ಬೇಸಿಗೆಗೆ ಹೆದರಿ ಬಾಗಿಲು ತೆರೆದು​ ನಿದ್ರೆಗೆ ಜಾರಿದ ಕುಟುಂಬ :ಮನೆಯೊಳಗೆ ನುಗ್ಗಿ ದಾಳಿ ನಡೆಸಿದ ಚಿರತೆ!

0

ಆಂಧ್ರಪ್ರದೇಶ: ಬೇಸಿಗೆಯಾಗಿದ್ದರಿಂದ ಕುಟುಂಬವೊಂದು ಬಾಗಿಲು ತೆರೆದಿಟ್ಟು ನಿದ್ರೆಗೆ ಜಾರಿದ್ದು, ಈ ವೇಳೆ ಮನೆಯೊಳಗೆ ನುಗ್ಗಿರುವ ಚಿರತೆಯೊಂದು ದಾಳಿ ನಡೆಸಿರುವ ಘಟನೆ ನಡೆದಿದೆ. ಆಂಧ್ರಪ್ರದೇಶದ ವೆಲ್ಲೂರಿನ ಎರ್ಥಂಗಲ್​ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ವೆಲಾಯುಥಂ(40) ಪತ್ನಿ ಪ್ರೇಮಾ(38), ಮಕ್ಕಳಾದ ಮಹಾಲಕ್ಷ್ಮೀ(17) ಹಾಗೂ ಮನೋಹರ್​​(20) ಮೇಲೆ ದಾಳಿ ನಡೆಸಿದೆ. ಮಧ್ಯರಾತ್ರಿ ನಾಯಿಗಳು ಮನೆ ಹೊರಗೆ ಬೊಗಳುತ್ತಿದ್ದರಿಂದ ಏನಾಯಿತು ಎಂದು ನೋಡಲು ಪ್ರೇಮಾ ಹೊರಗಡೆ ಬಂದಿದ್ದಾಳೆ. ಈ ವೇಳೆ, ಚಿರತೆ ದಾಳಿ ನಡೆಸಿ, ಮನೆಯೊಳಗೆ ನುಗ್ಗಿದೆ. ಈ ವೇಳೆ ವೇಲಾಯುಥಂ, ಮಗ ಮನೋಹರ್​ ಹಾಗೂ ಮಗಳು ಮಹಾಲಕ್ಷ್ಮಿ ಮೇಲೂ ದಾಳಿ ನಡೆಸಿದೆ. ಆದರೆ ಮನೆಯೊಳಗೆ ಚಿರತೆ ಲಾಕ್​ ಮಾಡಿ ಹೊರಗೆ ಬರುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಚಿರತೆ ಮನೆಯೊಳಗೆ ನುಗ್ಗಿದ್ದರಿಂದ ಕಿರುಚಾಟ ನಡೆಸಿದ್ದು, ನೆರೆಯ ಮನೆಯವರು ಸ್ಥಳಕ್ಕಾಗಮಿಸಿ ಗಾಯಗೊಂಡಿದ್ದ ಎಲ್ಲರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಜತೆಗೆ ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಸಿಬ್ಬಂದಿ ಚಿರತೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಸುರಕ್ಷಿತವಾಗಿ ತಮಿಳುನಾಡು – ಆಂಧ್ರಪ್ರದೇಶ ಅಭಯಾರಣ್ಯದಲ್ಲಿ ಬಿಟ್ಟು ಬಂದಿದ್ದಾರೆ. ಆಂಧ್ರಪ್ರದೇಶದಲ್ಲಿ ನಿನ್ನೆ ರಾತ್ರಿ ಭಾರಿ ಮಳೆಯಾಗಿದ್ದರಿಂದ ಚಿರತೆ ಹಳ್ಳಿಯೊಳಗೆ ಪ್ರವೇಶ ಪಡೆದಿರಬಹುದು ಎಂದು ಅರಣ್ಯ ಇಲಾಖೆ ಶಂಕೆ ವ್ಯಕ್ತಪಡಿಸಿದೆ.

Spread the love
Leave A Reply

Your email address will not be published.

Flash News