ಪ್ರತಿಷ್ಟಿತ ಕಿಮ್ಸ್ ಆಸ್ಪತ್ರೆಯಲ್ಲಿ ಕೇಳೋರಿಲ್ಲ ಸೋಂಕಿತರ ಗೋಳು..

0

ಪ್ರತಿಷ್ಠಿತ ಕಿಮ್ಸ್ ಆಸ್ಪತ್ರೆಯಲ್ಲಿ ಸೋಂಕಿತರ ಗೋಳನ್ನು ಕೇಳೋರೇ ಇಲ್ಲದಂತಾಗಿದೆ. ಆಸ್ಪತ್ರೆಗೆ ದಾಖಲಾದ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಅಷ್ಟೇ ಅಲ್ಲ ಸೋಂಕಿತರ ಕಾಳಜಿ ಮಾಡೋಕೂ ಇಲ್ಲಿ ಯಾರೂ ಇಲ್ಲ. ಸೋಂಕಿತರಿಗೆ ಚಿಕಿತ್ಸೆನೂ ಇಲ್ಲ, ಊಟ, ತಿಂಡಿಯೂ ಇಲ್ಲ. ದಿನೇ ದಿನೇ ದಾಖಲಾಗುತ್ತಿರುವ ಸೋಂಕಿತರ ಸಂಖ್ಯೆ ಕೂಡ ಹೆಚ್ಚುತ್ತಿದೆ. ಉಸಿರಾಟದ ಸಮಸ್ಯೆಯಿಂದ ಅದೆಷ್ಟೋ ಜನ ನರಳಾಡುತ್ತಿದ್ದಾರೆ. ಮೂರ್ನಾಲ್ಕು ದಿನಗಳಿಂದ ರೋಗಿಗಳನ್ನ ಯಾರೂ ವಿಚಾರಿಸಿಯೇ ಇಲ್ಲ ಎಂದು ವಕೀಲ ಉಮೇಶ್ ಅವರು ಕಿಮ್ಸ್ ನ ನರಕಸದೃಢ ಚಿತ್ರಣವನ್ನು ತೆರೆದಿಟ್ಟಿದ್ದಾರೆ. ಉಮೇಶ್ ಕಳೆದ ನಾಲ್ಕು ದಿನಗಳಿಂದ ಕಿಮ್ಸ್ ಗೆ ದಾಖಲಾಗಿದ್ದು, ವೈದ್ಯಕೀಯ ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಹೀಗೆಯೇ ಆದ್ರೆ ಸತ್ತೋಗ್ತೇನೆ ನನ್ನನ್ನು ಕಾಪಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

Spread the love
Leave A Reply

Your email address will not be published.

Flash News