ರಾಜಸ್ಥಾನ್-ಡೆಲ್ಲಿ ನಡುವೆ ಹಣಾಹಣಿ.. ಗೆಲುವು ಯಾರಿಗೆ..?

0

ಮುಂಬೈ:  ವಾಂಖೆಡೆ ಕ್ರೀಡಾಂಗಣದಲ್ಲಿ ಇಂದು  ರಾಜಸ್ಥಾನ್ ರಾಯಲ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣೆಸಾಡಲಿದೆ. ಪಂಜಾಬ್ ವಿರುದ್ಧದ ರೋಚಕ ಪಂದ್ಯದಲ್ಲಿ ಸೋಲುಂಡಿರುವ ರಾಜಸ್ಥಾನ್ ರಾಯಲ್ಸ್, ಚೆನ್ನೈ ವಿರುದ್ಧ ಗೆದ್ದು ಬೀಗಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡವ್ನು ಎದುರಿಸಲಿದೆ. ಮುಂಬೈ ವಾಂಖೆಡೆ ಮೈದಾನ ಬ್ಯಾಟಿಂಗ್​ಗೆ ಸಹಕಾರಿಯಾಗಿರುವುದರಿಂದ, ಭರ್ಜರಿ ರನ್​ ಹೊಳೆ ಬರುವ ನಿರೀಕ್ಷೆ ಇದೆ. ರಾಜಸ್ಥಾನ್​​ಗೆ ಬೆನ್ ಸ್ಟೋಕ್ಸ್ ಇಲ್ಲದಿರುವುದು ತಂಡದ ಬಲ ಕೊಂಚ ಕುಗ್ಗಿದೆ. ಉಳಿದಂತೆ ಸಂಜು ಸ್ಯಾಮ್ಸನ್‌ ಜೊತೆಗೆ ಇತರ ದಾಂಡಿಗರೂ ಬಲಿಷ್ಠ ಆಟ ತೋರಬೇಕಿದೆ. ಧಾರಾಳ ಸಂಖ್ಯೆಯ ಬೌಲರ್​ಗಳು ರಾಜಸ್ಥಾನ್ ತಂಡದಲ್ಲಿ ಇದ್ದಾರೆ. ಆದರೆ, ಕಳೆದ ಪಂದ್ಯದಲ್ಲಿ ಸಹಕಾರಿಯಾ ಹಾಗೂ ಮಾರಿಸ್ ಮಾತ್ರ ಉತ್ತಮ ಆಟ ಪ್ರದರ್ಶಿಸಿದ್ದಾರೆ. ಉಳಿದ ಬೌಲರ್​ಗಳ ಆಟವೂ ವಿಕೆಟ್ ಕೀಳುವಲ್ಲಿ ಸಹಕಾರಿಯಾಗಬೇಕಿದೆ.
ಮತ್ತೊಂದೆಡೆ, ಚೆನ್ನೈ ಸೂಪರ್ ಕಿಂಗ್ಸ್ ಸೋಲಿಸಿರುವ ಸಂಭ್ರಮದಲ್ಲಿ ಡೆಲ್ಲಿ ತಂಡವಿದೆ. ಇಂದೂ ಕೂಡ ಪಂದ್ಯ ಗೆದ್ದು ಗೆಲುವಿನ ಸಂಖ್ಯೆ ಹೆಚ್ಚಿಸಿಕೊಳ್ಳುವ ನಿರೀಕ್ಷೆ ಇದೆ. ಡೆಲ್ಲಿ ತಂಡದ ಶಿಖರ್ ಧವನ್, ಪೃಥ್ವಿ ಶಾ, ರಿಷಭ್ ಪಂತ್ ಭರ್ಜರಿ ಆಟ ತೋರಿದ್ದಾರೆ. ವೋಕ್ಸ್, ಅವೇಶ್ ಖಾನ್, ಅಶ್ವಿನ್​ರೊಂದಿಗೆ ಬೌಲಿಂಗ್ ವಿಭಾಗವೂ ಸದೃಢವಾಗಿದೆ. ರಾಜಸ್ಥಾನ್ ರಾಯಲ್ಸ್​ಗೆ ಹೋಲಿಸಿದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡವೇ ಗೆಲ್ಲಬಹುದು ಅನ್ನೋದು ಕ್ರಿಕೆಟ್ ಅಭಿಮಾನಿಗಳ ಅಭಿಪ್ರಾಯ ಆಗಿದೆ.

Spread the love
Leave A Reply

Your email address will not be published.

Flash News