ಅಂತ್ಯಸಂಸ್ಕಾರಕ್ಕಾಗಿ ಸರತಿ ಸಾಲಿನಲ್ಲಿ ನಿಂತ ಆಂಬುಲೆನ್ಸ್ ಗಳು

0

ಮಹಾಮಾರಿ ಕೊರೊನಾದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆ, ಯಲಹಂಕದ ಮೇಡಿ ಅಗ್ರಹಾರ, ಸುಮ್ಮನಹಳ್ಳಿ ಚಿತಾಗಾರದಲ್ಲಿ ಸರತಿ ಸಾಲಿನಲ್ಲಿ ಆಂಬುಲೆನ್ಸ್ ವಾಹನಗಳು ನಿಂತಿವೆ. ಕೊರೊನಾ ಮಾರ್ಗಸೂಚಿ ಪ್ರಕಾರ ಒಂದರ ನಂತರ ಮತ್ತೊಂದು ಆಂಬುಲೆನ್ಸ್ ನಿಲ್ಲಿಸಬೇಕು. ಹಾಗೂ ಒಂದು ಮೃತದೇಹದ ಅಂತ್ಯಕ್ರಿಯೆಯ ಬಳಿಕ ಮತ್ತೊಂದು ಮೃತದೇಹ ರವಾನೆ. ಹಾಗಾಗಿ ಚಿತಾಗಾರದ ಎದುರು ಕೋವಿಡ್ ನಿಂದ ಮೃತದೇಹವನ್ನು ತಂದಿದ್ದ ಆಂಬುಲೆನ್ಸ್ ಗಳು ಸಾಲುದ್ದ ಕ್ಯೂ ನಿಂತಿವೆ. ಆಂಬುಲೆನ್ಸ್ ಕ್ಯೂ ನಿಂತ 13 ಸೆಕೆಂಡ್ ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Spread the love
Leave A Reply

Your email address will not be published.

Flash News