ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಳಕ್ಕೆ ಹೈಕೋರ್ಟ್ ಕಳವಳ

0

ರಾಜ್ಯದಲ್ಲಿ ಮತ್ತೆ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ, ಸೋಂಕು ಹೆಚ್ಚಳಕ್ಕೆ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ.

‘ಈ ಬಾರಿ ಕೊರೊನಾ ವೇಗವಾಗಿ ಹರಡುತ್ತಿದೆ. ಬೆಡ್ ಗಳ ಕೊರತೆ ಬಗ್ಗೆ ಸರ್ಕಾರ ಉತ್ತರಿಸಬೇಕು. ಕೊರೊನಾ ಸೋಂಕಿತ ಹೈಕೋರ್ಟ್ ಸಿಬ್ಬಂದಿಗಳಿಗೂ ಬೆಡ್ ಸಿಗುತ್ತಿಲ್ಲ. ಖಾಸಗಿ ಆಸ್ಪತ್ರೆಗಳ ಶುಲ್ಕದ ಬಗ್ಗೆಯೂ ವಿವರಣೆ ನೀಡಿ. ಆ್ಯಂಬುಲೆನ್ಸ್ ಗಳ ಲಭ್ಯತೆ ಬಗ್ಗೆಯೂ ವಿವರಣೆ ನೀಡಿ. ಜನರ ತೊಂದರೆಗೆ ಸ್ಪಂದಿಸಲು ಉನ್ನತ ಸಮಿತಿ ರಚಿಸಲು ಸಾಧ್ಯವೇ. ನಾಗರೀಕರು ತಮ್ಮ ಕಷ್ಟ ಹೇಳಿಕೊಳ್ಳಲು ವೇದಿಕೆ ಕಲ್ಪಿಸಿ.
ಹೆಲ್ಪ್ ಲೈನ್ ಗಳನ್ನು ಮರು ಆರಂಭಿಸಲು ಕ್ರಮ ಕೈಗೊಳ್ಳಿ. ಸೋಂಕಿತರ ಅಂತ್ಯಕ್ರಿಯೆ ಗೆ ಕೈಗೊಂಡ ಕ್ರಮದ ಬಗ್ಗೆ ತಿಳಿಸಿ. ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.

Spread the love
Leave A Reply

Your email address will not be published.

Flash News