ಕೊವಿಡ್ ಇಲ್ಲದ ರೋಗಿಗಳ ಚಿಕಿತ್ಸೆಗೆ ಹೊಸ ವ್ಯವಸ್ಥೆ, ಆಕ್ಸಿಜನ್​ಗೆ ಕಾಲ್​ಸೆಂಟರ್: ಡಾ.ಕೆ.ಸುಧಾಕರ್

0

ಬೆಂಗಳೂರು: ಕರ್ನಾಟಕದಲ್ಲಿ ಆರೋಗ್ಯ ವ್ಯವಸ್ಥೆಯ ಮೊದಲ ಆದ್ಯತೆ ಕೊವಿಡ್-19 ರೋಗಿಗಳಿಗೆ ಇದೆ. ಕೊರೊನಾ ಸೋಂಕು ಇಲ್ಲದ ರೋಗಿಗಳನ್ನು ಮುಂದಿನ ದಿನಗಳಲ್ಲಿ 30 ಬೆಡ್​ಗಳಿಗಿಂತ ಕಡಿಮೆ ಇರುವ ನರ್ಸಿಂಗ್ ಹೋಂಗಳಿಗೆ ರವಾನೆ ಮಾಡಲಾಗುತ್ತದೆ. ಯಾವುದೇ ಕಾರಣಕ್ಕೂ ಕೂಡ ಸಣ್ಣ ಸಮಸ್ಯೆ ಕೂಡ ಆಗಬಾರದೆಂದು ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತಿದೆ. ಅಗತ್ಯ ಇರುವವರು ಕಾಲ್​ಸೆಂಟರ್​ಗೆ (ಸಂಖ್ಯೆ 89517 55722) ಕರೆ ಮಾಡಿದರೆ ನೆರವು ನೀಡಲಾಗುವುದು. ಆಕ್ಸಿಜನ್ ಎಲ್ಲಿಯೇ ಬೇಕಾದರೂ ಈ ಸಂಖ್ಯೆಗೆ ಫೋನ್ ಮಾಡಿದರೆ ಸರಬರಾಜು ಮಾಡುತ್ತಾರೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ಯಾವ ರಾಜ್ಯಕ್ಕೆ ಎಷ್ಟು ಆಮ್ಲಜನಕ ಬೇಕು ಎಂಬುದನ್ನು ಕೇಂದ್ರ ಸರ್ಕಾರ ನಿಗದಿಪಡಿಸುತ್ತದೆ. ಕೇಂದ್ರ ನಮಗೆ 300 ಟನ್ ಫಿಕ್ಸ್ ಮಾಡಿದೆ. ಮುಂದಿನ ದಿನಗಳಲ್ಲಿ ನಮಗೆ 1500 ಟನ್ ಬೇಕಾಗಬಹುದು. ಈ ಪ್ರಮಾಣದ ಆಮ್ಲಜನಕ ಪೂರೈಸುವಂತೆ ಕೇಂದ್ರ ಆರೋಗ್ಯ ಮತ್ತು ಕೈಗಾರಿಕಾ ಸಚಿವರನ್ನು ವಿನಂತಿಸಿದ್ದೇನೆ. ರೆಮ್​ಡೆಸಿವಿರ್ ಔಷಧಿಯ ಪೂರೈಕೆಯನ್ನೂ ಹೆಚ್ಚಿಸುವಂತೆ ಕೋರಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.
ಬೆಂಗಳೂರಿನ ಖಾಸಗಿ ವೈದ್ಯಕೀಯ ಕಾಲೇಜುಗಳು ಈವರೆಗೆ 4000 ಬೆಡ್​ಗಳನ್ನು ಕೊವಿಡ್ ಚಿಕಿತ್ಸೆಗೆ ನೀಡಿವೆ. ಸರ್ಕಾರಿ ಮೆಡಿಕಲ್ ಕಾಲೇಜ್​ಗಳಲ್ಲಿ 1000, ಸರ್ಕಾರಿ ಆಸ್ಪತ್ರೆಯಲ್ಲಿ 1400 ಬೆಡ್​ಗಳು ಲಭ್ಯವಿವೆ ಎಂದು ಹೇಳಿದ್ದಾರೆ. ಐಸಿಯು ಬೆಡ್​ಗಳ ಸಂಖ್ಯೆ ಹೆಚ್ಚಿಸುವುದೇ ಬೆಂಗಳೂರಿನಲ್ಲಿ ನಮಗಿರುವ ದೊಡ್ಡ ಸವಾಲು. 2000 ಮೇಕ್​ಶಿಫ್ಟ್ ಐಸಿಯು ಬೆಡ್​ಗಳು, ಮಾಡ್ಯುಲರ್ ಐಸಿಯುಗಳನ್ನು ಇನ್ನು 15 ದಿನಗಳಲ್ಲಿ ಸಿದ್ದಪಡಿಸ್ತೇವೆ. ಬೆಂಗಳೂರಿನ 8 ಕಡೆಗಳಲ್ಲಿ ಈ ಮಾಡ್ಯುಲರ್ ಐಸಿಯು ಅಳವಡಿಸುತ್ತೇವೆ. ಕಟ್ಟುನಿಟ್ಟಿನ ಕ್ರಮಗಳನ್ನು ಜನರು ಪಾಲಿಸಿದರೆ ನಾಗಾಲೋಟ ಕಡಿಮೆಯಾಗುತ್ತದೆ ಎಂದು ಅವರು ಹೇಳಿದರು. ಕೊವಿಡ್​ನಿಂದ ಮೃತರ ಅಂತ್ಯಕ್ರಿಯೆ ಸಮಸ್ಯೆ ಹಿನ್ನೆಲೆಯಲ್ಲಿ ಬೆಂಗಳೂರಿನ 8 ವಲಯಗಳಲ್ಲಿ ಅಂತ್ಯಕ್ರಿಯೆಗೆ ಕೆಲ ಜಮೀನುಗಳನ್ನು ಕಂದಾಯ ಇಲಾಖೆ ಗುರುತಿಸಿದೆ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿಕೆ ನೀಡಿದ್ದಾರೆ.

Spread the love
Leave A Reply

Your email address will not be published.

Flash News