ಸಿಡಿ ಲೇಡಿ ಲಾಯರ್ ಜಗದೀಶ್ ಬಿಗ್ ಬಾಸ್ ಗೆ ಎಂಟ್ರಿ?

0

ಕನ್ನಡದ ದೊಡ್ಡ ಟೆಲಿವಿಜನ್ ರಿಯಾಲಿಟಿ ಶೋ ಬಿಗ್ ಬಾಸ್ ಗೆ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಸಿಲುಕಿರುವ ಸಂತ್ರಸ್ಥ ಯುವತಿಯ ಲಾಯರ್ ಜಗದೀಶ್ ರನ್ನು ಕಲರ್ಸ್ ಕನ್ನಡದ ಮುಖ್ಯಸ್ಥ ಪರಮೇಶ್ ಗುಂಡ್ಕಲ್ ಅಪ್ರೋಚ್ ಮಾಡಿದ್ದಾರಂತೆ. ಬಿಗ್ ಬಾಸ್ ಸೀಸನ್ 8 ಕಳೆದ ಫೆಬ್ರವರಿ 28 ರಂದು ಗ್ರಾಂಡ್ ಆಗಿ ಲಾಂಚ್ ಆಗಿತ್ತು. ಈ ಸಲ ಬಿಗ್ ಬಾಸ್ ನ ಸ್ಪರ್ಧಿಗಳಾಗಿ ಟಿಕ್ ಟಾಕ್ ಧನುಶ್ರೀ, ಶುಭಾ ಪೂಂಜಾ, ನಿಧಿ ಸುಬ್ಬಯ್ಯ, ಶಂಕರ್ ಅಶ್ವತ್, ರಾಜೀವ್, ಮಂಜು ಪಾವಗಡ , ದಿವ್ಯಾ ಸುರೇಶ್, ದಿವ್ಯಾ ಉರುಡುಗ, ಅರವಿಂದ್, ಗೀತಾ ಭಾರತಿ ಭಟ್, ವೈಷ್ಣವಿ, ಚಂದ್ರಕಲಾ ಮೋಹನ್, ಶಮಂತ್ ಗೌಡ, ರಘು ಗೌಡ, ಪ್ರಶಾಂತ್ ಸಂಬರಗಿ, ವಿಶ್ವನಾಥ್, ನಿರ್ಮಲಾ ಆಗಮಿಸಿದ್ದರು, ಸದ್ಯ ಇವರುಗಳಲ್ಲಿ ಕೆಲವರು ಬಿಗ್ ಬಾಸ್ ಮನೆಯಲ್ಲಿ ಉಳಿದಿಲ್ಲ. ಇನ್ನು ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಚಕ್ರವರ್ತಿ ಚಂದ್ರಚೂಡ್, ಪ್ರಿಯಾಂಕ ತಿಮ್ಮೇಶ್, ಜಯಂತಿ ಅಡಿಗ ಆಗಮಿಸಿದ್ದಾರೆ. ಇದೀಗ ಸಿಡಿ ಲೇಡಿ ಲಾಯರ್ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡ್ತಾರಾ ಎಂಬ ಸುದ್ದಿ ಕುತೂಹಲ ಮೂಡಿಸಿದೆ.

Spread the love
Leave A Reply

Your email address will not be published.

Flash News