಿಡುಗಡೆ ಮಾಡಲ್ಲ. ಕೆಲಸ ಮಾಡಿದವರಿಗೆ ಮಾತ್ರ ವೇತನ ನೀಡಲಾಗುತ್ತದೆ. ಸಾರಿಗೆ ಸೇವೆಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಿದ್ದೇವೆ. ಯಾವ ಕಾರಣಕ್ಕೂ ಆರನೇ ವೇತನದ ಅನ್ವಯ ಸಂಬಳ ನೀಡಲು ಸಾಧ್ಯವಿಲ್ಲ. ಯಾರ ಮಾತು ಕೇಳಿಕೊಂಡು ಅವರೆಲ್ಲಾ ಪ್ರತಿಭಟನೆ ಮಾಡುತ್ತಿದ್ದಾರೆ. ಹಾಗಾಗಿ ಯಾರನ್ನೂ ಕರೆದು ಮಾತನಾಡುವ ಪ್ರಮೆಯವೇ ಇಲ್ಲ. ಇನ್ನು ಒಂದು ತಿಂಗಳು ಸತ್ಯಾಗ್ರಹ ಮಾಡಿದರೂ ಬಗ್ಗುವ ಪ್ರಮೆಯ ಇಲ್ಲ ಎಂದು ಸಂಧಾನ ಸಭೆಯ ಸಾಧ್ಯತೆಯನ್ನು ಸಿಎಂ ತಳ್ಳಿ ಹಾಕಿದರು. ಎರಡು ವಿಧಾನಸಭೆ ಚುನಾವಣಾ ಪ್ರಚಾರ ಮುಗಿಸಿ ಬಂದಿದ್ದೇನೆ. ನಾಳೆ ಹನ್ನೆರಡು ಗಂಟೆ ಮೇಲೆ ಬೆಳಗಾವಿ, ಗೋಕಾಕ್​ಗೆ ತೆರಳುತ್ತೇನೆ. ಮೂರು ಕ್ಷೇತ್ರಗಳ ಉಪಚುನಾವಣೆ ಗೆಲ್ಲುವ ಭರವಸೆ ಇದೆ. ಇಪ್ಪತ್ತು ಸಾವಿರ ಅಂತರದಿಂದ ಗೆಲುವು ಸಾಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು

Spread the love
Leave A Reply

Your email address will not be published.

Flash News