ಮತ್ತೆ ಸುಪ್ರಿಂ ಕೋರ್ಟ್ ನಲ್ಲಿ ರಫೇಲ್ ಕೇಸ್..

0

ರಫೇಲ್ ಯುದ್ಧ ವಿಮಾನ ಖರೀದಿ ವ್ಯವಹಾರದಲ್ಲಿ ಭಾರಿ ಮೊತ್ತದ ಕಮಿಷನ್ ಹಣ ಕೈ ಬದಲಾಗಿದ್ದು, ಈ ಕುರಿತು ಎಫ್.ಐ.ಆರ್ ದಾಖಲಿಸಿ ಅಧಿಕೃತ ರಹಸ್ಯ ಕಾಯಿದೆ ಅಡಿಯಲ್ಲಿ ತನಿಖೆಗೆ ಆದೇಶ ನೀಡಬೇಕೆಂದು ಕೋರಿ ಹೊಸ ಅರ್ಜಿಯೊಂದು ಸಲ್ಲಿಕೆಯಾಗಿದ್ದು, ಸುಪ್ರೀಂ ಕೋರ್ಟ್ ಎರಡು ವಾರಗಳ ನಂತರ ಅದರ ವಿಚಾರಣೆ ನಡೆಸಲು ನಿರ್ಧರಿಸಿದೆ. 2006 ರಲ್ಲಿ ಫ್ರಾನ್ಸ್ ಮತ್ತು ಭಾರತದ ನಡುವೆ ಒಪ್ಪಂದದಲ್ಲಿ ರಫೇಲ್ ತಯಾರಕ ಸಂಸ್ಥೆ ಡಸಾಲ್ಟ್ ಏವಿಯೇಷನ್ ನಿಂದ ಭಾರತದ ಮಧ್ಯವರ್ತಿಯೊಬ್ಬರಿಗೆ 1.1 ದಶಲಕ್ಷ ಯೂರೋ ಕಮಿಷನ್ ಹಣ ಹರಿದು ಬಂದಿದೆ. ಇದೊಂದು ಬೃಹತ್ ಮೊತ್ತದ ಭ್ರಷ್ಟಾಚಾರ ಎಂದು ಫ್ರಾನ್ಸ್ ನ ಭ್ರಷ್ಟಾಚಾರ ವಿರೋಧಿ ಮಾಧ್ಯಮ ಸಂಸ್ಥೆಯೊಂದು ವರದಿ ಮಾಡಿತ್ತು. ಈ ಕುರಿತಂತೆ ಸಮಗ್ರ ತನಿಖೆಗೆ ಆದೇಶ ನೀಡುವ ಅಗತ್ಯ ಇದೆ ಎಂದು ಪ್ರತಿಪಾದಿಸಿ ವಕೀಲ ಮನೋಹಲ್ ಲಾಲ್ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಮುಖ್ಯ ನ್ಯಾಯ ಮೂರ್ತಿ ಎಸ್.ಎ.ಬೋಬ್ಡೆ ಪೀಠದ ಮುಂದೆ ಸೋಮವಾರ ಈ ಅರ್ಜಿವಿಚಾರಣೆಗೆ ಬಂದಾಗ, ಎರಡು ವಾರ ಬಳಿಕ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ನ್ಯಾಯಪೀಠ ತಿಳಿಸಿತು. ಈ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಥಮ ಪ್ರತಿವಾದಿಯನ್ನಾಗಿ ಮಾಡಲಾಗಿದೆ. ಸುಶೇನ್ ಮೋಹನ್ ಗುಪ್ತಾ, ಡೆಫ್ ಸಿಸ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್, ಕೇಂದ್ರ ಸರಕಾರ ಮತ್ತು ಸಿಬಿಐ ಸಂಸ್ಥೆಯನ್ನು ನಂತರದ ಪ್ರತಿವಾದಿಗಳೆಂದು ಅರ್ಜಿದಾರರು ಗುರುತಿಸಿದ್ದಾರೆ.
ರಫೇಲ್ ಕಮಿಷನ್ ಆರೋಪ ಕೇಳಿ ಬಂದಿರುವ ನಡುವೆಯೇ ಫ್ರಾನ್ಸ್ ವಿದೇಶಾಂಗ ಸಚಿವ ಜೀನ್ ವ್ಯಾಸ್ ಲಿ ಡ್ರಿಯಾನ್ ಮೂರು ದಿನಗಳ ಭಾರತ ಪ್ರವಾಸ ಕೈಗೊಂಡಿದ್ದಾರೆ. ಮಂಗಳವಾರದಿಂದ ಗುರುವಾರದವರೆಗೆ ಅವರು ಭಾರತದಲ್ಲಿದ್ದು ಹಲವು ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ. ಜೀನ್ ಭೇಟಿಯೊಂದಿಗೆ ಉಭಯ ದೇಶಗಳ ನಡುವಿನ ರಕ್ಷಣೆ, ವಾಣಿಜ್ಯ, ಹವಾಮಾನ, ವಲಸೆ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳ ಸಹಕಾರ ಸಹಭಾಗಿತ್ವಕ್ಕೆ ಹೆಚ್ಚಿನ ಬಲ ಲಭಿಸಲಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

Spread the love
Leave A Reply

Your email address will not be published.

Flash News