ಚೆನ್ನೈ ಸೂಪರ್ ಕಿಂಗ್ಸ್‌ vs ರಾಜಸ್ತಾನ್ ರಾಯಲ್ಸ್ ಜಿದ್ದಾಜಿದ್ದಿ.. ಗೆಲುವು ಯಾರಿಗೆ..?

0

ಐಪಿಎಲ್ 2021 ಟೂರ್ನಿಯಲ್ಲಿ, ಆಡಿದ ಎರಡು ಪಂದ್ಯಗಳ ಪೈಕಿ ಒಂದರಲ್ಲಿ ಗೆದ್ದು, ಒಂದು ಪಂದ್ಯದಲ್ಲಿ ಸೋಲು ಕಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಇಂದು ಮುಂಬೈನ ವಾಂಖೆಡೆ ಕ್ರಿಕೆಟ್ ಮೈದಾನದಲ್ಲಿ ಎದುರಾಗಲಿವೆ. ಲೀಗ್​ನ 12ನೇ ಪಂದ್ಯದಲ್ಲಿ ಅನುಭವಿ ಆಟಗಾರರನ್ನು ಒಳಗೊಂಡ ಚೆನ್ನೈ ಗೆಲ್ಲುತ್ತಾ ಅಥವಾ ಯುವ ಪಡೆ ರಾಜಸ್ಥಾನ್ ರಾಯಲ್ಸ್ ಗೆಲ್ಲುತ್ತಾ ಎಂದು ಕಾದುನೋಡಬೇಕಿದೆ. ಈ ಮೊದಲು ಪಂಜಾಬ್ ಕಿಂಗ್ಸ್ ವಿರುದ್ಧ ಆಡಿದ್ದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 6 ವಿಕೆಟ್​ಗಳ ಗೆಲುವು ದಾಖಲಿಸಿತ್ತು. ಚೆನ್ನೈ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿತ್ತು. ಪಂಜಾಬ್ ಆಟಗಾರರನ್ನು 106 ರನ್​ಗರ ಕಟ್ಟಿಹಾಕಿದ್ದು ಮಾತ್ರವಲ್ಲ, ಚೆನ್ನೈ 15 ಓವರ್ ಮುಗಿಯುವಷ್ಟರಲ್ಲಿ, 4 ವಿಕೆಟ್ ಕಳೆದುಕೊಂಡು ಗೆದ್ದಿತ್ತು.
ಹಾಗಾಗಿ ತಂಡದ ವಿಶ್ವಾಸ ಈಗ ಹೆಚ್ಚಾಗಿದೆ. ತಂಡದಲ್ಲಿ ಸಾಮಾನ್ಯವಾಗಿ ಆಗಾಗ್ಗೆ ಬದಲಾವಣೆ ಮಾಡಿಕೊಳ್ಳದ, ಚೆನ್ನೈ ಕೂಲ್ ಕ್ಯಾಪ್ಟನ್ ಧೋನಿ ಇಂದು ಕೂಡ ಬದಲಾವಣೆ ಇಲ್ಲದೆ, ಅದೇ ತಂಡವನ್ನು ಆಡಿಸುವ ಸಾಧ್ಯತೆ ಹೆಚ್ಚಿದೆ. ಮೊದಲ  ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿಯೂ ಸೋಲುಂಡಿದ್ದ ರಾಜಸ್ಥಾನ್ ರಾಯಲ್ಸ್, ಎರಡನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರೋಚಕ ಗೆಲುವು ದಾಖಲಿಸಿತ್ತು. ಯುವ ಆಟಗಾರರು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಉತ್ತಮ ಪ್ರದರ್ಶನ ನೀಡಿದರೆ ರಾಜಸ್ಥಾನ್ ರಾಯಲ್ಸ್​ ಗೆಲ್ಲುವುದು ಕೂಡ ಕಷ್ಟವೇನಲ್ಲ.

Spread the love
Leave A Reply

Your email address will not be published.

Flash News