ದೇಶದಲ್ಲಿ ಒಂದೇ ದಿನ 2,263 ಸಾವು, 3.32 ಲಕ್ಷ ಕೊವಿಡ್ ಪ್ರಕರಣ ದಾಖಲು

0

ದೆಹಲಿ: ಕೊವಿಡ್ ಎರಡನೇ ಅಲೆಯ ಪರಿಣಾಮ ಭಾರತದಲ್ಲಿ ಸತತ ಎರಡನೇ ದಿನ ಕೊವಿಡ್ ಪ್ರಕರಣಗಳ ಸಂಖ್ಯೆ 3 ಲಕ್ಷ ದಾಟಿದೆ. ಕಳೆದ 24ಗಂಟೆಗಳಲ್ಲಿ 3,32,730 ಸೋಂಕು ಪ್ರಕರಣಗಳು ದಾಖಲಾಗಿದ್ದು 2,263 ಮಂದಿ ಸಾವಿಗೀಡಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ವಿಶ್ವದಲ್ಲಿ ಅತೀ ಹೆಚ್ಚು ಕೊವಿಡ್ ರೋಗಿಗಳಿರುವ ದೇಶಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ ಒಟ್ಟು ವರದಿಯಾಗಿರುವ ಕೊವಿಡ್ ಪ್ರಕರಣಗಳ ಸಂಖ್ಯೆ 16,263,695. ಈವರೆಗೆ ಕೊವಿಡ್​ನಿಂದ ಮೃತಪಟ್ಟವರ ಸಂಖ್ಯೆ 1,86,920 ಆಗಿದೆ. ಕೊವಿಡ್ ಎರಡನೇ ಅಲೆ ಗಂಭೀರ ಸ್ವರೂಪದಿಂದ ಕೂಡಿದ್ದು ಅಧಿಕ ಸಂಖ್ಯೆಯಲ್ಲಿ ಜನರು ಸೋಂಕಿಗೊಳಗಾಗುತ್ತಿದ್ದಾರೆ. ಇದು ಭಾರತದ ಆರೋಗ್ಯ ವ್ಯವಸ್ಥೆ ಮೇಲೆ ಹೆಚ್ಚಿನ ಒತ್ತಡ ಸೃಷ್ಟಿಸಿದೆ. ಕಳೆದ ಕೆಲವು ವಾರಗಳಿಂದ ಭಾರತದಲ್ಲಿ ಕೊರೊನಾ ಸೋಂಕು ಮತ್ತು ಸಾವಿನ ಸಂಖ್ಯೆ ದಾಖಲೆ ಸೃಷ್ಟಿಸುತ್ತಿದೆ. ಕೊರೊನಾವೈರಸ್ ವ್ಯಾಪಕವಾಗಿ ಹರಡುವುದನ್ನು ರಾಜ್ಯ ಸರ್ಕಾರಗಳು ವಿವಿಧ ಕ್ರಮಗಳನ್ನು ಕೈಗೊಂಡಿದ್ದು,ದೇಶದಾದ್ಯಂತ ಮತ್ತೊಮ್ಮೆ ಲಾಕ್ ಡೌನ್ ಉಂಟಾಗಬಹುದೇ ಎಂಬ ಆತಂಕ ಜನರಿಗಿದೆ. ಗುರುವಾರ ಭಾರತದಲ್ಲಿ 24 ಗಂಟೆಗಳ ಅವಧಿಯಲ್ಲಿ 314,835 ಹೊಸ ಪ್ರಕರಣಗಳನ್ನು ದಾಖಲಿಸಿದೆ. ದೆಹಲಿಯಲ್ಲಿ ಮಾತ್ರ ಆಸ್ಪತ್ರೆಗಳಲ್ಲಿ ವೈದ್ಯಕೀಯ ಆಮ್ಲಜನಕ ಪೂರೈಕೆಯಿಲ್ಲದೆ, ಗುರುವಾರ ದಾಖಲಾದ ಪ್ರಕರಣಗಳು 26,000 ಕ್ಕಿಂತಲೂ ಹೆಚ್ಚು. ರಾಷ್ಟ್ರ ರಾಜಧಾನಿಯಲ್ಲಿ ಸಾವಿಗೀಡಾದವರ ಸಂಖ್ಯೆ 306. ಶವ ಸಂಸ್ಕಾರಕ್ಕಾಗಿ ಜನರು ಪರದಾಡುವ ಸ್ಥಿತಿ ಇಲ್ಲಿ ಕಂಡುಬಂದಿದೆ. ದೇಶದಲ್ಲಿ24,28,616 ಸಕ್ರಿಯ ಪ್ರಕರಣಗಳಿವೆ. ಗುರುವಾರ 1,93,279 ಮಂದಿ ಚೇತರಿಸಿಕೊಂಡಿದ್ದು,ಈವರೆಗೆ ಚೇತರಿಸಿಕೊಂಡವರ ಸಂಖ್ಯೆ 1,36,48,159 ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

Spread the love
Leave A Reply

Your email address will not be published.

Flash News