ಕೊರೊನಾ ಸೋಂಕಿಗೆ ತುತ್ತಾದ “ಮ್ಯಾಜಿಕಲ್ ಕಂಪೋಸರ್” ಅರ್ಜುನ್ ಜನ್ಯ ಆರೋಗ್ಯ ಏರುಪೇರು: ಚಿತ್ರರಂಗ ಕಳವಳ: ಶೀಘ್ರ ಚೇತರಿಕೆಗೆ ಹರಕೆ-ಆರೈಕೆ…

0

ಬೆಂಗಳೂರು: ಕನ್ನಡ ಚಿತ್ರರಂಗದ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿಲ್ಲ ಎನ್ನುವ ಅಘಾತಕಾರಿ ಸುದ್ದಿ ಹೊರಬಿದ್ದಿ ದೆ.ಕೊರೊನಾ ಸೋಂಕಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿರುವ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಅವರಿಗೆ ಹೃದಯಸಂಬಂಧಿ ಸಮಸ್ಯೆ ಇರುವುದರಿಂದ ವೈದ್ಯರ ಚಿಕಿತ್ಸೆಗಳು ಸಹಕಾರಿಯಾಗುತ್ತಿಲ್ಲ ಎನ್ನುವ ಮಾಹಿತಿ ಹೊರಬಿದ್ದಿದೆ.

ವರ್ಷಪೂರ್ತಿ ಅತ್ಯಂತ ಬ್ಯುಸಿಯಾಗಿ ಮ್ಯೂಸಿಕ್ ಕಂಪೋಸ್ ಮಾಡುವ ಅತ್ಯಂತ ಬ್ಯುಸಿಯೆಸ್ಟ್ ಮ್ಯೂಸಿಕ್ ಕಂಪೋಸರ್ ಅರ್ಜುನ್ ಜನ್ಯ.ತೀವ್ರ ಒತ್ತಡ ದಲ್ಲಿ ಕೆಲಸ ಮಾಡುವುದು ಸಹಜವಾಗಿ ಅವರ ರಕ್ತದೊತ್ತಡವನ್ನು ಏರುಪೇರುಗೊಳಿಸಿರುವ ಸಾಧ್ಯತೆಗಳಿವೆ.ಹಾಗಾಗಿನೇ ಅವರಿಗೆ ಕಳೆದ ಬಾರಿಯೇ ವೈದ್ಯರು ತೀವ್ರ ಒತ್ತಡದಲ್ಲಿ ಕೆಲಸ ಮಾಡದಂತೆ ಸಲಹೆ ನೀಡಿದ್ದರು.

ಆಸ್ಪತ್ರೆಯಲ್ಲಿರುವಾಗಲೂ ಸಂಗೀತ ನಿರ್ದೆಶನದ ಬಗ್ಗೆಯೇ ಮಾತನಾಡುತ್ತಿದ್ದ ಜನ್ಯರನ್ನು ಸಂಭಾಳಿಸಲು ಅವರ ಪತ್ನಿ ಗೀತಾ ಸಾಕಷ್ಟು ಕಷ್ಟಪಟ್ಟಿ ದ್ದರು.ವೈದ್ಯರು ಹಾಗೂ ಪತ್ನಿಯ ಮಾತಿಗೆ ಕಟ್ಟುಬಿದ್ದು ಸಂಗೀತದ ಬಗೆಗಿನ ತಮ್ಮ ಆಸಕ್ತಿಗೆ ಒಲ್ಲದ ಮನಸಿನಿಂದ್ಲೇ ಬ್ರೇಕ್ ಹಾಕಿಕೊಳ್ಳುತ್ತಿ ದ್ದರು.ಮನೆಗೆ ಬಂದ ಮೇಲೆ ತಮ್ಮ ಚಾಳಿ ಯನ್ನು ಮುಂದುವರೆಸಿದ್ದರು.

ಇದೀಗ ಕೊರೊನಾಕ್ಕೆ ಅವರು ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ಅವರಿಗೆ ವೈದ್ಯರು ಉತ್ತಮ ರೀತಿಯಲ್ಲಿ ಚಿಕಿತ್ಸೆ ಕೂಡ ನೀಡುತ್ತಿದ್ದಾರೆ.ಆರೋಗ್ಯ ಸ್ಥಿ ತಿ ಕೂಡ ವೈದ್ಯರ ಚಿಕಿತ್ಸೆಗೆ ಸ್ಪಂದಿಸುತ್ತಿತ್ತು.

ಆದರೆ ಹೃದಯ ಸಂಬಂಧಿ ಸಮಸ್ಯೆ ಇರುವುದರಿಂದ ಸ್ವಲ್ಪ ಮಟ್ಟಿಗಿನ ತೊಡಕಾಗುತ್ತಿದೆ ಎನ್ನಲಾಗ್ತಿದೆ. ಆದ್ರೂ ವೈದ್ಯರು ತಮ್ಮ ಶ್ರಮವನ್ನು ಮುಂದುವರೆಸಿ ಮೊದಲಿನ ಚೇತರಿಕೆ ಸ್ಥಿತಿಗೆ ತರೊಕ್ಕೆ ಎಲ್ಲಿಲ್ಲದೆ ದುಡಿಯುತ್ತಿದ್ದಾರೆ.

ಅರ್ಜುನ್ ಜನ್ಯ ಅವರ ಆರೋಗ್ಯ ಸ್ತಿತಿ  ಕೊರೊನಾಗೆ ಸ್ಪಂದಿಸದಿರಲು ಅವರು ಹೃದಯ ಹಾಗೂ ಶ್ವಾಸಕೋಶ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿರು ವುದೇ ಕಾರಣ ಎನ್ನಲಾಗಿದೆ.ಕಳೆದ ವರ್ಷ ಇದೇ ಕಾರಣಕ್ಕೆ ಅವರು ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿ ವಾರದ ನಂತರ ಗುಣಮುಖರಾಗಿ ವಾಪಸ್ಸಾಗಿದ್ದ ರು.

ಸ್ವಲ್ಪ ಚೇತರಿಕೆ ಕಾಣಿಸಿಕೊಳ್ಳುತ್ತಿದ್ದಂತೆ ಮತ್ತದೇ ಲವಲವಿಕೆಯಲ್ಲಿ ಬ್ಯುಸಿಯಾಗಿದ್ದರು.ತಮ್ಮ ಆರೋಗ್ಯದ ಬಗ್ಗೆ ನಿಷ್ಕಾಳಜಿ ಮಾಡಲಾರಂಭಿಸಿದ್ದ ರೆನ್ನುವ ಮಾತುಗಳಿವೆ.

ಬಿಡುವಿಲ್ಲದ ಕೆಲಸದ ನಡುವೆಯು ಪತ್ನಿ ಗೀತಾ ಜತೆ ಅರ್ಜುನ್ ಜನ್ಯಾ
ಬಿಡುವಿಲ್ಲದ ಕೆಲಸದ ನಡುವೆಯು ಪತ್ನಿ ಗೀತಾ ಜತೆ ಅರ್ಜುನ್ ಜನ್ಯಾ
ಅರ್ಜುನ್ ಜನ್ಯಾಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಡಾ. ಆದಿತ್ಯಾ ಉಡುಪ
ಅರ್ಜುನ್ ಜನ್ಯಾಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಡಾ. ಆದಿತ್ಯಾ ಉಡುಪ

ಕೊರೊನಾ ಎರಡನೇ ಅಲೆಯ ಸೋಂಕಿಗೆ ಅರ್ಜುನ್ ಜನ್ಯ ಕೂಡ ತುತ್ತಾಗಿದ್ದು ಅವರನ್ನು ಅಸ್ಪತ್ರೆಗೆ ದಾಖಲಿಸಿರುವುದು ಎಲ್ಲರಿಗೂ ತಿಳಿದ ವಿಚಾರ. ಕಳೆದ 5 ದಿನದಿಂದ್ಲೂ ಅರ್ಜುನ್ ಜನ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡುಬರುತ್ತಿಲ್ಲ ಎನ್ನಲಾ ಗಿದೆ.

ಜ್ವರ ಹಾಗೂ ಕೆಮ್ಮು ಜಾಸ್ತಿಯಾಗುತ್ತಿರುವುದರಿಂದ ವೈದ್ಯರು ಅವರ ಆರೋಗ್ಯದ ಕಾಳಜಿ ಮಾಡುತ್ತಿದ್ದಾರೆ.  ಅರ್ಜುನ್ ಜನ್ಯ ಚೇತರಿಸಿಕೊಳ್ಳಲು ಇನ್ನ ಷ್ಟು ದಿನ ಬೇಕಾಗಬಹುದು ಎನ್ನಲಾಗಿದೆ.ಅವರ ಕುಟುಂಬದವರಿಗೆ ಜನ್ಯ ಅವರ ಆರೋಗ್ಯದ ಬಗ್ಗೆ ತುಂಬಾ ಕಳವಳ ಶುರುವಾಗಿದೆ ಕೂಡ.

ಅಪಾರ ಪ್ರಮಾಣದ ಅಭಿಮಾನಿಗಳನ್ನು ಹೊಂದಿರುವ ಅರ್ಜುನ್ ಜನ್ಯ ಅವರ ಆರೋಗ್ಯದ ಬಗ್ಗೆ ಗುಸುಗುಸು ಕೇಳಿಬರಲಾರಂಭಿಸಿದ ದಿನದಿಂದ್ಲೇ ಅವ ರ ಚೇತರಿಕೆಗೆ ಪ್ರಾರ್ಥನೆ ಮಾಡಲಾಗುತ್ತಿದೆ.ನಮ್ಮ ಅರ್ಜುನ್ ಜನ್ಯ ಆರೋಗ್ಯವಂತರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿ ಎಂದು ಹರಕೆ ಮಾಡಿಕೊ ಳ್ಳುತ್ತಿದ್ದಾರೆ. ಕನ್ನಡ ಫ್ಲಾಶ್ ನ್ಯೂಸ್ ಕೂಡ ಅರ್ಜುನ್ ಜನ್ಯ ಅವರ ಶೀಘ್ರ ಚೇತರಿಕೆಗೆ ಪ್ರಾರ್ಥಿಸುತ್ತದೆ.

Spread the love
Leave A Reply

Your email address will not be published.

Flash News