ಟಪ್ ರೂಲ್ಸ್ , ನೈಟ್ ಕಪ್ಯೂ ಬೆನ್ನಲ್ಲೆ ಬಿಬಿಎಂಪಿ ಪಾತ್ರ

0

ಸರ್ಕಾರ ಜನರ ಹಿತಾಸಕ್ತಿ ಆಧರಿಸಿ ಟಫ್ ರೂಲ್ಸ್ ತಂದಿದೆ. ಇದ್ರಲಿ ಮೂರು ವಿಚಾರ ಇದೆ. ನೈಟ್ ಕಪ್ಯೂ, ಅಂಗಡಿಗಳು, ಮಾರುಕಟ್ಟೆ ಕ್ಲೋಸ್ ಹೊಣೆ ಇದೆ.

ನಿತ್ಯ ಪಾಲಿಕೆ ಕಣ್ಣಿಡಬೇಕಾದ ವಿಚಾರಗಳು ಹೀಗಿದೆ

ಪೊಲೀಸರಿಗೆ ಸಂಪೂರ್ಣ ಸಹಕಾರ ಕೊಡುವುದು, ಹೋಟೆಲ್ , ರೆಸ್ಟೋರೆಂಟ್ ,ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ,ಸಾಮಾಜಿಕ ಅಂತರ ಕಾಯದಿದ್ದರೆ ದಂಡ ಹಾಗೂ ಕೇಸ್. ಸರ್ಕಾರಿ ಕಚೇರಿಗಳ ಸಿಬ್ಬಂದಿ ಶೇ.50 ರಷ್ಟು ನೋಡಿಕೊಳ್ಳಬೇಕು. ಹೋಟೆಲ್ ಪಾರ್ಸೆಲ್ ಮೇಲೆ ನಿಗಾ ಇಡ ಬೇಕಾಗಿದೆ.

ವಿಕೆಂಡ್ ಕಪ್ಯೂ

ನಿಗದಿತ ಸಮಯದಲ್ಲಿ ಅಗತ್ಯ ವಸ್ತು ಕೊರೋನಾ ನಿಯಮದಂತೆ ಎಲ್ಲಾ ಸಿಗುವಂತೆ ಮಾಡುವುದು. ಪೊಲೀಸರ ಜೊತೆಗೆ ಕೋ ಆರ್ಡಿನೇಷನ್ ಇಟ್ಟುಕೊಳ್ಳುವುದು. ಅವರಿಗೆ ಸೂಕ್ತ ರೀತಿಯಲ್ಲಿ ಸಹಕಾರ ನೀಡುವುದು.

ಮಾರುಕಟ್ಟೆ ಬಗ್ಗೆ ಮಹತ್ವ ತೀರ್ಮಾನ

ಏ. 23 ರಂದು ವಿಕೇಂದ್ರೀಕರಣ ಆಗಲಿದೆ. ನಗರದ ವ್ಯಾಪಾರಿಗಳು ಸಮಯ ಕೇಳಿದ್ದಾರೆ. ಈ ವರ್ಷ ಎಲ್ಲ ಭಾಗಗಳ ಅಧಿಕಾರಿಗಳ ಜತೆ ಚರ್ಚೆ ಮಾಡಿ ಮಾರುಕಟ್ಟೆ ವಿಕೇಂದ್ರಿಕರಣ ಆಗಲಿದೆ. ನಗರದ 8 ವಲಯಗಳಲ್ಲಿ ಮಾರುಕಟ್ಡೆ ವಿಕೇಂದ್ರಿಕರಣ. ಸಾರ್ವಜನಿಕ ಮೈದಾನಗಳಲ್ಲಿ ಮಾರುಕಟ್ಡೆಗೆ ಅವಕಾಶ. ಈ ಕುರಿತು ಸಭೆ ಮಾಡಿ ಹೇಗೆ ಎಂದೆಲ್ಲಾ ತೀರ್ಮಾನ.

ಚಿತಾಗರಾದ ಮುಂದೆ ಆ್ಯಂಬುಲೆನ್ಸ್ ಕ್ಯೂ ವಿಚಾರ. ಚಿತಾಗಾರಗಳ ಮೇಲೆ ಬಾರಿ ಒತ್ತಡ ಇದೆ. ಪಾಲಿಕೆ ವ್ಯಾಪ್ತಿಗೆ ಬರುವ ಚಿತಾಗಾರಕ್ಕೆ ಹೊರವಲಯಗಳಿಂದಲೂ ಮೃತ ದೇಹಗಳು ಬರ್ತಿದೆ. ಹೀಗಾಗಿ ಪಾಲಿಕೆ ವ್ಯಾಪ್ತಿಯ ಚಿತಾಗಾರದ ಮುಂದೆ ಕ್ಯೂ ಕಾಣ್ತಿದೆ. ನಗರದ ಹೊರವಲಯಗಳ ಶವ ಅಲ್ಲೇ ವಿಲೇವಾರಿ ಮಾಡಬೇಕು. ಸತ್ಯ ಒಪ್ಪಿದ ಪಾಲಿಕೆ ಚೀಪ್ ಕಮೀಷನರ್ ಗೌರವ್ ಗುಪ್ತಾ.ನಮ್ಮ ಗಮನ ಹೆಚ್ಚು ಸೆಳೆಯುತ್ತಿದೆ. ಸ್ಮಶಾನದ ಮೇಲೆ ಏಕಾಏಕಿ ಒತ್ತಡ ಇದೆ. ಬಿಬಿಎಂಪಿ ವತಿಯಿಂದ ಹೊರವಲಯದವರೆಗೂ ಮಾಹಿತಿ ನೀಡಲಾಗುತ್ತದೆ

 

ನಗರದಲ್ಲಿ ಬೆಡ್ ವ್ಯವಸ್ಥೆ ಬಗ್ಗೆ

ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಸ್ಪಷನೆ. ನಗರದಲ್ಲಿ ಬೆಡ್ ಗಳ ಕೊರತೆ ಇಲ್ಲ. ಆದ್ರೆ ಐಸಿಯೂ ಬೆಡ್ ಗಳು ಕೊರತೆ ಇದೆ. ಈ ಬಗ್ಗೆ ಸರ್ಕಾರದೊಂದಿಗೆ ಚರ್ಚೆಗಳು ಆಗಿವೆ. ಆದಷ್ಟು ಬೇಗ ಸೂಕ್ತ ವ್ಯವಸ್ಥೆ ಸರ್ಕಾರ ಮಾಡಲಿದೆ. ನಗರದಲ್ಲಿ ಇಗಾಗಲೇ 12 ಕಡೆ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ.  ಅವುಗಳಲ್ಲಿ 10 ಕೋವಿಡ್ ಕೇರ್ ಸೆಂಟರ್ ಗಳು ಸಿದ್ಧವಾಗಿವೆ. ಕಳೆದ ವರ್ಷದಂತೆ ಹೋಲಿಕೆ ಮಾಡುವುದು ಸರಿಯಲ್ಲ. ಐಸಿಯು ಬೆಡ್ ಕೊರತೆ ಇದೆ. ಐಸಿಯು ಬೆಡ್ ಇಲ್ಲ ನಮ್ಮ ಬಳಿ ಖಾಲಿಯಾಗಿದೆ.

ಖಾಸಗೀ ಸಂಸ್ಥೆಯಿಂದ ಬೆಡ್ ಪಡೆಯುವ ವಿಚಾರ

ಸುವರ್ಣ ಸುರಕ್ಷಾ ವತಿಯಿಂದ 7 ಸಾವಿರ ಬೆಡ್ ಪಡೆಯಲಾಗಿದೆ. 5,600 ಬೆಡ್ ಗಳು ಸಿಕ್ಕಿದೆ. ಇದರ ಸಂಖ್ಯೆ ಹೆಚ್ಚಳ ಮಾಡಬೇಕಾಗಿದೆ.ಸರ್ಕಾರಕ್ಕೆ ಗಮನಕ್ಕೆ ತಂದಿದೆ. ಇವತ್ತಿಂದ ಬೆಡ್ ನೀಡದವರಿಗೆ ನೊಟಿಸ್ , ಅಗತ್ಯ ಇರುವ ಕಡೆ
ಓಪಿಡಿ ಕ್ಲೋಸ್

ಲಕ್ಷಣಗಳು ಇಲ್ಲದ ಸೋಂಕಿತರು ಮನೆಯಲ್ಲೇ ಇರಿ. ಜನರು ಪಾಸಿಟಿವ್ ಆದ ತಕ್ಷಣ ದೃತಿಗೆಡುವುದು ಬೇಡ. ಲಕ್ಷಣಗಳು ಏನು ಇಲ್ಲದಿದ್ದರೆ ಮನೆಯಲ್ಲಿ ಇದ್ದು ಗುಣಮುಖರಾಗಿ. ಬೆಡ್ ಬೇಕು ಬೆಡ್ ಬೇಕು ಎನ್ನ ಬೇಡಿ. ಅಗತ್ಯ ಇರುವವರಿಗೆ ಬೆಡ್ ಒದಗಿಸಲು ಸಹಕರಿಸಿ. ಅಧಿಕಾರಿ ,ಡಾಕ್ಟರ್ ಗೆ ಕೊರೋನಾ ಬಂದಿದೆ, ನಾವುಗಳು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಿವಿ. ಸ್ಯಾರಿ ,ಕೋರ್ಮಾಬಿಟ್ ಪೇಷಂಟ್‌ಗೆ ಬೆಡ್ ಕೊಡಲಾಗುತ್ತಿದೆ

 

ಸಾವಿನ ಅಂಕಿ ಅಂಶ ಮುಚ್ಚಿಡಲಾಗ್ತಿದೆ ಆರೋಪ ವಿಚಾರ

ಡೆತ್ ಕೌಂಟ್ ಡಿಕ್ಲರೇಷನ್ ಹೈಡಿಂಗ್ ಆರೋಪ‌ ವಿಚಾರ. ಆಸ್ಪತ್ರೆ ಸರ್ಟಿಫಿಕೇಟ್ ಆಧಾರದಲ್ಲಿ ಡಿಕ್ಲೇರ್ ಮಾಡ್ತಾ ಇದ್ದಿವಿ.  ಅಂಕಿ ಅಂಶ ತಪ್ಪು ಇರಲ್ಲ. ಆಸ್ಪತ್ರೆ , ಶವಗಾರ ಎರಡನ್ನು ಹೋಲಿಕೆ ಮಾಡಲಾಗುತ್ತದೆ. ಈ ಆರೋಪ ಸತ್ಯಕ್ಕೆ ದೂರವಾದ ಮಾತು.

ರಾಜ್ಯ ಸರ್ಕಾರದಿಂದ ಸಮಗ್ರ ಮಾಹಿತಿ ನೀಡಿದೆ. ಎಲ್ಲ ಕಡೆಯಿಂದ ಮಾಹಿತಿ ಸಿಕ್ಕಿದೆ. ಕಾರ್ಯಚರಣೆಗೆ ಪಾಲಿಕೆ ಸಜ್ಜಾಗಿದೆ

 

ಸೋಂಕಿತರಿಗೆ CCC ಒದಗಿಸಿದ ವಿಚಾರ

ಕೋವಿಡ್ ಕೇರ್ 12 ಕಡೆಯಲ್ಲಿ 10 ಕಡೆ ಈಗಷ್ಟೇ ಆರಂಭ ಆಗಬೇಕಾಗಿದೆ. ಈಗ ಸಿದ್ಧವಾಗಿ ಕೂಡಲೇ ಕೆಲಸಕ್ಕೆ ಬರಲಿದೆ. ಕಳೆದ‌ ವರ್ಷದಂತೆ ಈ ವರ್ಷ ಹೋಲಿಕೆ ಮಾಡುವುದು ಸರಿಯಲ್ಲ. ಸಣ್ಣ ಸಣ್ಣ ಕೋವಿಡ್ ಕೇರ್ ಸೆಂಟರ್ ಮಾತ್ರ ಲಭ್ಯ ಇದೆ. ಮೂರ್ನಾಲ್ಕು ದಿನಗಳ ಹಿಂದೆ ಹೊಸ 10 ಕೇರ್ ಸೆಂಟರ್ ತೆರಯಲಾಗಿದೆ. ನಾಳೆ ಅಥವಾ ನಾಡಿದ್ದು ಅವೆಲ್ಲವೂ ಅಗತ್ಯ ಇರುವವರಿಗೆ ಸಿಗಲಿದೆ.

 

BU ನಂಬರ್ ಜನರೇಟ್ ಆಗದ ವಿಚಾರ

ಬಿಯು ನಂಬರ್ ತಾಂತ್ರಿಕ ತೊಂದರೆ ಆಗ್ತಾ ಇತ್ತು. ನಾಲ್ಕು ದಿನಗಳ ಹಿಂದೆ ತಾಂತ್ರಿ ಸಮಸ್ಯೆ ಎದುರಾಗಿತ್ತು.ಈಗ ಈ ತಾಂತ್ರಿಕ ಸಮಸ್ಯೆ ಬಗೆಹರಿಸಲಾಗಿದೆ. ಬಿಯು ನಂಬರ್ ಜನರೆಟ್ ಆಗ್ತಾ ಇದೆ.ಎಲ್ಲವನ್ನು ನಮ್ಮ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ನಿಭಾಯಿಸುತ್ತಿದ್ದಾರೆ.

 

ಆ್ಯಂಬುಲೆನ್ಸ್ ಡ್ರೈವರ್ ಗಳ ಗೋಳು ವಿಚಾರ

ಕೋವಿಡ್ ಪ್ರೋಟೋಕಾಲ್ ಅನುಸಾರ ಎಲ್ಲರೂ ಕೆಲಸ ಮಾಡಬೇಕು. ಆ್ಯಂಬುಲೆನ್ಸ್ ಚಾಲಕರ ಬಗ್ಗೆ ಬಿಬಿಎಂಪಿ ಕಾಳಜಿ ವಹಿಸುತ್ತಿದೆ. ಎಲ್ಲರಿಗೂ ಸೂಕ್ತ ರೀತಿಯಲ್ಲಿ ಪ್ರತಿಫಲ ಸಿಗಲಿದೆ. ಆ್ಯಂಬುಲೆನ್ಸ್ ಡ್ರೈವರ್ ಗಳು ಪಿಪಿಇ ಕಿಟ್ ಬಳಸ್ತಿಲ್ಲ ಎಂಬ ಕಂಪ್ಲೈಂಟ್ ಬಂದಿದೆ. ಅದರ ಬಗ್ಗೆ ಅಧಿಕಾರಿಗಳ ಜೊತೆ ಮಾತನಾಡಿ ಬಿಗಿ ಕ್ರಮ ಕೈಗೊಳ್ಳಲಾಗುವುದು.

Spread the love
Leave A Reply

Your email address will not be published.

Flash News