ಚಿಕಿತ್ಸೆ ಫಲಕಾರಿಯಾಗದೆ ತಮಿಳು ನಟ ವಿವೇಕ್ ನಿಧನ

0

ಚೆನ್ನೈ: ಹೃದಯ ಸಂಬಂಧಿ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ತಮಿಳಿನ ಖ್ಯಾತ ನಟ ವಿವೇಕ್ (59) ಚೆನ್ನೈ ಆಸ್ಪತ್ರೆಯಲ್ಲಿ ಇಂದು ಮುಂಜಾನೆ ಮೃತಪಟ್ಟಿದ್ದಾರೆ. ಆಯಂಜಿಯೋಪ್ಲಾಸ್ಟಿ ಚಿಕಿತ್ಸೆ ಹಾಗೂ ಸ್ಟಂಟ್ ಅಳವಡಿಕೆಗಾಗಿ ವದಪಳನಿಯಲ್ಲಿರುವ ಎಸ್‌ಐಎಂಎಸ್ ಆಸ್ಪತ್ರೆಗೆ ದಾಖಲಾಗಿದ್ದ ವಿವೇಕ್ ಇಂದು ನಿಧನರಾಗಿದ್ದಾರೆ.

ಹೃದಯ ನಾಳದಲ್ಲಿ ರಕ್ತ ಸಂಚಾರದಲ್ಲಿ ತೊಂದರೆಯಾದ ಕಾರಣ ಅವರನ್ನು ನಿನ್ನೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ 4.35 ರ ಸುಮಾರಿಗೆ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ವರದಿ ತಿಳಿಸಿದೆ. ವಿವೇಕ್ ಅವರರನ್ನು ನಿರ್ದೇಶಕ ಕೆ. ಬಾಲಚಂದರ್ ಅವರು ಚಲನಚಿತ್ರಗಳಲ್ಲಿ ಪರಿಚಯಿಸಿದರು, ರನ್ (2002), ಸಾಮಿ (2003), ಪೆರಾಜಗನ್ (2004) ಚಿತ್ರಗಳಲ್ಲಿ ನಟಿಸಿದ್ದಾರೆ.

ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ 5 ಬಾರಿ, ಚಲನಚಿತ್ರಗಳಲ್ಲಿನ ಉತ್ತಮ ಅಭಿನಯಕ್ಕಾಗಿ ಅವರು ಫಿಲ್ಮ್ ಫೇರ್ ಅವಾರ್ಡ್ಸ್ ಸೌತ್ ನಲ್ಲಿ ತಮಿಳು – ಅತ್ಯುತ್ತಮ ಹಾಸ್ಯನಟ 3 ಬಾರಿ ಗೆದ್ದಿದ್ದಾರೆ. ಉನ್ನರುಗೆ ನಾನ್ ಇರುಂಧಲ್ (1999), ರನ್ (2002) ಪಾರ್ಥಿಬನ್ ಕಾನವು (2003), ಅನ್ನಿಯಾನ್ (2005) ಮತ್ತು ಶಿವಾಜಿ (2007) ಆಗಿ ಅತ್ಯುತ್ತಮ ಹಾಸ್ಯನಟ ಪ್ರಶಸ್ತಿಗಳನ್ನು ಪಡೆದಿದ್ದರು. 220ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

[contact-form][contact-field label=”Name” type=”name” required=”true” /][contact-field label=”Email” type=”email” required=”true” /][contact-field label=”Website” type=”url” /][contact-field label=”Message” type=”textarea” /][/contact-form]

Spread the love
Leave A Reply

Your email address will not be published.

Flash News