ಕೋವಿಡ್ ನಿಯಂತ್ರಣಕ್ಕೆ ಕಠಿಣ ಕ್ರಮಗಳ ಜಾರಿಗೆ ಮುಂದಾದ ರಾಜ್ಯ ಸರ್ಕಾರ..

0

ರಾಜ್ಯದಲ್ಲಿ ಮರಣಮೃದಂಗ ಭಾರಿಸುತ್ತಿರುವ ಕೋವಿಡ್ ಅಲೆ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕಠಿಣ ಕ್ರಮಗಳ ಜಾರಿಗೆ ಮುಂದಾಗಿದೆ. ಕನಿಷ್ಠ ಕೊರೊನಾ ರೆಡ್ ಝೋನ್ ನಲ್ಲಿರುವ ಬೆಂಗಳೂರಿನಲ್ಲಿ ಲಾಕ್ ಡೌನ್ ಜಾರಿಗೊಳಿಸಬೇಕೆಂದು ತಜ್ಞರು ಸಲಹೆ ಮಾಡಿದ್ದರೂ ಸಹ, ಸರ್ಕಾರ ಲಾಕ್ ಡೌನ್ ಬದಲಿಗೆ 144ನೇ ಸೆಕ್ಷನ್ ಅನ್ವಯ ಕರ್ಫ್ಯೂ ಜಾರಿಗೊಳಿಸಲು ಉದ್ದೇಶಿಸಿದೆ.

 • ರಾಜ್ಯಾದ್ಯಂತ ರಾತ್ರಿ 9ರಿಂದ ಬೆಳಗ್ಗೆ 6 ಗಂಟೆವರೆಗೆ ನೈಟ್ ಕರ್ಫ್ಯೂ
 • ಅಂತಾರಾಜ್ಯ ಮತ್ತು ಅಂತರ್ ಜಿಲ್ಲಾ ಪ್ರಯಾಣಗಳಿಗೆ ನಿರ್ಬಂಧವಿಲ್ಲ
 • ಅಂತಾರಾಜ್ಯ ಪ್ರಯಾಣಿಕರಿಗೆ ಕೋವಿಡ್ ನೆಗೆಟೀವ್ ಸರ್ಟಿಫಿಕೇಟ್ ಕಡ್ಡಾಯ
 • ಶೇ.50 ರಷ್ಟು ಸಿಬ್ಬಂದಿಯೊಂದಿಗೆ ಸರ್ಕಾರಿ ಕಚೇರಿಗಳ ಕಾರ್ಯನಿರ್ವಹಣೆ
 • ಕಂಟೈನ್ಮೆಂಟ್ ಜೋನ್ ಗಳಲ್ಲಿನ ಸ್ಥಳೀಯ ಸಂಸ್ಥೆಗಳ ಸಿಬ್ಬಂದಿ ಪೂರ್ಣ ಪ್ರಮಾಣದಲ್ಲಿ ಹಾಜರು ಇರಬೇಕು
 • ಆಯುಷ್ ಸೇರಿದಂತೆ ಎಲ್ಲ ವೈದ್ಯಕೀಯ ಸಿಬ್ಬಂದಿ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಣೆ
 • ಕಂಟೈನ್ಮೆಂಟ್ ಹೊರಗಿರುವ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಗೆ ಅಡ್ಡಿ ಇಲ್ಲ
 • ಕೃಷಿ ಮಾರುಕಟ್ಟೆಗಳ ಕಾರ್ಯನಿರ್ವಹಣೆಯೂ ಮುಂದುವರಿಯುತ್ತದೆ
 • ಕೋವಿಡ್ ಮಾರ್ಗಸೂಚಿಯನ್ವಯ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಅಡ್ಡಿಯಿಲ್ಲ
 • ಸಾರ್ವಜನಿಕ ಸಾರಿಗೆಯಲ್ಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ
 • ಸರಕು ಸಾಗಣೆ ವಾಹನಗಳ ಸಂಚಾರಕ್ಕೂ ಯಾವುದೇ ನಿರ್ಬಂಧವಿಲ್ಲ
 • ಶಾಲಾ ಕಾಲೇಜುಗಳು, ತರಬೇತಿ ಕೇಂದ್ರಗಳು ಸಂಪೂರ್ಣ ಬಂದ್
 • ಸಿನೆಮಾ ಮಂದಿರಗಳು,ಶಾಪಿಂಗ್ ಮಾಲ್, ಜಿಮ್,ಕ್ರೀಡಾ ಕಾಂಪ್ಲೆಕ್ಸ್ ಗಳು,ಸ್ಟೇಡಿಯಂ,,ಈಜುಕೊಳ,ಮನರಂಜನಾ ಪಾರ್ಕ ಗಳು,ನಾಟಕ ಮಂದಿರಗಳು,ಬಾರ್ ಆಡಿಟೋರಿಯಂ ಗಳು,ಅಸೆಂಬ್ಲಿಹಾಲ್ ಗಳು ಬಂದ್
 • ಎಲ್ಲ ಬಗೆಯ ಕ್ರೀಡಾ ಚಟುವಟಿಕೆಗಳಿಗೂ ಸಂಪೂರ್ಣ ನಿರ್ಬಂಧ, ಪ್ರೇಕ್ಷಕರಿಲ್ಲದೆ ಹೊರಾಂಗಣ ಕ್ರೀಡೆಗಳಿಗೆ ಅವಕಾಶ
 • ವಿವಾಹ ಮತ್ತಿತರ ಶುಭ ಸಮಾರಂಭಗಳಲ್ಲಿ ಕೇವಲ 50 ರಿಂದ 1000 ಮಂದಿಗೆ ಮಾತ್ರ ಭಾಗವಹಿಸಲು ಅನುಮತಿ
 • ಅಂತ್ಯ ಸಂಸ್ಕಾರ ಗಳಲ್ಲಿ 20ರಿಂದ 50 ಮಂದಿ ಭಾಗವಹಿಸಲು ಅವಕಾಶ
 • ಆಹಾರ ಧಾನ್ಯಗಳು, ದಿನಸಿ ಅಂಗಡಿಗಳು,ಹಾಲಿನ ಬೂತ್, ದಿನಬಳಕೆ ವಸ್ತುಗಳು ,ತರಕಾರಿ ಮಾರಾಟ ಮಳಿಗೆಗಳಿಗೆ ಅವಕಾಶ
 • ಬ್ಯಾಂಕ್, ಇನ್ಷೂರೆನ್ಸ್ ಕಂಪನಿಗಳು, ಎಟಿಎಂ ಕೇಂದ್ರಗಳು ತೆರೆದಿರುತ್ತವೆ
  *ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮದ ಕಾರ್ಯನಿರ್ವಹಣೆಗೆ ಅಡ್ಡಿಯಿಲ್ಲ
 • ವಿದ್ಯುತ್ ಉತ್ಪಾದನೆ ಮತ್ತು ಪ್ರಸರಣ ಕೇಂದ್ರಗಳು ಮತ್ತು ಸೇವೆಗಳು ಅಬಾಧಿತ
  *ಸಲೂನ್, ಮತ್ತು ಬ್ಯೂಟಿ ಪಾರ್ಲರ್ ಗಳಲ್ಲಿ ಕೋವಿಡ್ ನಿಯಮಾವಳಿಗಳ ಪಾಲನೆ ಕಡ್ಡಾಯ
 • ಆಹಾರ ಸಂಸ್ಕರಣೆ,ಅಗತ್ಯ ವಸ್ತುಗಳ ಉತ್ಪಾದನೆ,ಔಷಧ ಕಾರ್ಖಾನೆಗಳ ಕಾರ್ಯ ನಿರ್ವಹಣೆಗೆ ಅನುಮತಿ
Spread the love
Leave A Reply

Your email address will not be published.

Flash News