ನೆಕ್ಕಿಲಾಡಿಯ ಸಮಾಜ ಸೇವಕ ಮುಸ್ತಫಾ ಇನ್ನಿಲ್ಲ “ಹಾವೇ ನನ್ನ ಜೀವನ” ಎಂದಿದ್ದವನ ಬಾಳು ಹಾವಿನಿಂದಲೇ ಅಂತ್ಯ!

0

ಪುತ್ತೂರು ತಾಲೂಕಿನ ಉಪ್ಪಿನಂಗಡಿ ಸಮೀಪದ 34ನೆ ನೆಕ್ಕಿಲಾಡಿ ಗ್ರಾಮದ ಆಟೋ ಚಾಲಕ ಮುಹಮ್ಮದ್ ಮುಸ್ತಫಾ ಎಪ್ರಿಲ್ 17ರಂದು ಹಾವು ಕಡಿತಕ್ಕೊಳಗಾಗಿ ಮೃತಪಟ್ಟಿರುವುದು ಆ ಊರಿಗೆ ತುಂಬಲಾರದ ನಷ್ಟವೇ ಸರಿ. ಯಾವುದೇ ಬಗೆಯ ಹಾವು ಹಿಡಿಯಲೆಂದು ಕರೆ ಬಂದ ತಕ್ಷಣವೇ ಸ್ಥಳಕ್ಕೆ ಧಾವಿಸುವ ಮುಸ್ತಫಾ ಆಪತ್ಭಾಂಧವನೇಂದೇ ಗುರುತಿಸಲ್ಪಡುತ್ತಿದ್ದ ಯುವಕ. ಕೆಲವು ತಿಂಗಳ ಹಿಂದೆಯಷ್ಟೇ ಉಪ್ಪಿನಂಗಡಿ ಸಮೀಪ ಹೆದ್ದಾರಿಯಲ್ಲಿ ಬೇರೊಂದು ಅಪಘಾತಕ್ಕೀಡಾದಾಗ ಆ ಅರ್ಧ ರಾತ್ರಿಯಲ್ಲೂ ಏಕಾಂಗಿಯಾಗಿ ಗಾಯಾಳುವನ್ನು ತನ್ನ ರಿಕ್ಷಾದಲ್ಲಿ ಪುತ್ತೂರಿನ ಆಸ್ಪತ್ರೆಗೆ ಸಾಗಿಸಿದ್ದು ಇದೇ ಮುಸ್ತಫಾ. ತನ್ನ ಹಾವು ಹಿಡಿಯುವ ಚಳಕದಿಂದ ಹತ್ತೂರಿನಲ್ಲಿ ಜನಪ್ರಿಯವಾಗಿದ್ದ ಮುಸ್ತಫಾನನ್ನು ಗೌರವಿಸಿ ಹಲವು ಸಂಘಸಂಸ್ಥೆಗಳು ಸನ್ಮಾನಿಸಿವೆ. ಅಷ್ಟೇನೂ ವಿದ್ಯಾಭ್ಯಾಸ ಕಲಿಯದ ಮುಸ್ತಫಾನಿಗೆ ಸಮಾಜಸೇವೆಯಲ್ಲಿ ತುಸು ಹೆಚ್ಚು ಆಸಕ್ತಿ. ಕೆಲವು ವರ್ಷಗಳಿಂದೀಚೆಗೆ ಹಾವುಗಳನ್ನು, ಪಕ್ಷಿಗಳನ್ನು ಹೆಚ್ಚು ಪ್ರೀತಿಸತೊಡಗಿದ್ದ. ಆತನ ವಾಟ್ಸಾಪ್ ಸ್ಟೇಟಸ್ ನೋಡಿದರೆ ಅಚ್ಚರಿಯಾಗುತ್ತದೆ! “ಹಾವೇ ನನ್ನ ಜೀವನ (Snake is my Life) ಎಂದು ಬರೆದುಕೊಂಡಿದ್ದಾನೆ. ಇಂದು ಅದೇ ಹಾವು ಆತನ ಜೀವನವನ್ನೇ ಅಂತ್ಯಗೊಳಿಸಿದೆ. ಸಂಜೆ 4.30ರ ವೇಳೆಗೆ ಉಪ್ಪಿನಂಗಡಿ ಸಮೀಪದ ಪೆದಮಲೆ ಎಂಬಲ್ಲಿಂದ ಎರಡು ವಿಷಪೂರಿತ ಹಾವುಗಳನ್ನು ಹಿಡಿಯಲು ಬಂದ ಕರೆಗೆ ಹೋದ ಮುಸ್ತಫಾ(30) ಮತ್ತೆ ಬಾರದ ಲೋಕಕ್ಕೆ ಪ್ರಯಾಣಿಸಿದ್ದಾನೆ.

Spread the love
Leave A Reply

Your email address will not be published.

Flash News