ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್​ ಬೌಲಿಂಗ್ ಆಯ್ಕೆ; ಪಂಜಾಬ್ ಕಿಂಗ್ಸ್ ಬ್ಯಾಟಿಂಗ್..

0

ಮುಂಬೈ: ಪಂಜಾಬ್ ಕಿಂಗ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇಂದು ಟೂರ್ನಿಯ 8ನೇ ಪಂದ್ಯವನ್ನು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಆಡಲಿದೆ. ಮೊದಲ ಪಂದ್ಯದಲ್ಲಿ ಸೋತ ಚೆನ್ನೈ ಸೂಪರ್ ಕಿಂಗ್ಸ್ 221 ರನ್ ಗಳಿಸಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಕಳೆದ ಆವೃತ್ತಿಯಲ್ಲಿ, ಎರಡೂ ತಂಡಗಳಿಗೆ ಪ್ಲೇಆಫ್‌ನಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ. ಲೀಗ್ ಸುತ್ತಿನಲ್ಲಿ ಚೆನ್ನೈ ಮತ್ತು ಪಂಜಾಬ್ ಎರಡು ಬಾರಿ ಪರಸ್ಪರ ಮುಖಾಮುಖಿಯಾದವು. ಚೆನ್ನೈ ಸೂಪರ್ ಕಿಂಗ್ಸ್ ಎರಡೂ ಬಾರಿ ಗೆದ್ದಿದೆ. ಮೊದಲ ಪಂದ್ಯದಲ್ಲಿ ಚೆನ್ನೈ 10 ವಿಕೆಟ್‌ಗಳಿಂದ ಜಯಗಳಿಸಿತು ಮತ್ತು ಎರಡನೇ ಪಂದ್ಯದಲ್ಲೂ ಒಂಬತ್ತು ವಿಕೆಟ್‌ಗಳಿಂದ ಜಯಗಳಿಸಿತು.

ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಪಂಜಾಬ್ ನಡುವೆ ಐಪಿಎಲ್‌ನಲ್ಲಿ ಈವರೆಗೆ 23 ಪಂದ್ಯಗಳನ್ನು ಆಡಲಾಗಿದ್ದು, ಇದರಲ್ಲಿ ಧೋನಿ ತಂಡ ಭಾರೀ ಮೇಲುಗೈ ಸಾಧಿಸಿದೆ. ಚೆನ್ನೈ 14 ಪಂದ್ಯಗಳನ್ನು ಗೆದ್ದಿದ್ದರೆ, ಪಂಜಾಬ್ ಒಂಬತ್ತು ಪಂದ್ಯಗಳನ್ನು ಗೆದ್ದಿದೆ.ಚೆನ್ನೈ ಸೂಪರ್ ಕಿಂಗ್ಸ್‌ಗೆ ದೊಡ್ಡ ಸವಾಲು ಎಂದರೆ ಧೋನಿ ತಂಡದ ವಿರುದ್ಧ ಪಂಜಾಬ್ ನಾಯಕ ಕೆ.ಎಲ್.ರಾಹುಲ್ 262 ರನ್ ಗಳಿಸಿದ್ದಾರೆ . ಅದೇ ಸಮಯದಲ್ಲಿ, ಸುರೇಶ್ ರೈನಾ ಅವರು ಈವರೆಗೆ ಪಂಜಾಬ್ ವಿರುದ್ಧದ ಪಂದ್ಯಗಳಲ್ಲಿ 711 ರನ್ ಗಳಿಸಿದ್ದಾರೆ.

Spread the love
Leave A Reply

Your email address will not be published.

Flash News