ಹಾಸಿಗೆ ಇಲ್ಲದೆ ಜನರು ಪರದಾಡ್ತಿದ್ರೆ ಬಿಬಿಎಂಪಿ ಯಿಂದ ಇದೆಂಥಾ ನಿರ್ಲಕ್ಷ್ಯ.!

0

ಹಾಸಿಗೆ ಇಲ್ಲದೆ ಜನ ಪರದಾಡುತ್ತಿದ್ರೆ ಬಿಬಿಎಂಪಿ ನಿರ್ಲಕ್ಷ್ಯ ತೋರುತ್ತಿದೆ. ಹೌದು. ಬಿಬಿಎಂಪಿ ಹತ್ತು ಕೋವಿಡ್ ಕೇರ್ ಸೆಂಟರ್ ತೆರೆದು ಬೆಡ್ ಕೊಡಲು ಮೀನಾಮೇಷ ಎಣಿಸುತ್ತಿದೆ. ಬೆಡ್ ಸಿಗದೆ ಜನರು ಒಂದ್ಕಡೆ ನರಳಾಡುತ್ತಿದ್ದಾರೆ. ಇನ್ನೊಂದು ಕಡೆ ಕೋವಿಡ್ ಕೇರ್ ಸೆಂಟರ್ ಗಳು ಖಾಲಿ ಖಾಲಿ ಹೊಡೀತಿವೆ.
ಬಿಬಿಎಂಪಿ 8 ವಲಯಗಳಲ್ಲಿ ಒಟ್ಟು 10 ಕೇರ್ ಸೆಂಟರ್ ಗಳ ವ್ಯವಸ್ಥೆ ಮಾಡಿದೆ.

ಪೂರ್ವ ವಲಯ : 02
• ಸರ್ಕಾರಿ ಬಾಲಕರ ಕಲಾ ಕಾಲೇಜು – 210
• ಶ್ರೀ ಸಾಯಿ ಕಲ್ಯಾಣ ಮಂಟಪ – 150

ದಕ್ಷಿಣ ವಲಯ : 02
• ಬೋಷ್ CCC – 80
• ನ್ಯಾಷನಲ್ ಗೇಮ್ಸ್ ವಿಲೇಜ್ – 250

ಪಶ್ಚಿಮ ವಲಯ : 01
• ಸರ್ಕಾರಿ ಆಯುರ್ವೇದ ಕಾಲೇಜು – 200

ಬೊಮ್ಮನಹಳ್ಳಿ : 01
• ಬ್ಲಾಸಂ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ – 50

ಆರ್ ಆರ್ ನಗರ : 01
• ನಾರ್ತ್ ಈಸ್ಟರ್ನ್ ಗರ್ಲ್ಸ್ ಹಾಸ್ಟೆಲ್ – 370

ಯಲಹಂಕ : 01
• ಸರ್ಕಾರಿ ಮೆಟ್ರಿಕ್ ಗರ್ಲ್ಸ್ ಹಾಸ್ಟೆಲ್ – 50

ದಾಸರಹಳ್ಳಿ : 01
• ಹೋಟೆಲ್ ರಾಜ್ ವಿಸ್ತಾ – 40

ಮಹದೇವಪುರ : 01
• ರಾಧಾ ಹೋಮ್‌ಟೆಲ್ – 105

ಹೀಗೆ ಎಂಟು ವಲಯದಲ್ಲಿ ಪಾಲಿಕೆ ಹತ್ತು ಕೋವಿಡ್ ಕೇರ್ ಸೆಂಟರ್ ತೆರೆದಿದ್ದು, ಸದ್ಯ ನಗರದಾದ್ಯಂತ ಕೋವಿಡ್ ಕೇರ್ ಸೆಂಟರ್ ಗಳಲ್ಲಿ 1505 ಬೆಡ್‌ಗಳ ವ್ಯವಸ್ಥೆ ಮಾಡಿದೆ. ಆದ್ರೂ ಹಾಸಿಗೆ ಇಲ್ಲದೆ ಸೂಕ್ತ ಚಿಕಿತ್ಸೆ ಸಿಗದೆ ಸೋಂಕಿತರು ಸಾವನ್ನಪ್ಪುತ್ತಿದ್ದಾರೆ.

ಇದರ ಹೊರತಾಗಿ ಹಜ್ ಭವನ ಹಾಗೂ HAL ನಲ್ಲಿ 578 ಹಾಸಿಗೆಯ ಕೇರ್ ಸೆಂಟರ್ ಈಗಾಗಲೇ ಪಾಲಿಕೆ ತೆರೆದಿದೆ. ಈ ಪೈಕಿ 520 ಬೆಡ್ ಗಳು ಈಗಾಗಲೇ ಭರ್ತಿಯಾಗಿದ್ರೆ, ಇನ್ನೂ ಈ ಎರಡು ಸೆಂಟರ್‌ಗಳಲ್ಲಿ 58 ಬೆಡ್‌ಗಳು ಖಾಲಿ ಇದೆ ಒಟ್ಟಾರೆ 12 ಕೋವಿಡ್ ಕೇರ್ ಸೆಂಟರ್‌ಗಳಲ್ಲಿ 2083 ಬೆಡ್‌ಗಳ ವ್ಯವಸ್ಥೆ ಈಗಾಗಲೇ ಮಾಡಲಾಗಿದೆ. ಈ ಪೈಕಿ ಭರ್ತಿಯಾಗಿರುವುದು ಕೇವಲ 520 ಹಾಸಿಗೆ ಮಾತ್ರ. ಸೋಂಕಿತರು ಹಾಸಿಗೆಗೆ ಹಾಹಾಕಾರಪಡ್ತಿದ್ರು 1563 ಬಡ್ ಗಳು ಇನ್ನೂ ಬಿಬಿಎಂಪಿ ಬಳಿ CCC ನಲ್ಲಿ ಖಾಲಿ ಇದೆ. ಇವೆಲ್ಲವೂ ಸುಸಜ್ಜಿತವಾದ ವ್ಯವಸ್ಥೆ ಒಳಗೊಂಡಿದ್ದು, ಆಕ್ಸಿಜನ್ ನೀಡಲು ಹಾಗೂ ಕೆಲವು ತಾತ್ಕಾಲಿಕ ಐಸಿಯೂ ನಿರ್ಮಿಸಬಹುದಾದಂತವು. ಆದರೂ ಬಿಬಿಎಂಪಿ ಸೋಂಕಿತರಿಗೆ ಸೂಕ್ತ ವ್ಯವಸ್ಥೆ ಮಾಡದೆ ದಿವ್ಯ ನಿರ್ಲಕ್ಷ್ಯ ತೋರುತ್ತಿರುವುದೇಕೆ..? ಬಿಬಿಎಂಪಿಗೆ ಜನರ ಜೀವ ಮುಖ್ಯ ಅಲ್ವಾ..?

 

 

Spread the love
Leave A Reply

Your email address will not be published.

Flash News