ಸಿಡಿ ಪ್ರಕರಣ: ರಮೇಶ್‌ ಜಾರಕಿಹೊಳಿಗೆ ಮತ್ತೊಂದು ನೋಟಿಸ್‌

0

ಬೆಂಗಳೂರು: ಸಿಡಿ ಪ್ರಕ​ರಣ ಸಂಬಂಧ ವಿಶೇಷ ತನಿಖಾ ತಂಡ​ (​ಎ​ಸ್‌​ಐ​ಟಿ) ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರಿಗೆ ಈ ತಿಂಗಳ 20ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ಜಾರಿ ಮಾಡಿದೆ.
ರಮೇಶ್‌ ಜಾರಕಿಹೊಳಿ ಅವರಿಗೆ ಕೊರೋನಾ ಸೋಂಕು ತಗುಲಿ ಸದ್ಯ ಹೋಮ್‌ ಕ್ವಾರಂಟೈನ್‌ನಲ್ಲಿರುವ ಹಿನ್ನೆಲೆಯಲ್ಲಿ ಶುಕ್ರವಾರ ಅವರ ಪರವಾಗಿ ಸಹೋದರ ಬಾಲಚಂದ್ರ ಜಾರಕಿಹೊಳಿ ಎಸ್‌ಐಟಿಯಿಂದ ನೋಟಿಸ್‌ ಸ್ವೀಕರಿಸಿದ್ದಾರೆ.
ಈಗಾಗಲೇ ಸಿಡಿ ಯಲ್ಲಿರುವ ಯುವತಿಯನ್ನು ಹಲವು ಬಾರಿ ವಿಚಾರಣೆ ನಡೆಸಿರುವ ಎಸ್‌ಐಟಿ ಅಧಿಕಾರಿಗಳು ಸಿಡಿ ಕೇಸ್‌ನ ಹಿಂದಿನ ಹಲವು ರಹಸ್ಯಗಳನ್ನು ಕೆದಕಿ ಸಾಕ್ಷ್ಯ ಕಲೆ ಹಾಕಿದ್ದಾರೆ. ರಮೇಶ್‌ ಜಾರಕಿಹೊಳಿ ವಿಚಾರಣೆಗೆ ಹಾಜರಾದರೆ ಅವರಿಂದ ಯಾವೆಲ್ಲ ಮಾಹಿತಿ ಕಲೆ ಹಾಕಬೇಕು ಎಂಬ ಬಗ್ಗೆ ಈಗಾಗಲೇ ಸಿದ್ಧತೆ ನಡೆಸಲಾಗಿದೆ. ರಮೇಶ್‌ ಜಾರ​ಕಿ​ಹೊಳಿ ಅವ​ರ ವಿಚಾರಣೆ ನಡೆಸಿದ ಬಳಿ​ಕ​ವ​ಷ್ಟೇ ಪ್ರಕರಣದ ತನಿಖೆ ಪ್ರಗತಿ ಸಾಧಿ​ಸ​ಲಿ​ದೆ ಎಂದು ಮೂಲ​ಗಳು ತಿಳಿ​ಸಿ​ವೆ.

 

Spread the love
Leave A Reply

Your email address will not be published.

Flash News