“ಡಾ.ರಾಜ್” 92 ನೇ ಹುಟ್ಟು ಹಬ್ಬ.‌

0

ಕನ್ನಡ ಚಿತ್ರರಂಗದ ಮೇರು ನಟ ಡಾ.ರಾಜ್ ಕುಮಾರ್ ಅವರಿಗೆ ಇಂದು 92 ನೇ ಹುಟ್ಟು ಹಬ್ಬ.‌ ಬರೊಬ್ಬರಿ 5 ದಶಕಗಳ ಕಾಲ ಕನ್ನಡ ಚಿತ್ರರಂಗದ ಸಾರ್ವಭೌಮನಾಗಿ ಮೆರೆದ ನಟ. 1954 ರಲ್ಲಿ ‘ಬೇಡರ ಕಣ್ಣಪ್ಪ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಮಾಡಿದ ಮುತ್ತುರಾಜ್ ಮುಂದೆ ನಟಸಾರ್ವಭೌಮನಾಗಿ, ರಸಿಕರ ರಾಜನಾಗಿ, ಕನ್ನಡದ ಕಣ್ಮಣಿಯಾಗಿ, ಗಾನಗಂಧರ್ವನಾಗಿ, ವರನಟನಾಗಿ, ಅಭಿಮಾನಿಗಳ ಮನದಲ್ಲಿ ನೆಲೆಯೂರಿದರು. 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದರೂ ಕಿಂಚಿತ್ತೂ ಅಹಃ ಇಲ್ಲದ ಸರಳ ಜೀವಿ. ಡಾ.ರಾಜ್ ರ ಅನೇಕ ಚಿತ್ರಗಳು ಅದೆಷ್ಟೋ ಜನರಿಗೆ ಸ್ಪೂರ್ತಿ. ಇವರ ‘ಬಂಗಾರದ ಮುನುಷ್ಯ’ ಚಿತ್ರ  ನೋಡಿ ಎಷ್ಟೋ ಜನ ತಮ್ಮ ತಮ್ಮ ಹಳ್ಳಿಗಳಿಗೆ ಹೋಗಿ ವ್ಯವಸಾಯ ಮಾಡಿದ್ದುಂಟು. ‘ಜೀವನ ಚೈತ್ರ’ ಸಿನಿಮಾದಿಂದ ಜನ ಸಾರಾಯಿ ಕಾಯಿಸೋದನ್ನೇ ನಿಲ್ಲಿಸಿ ಬಿಟ್ಟಿದ್ದರು. ಹೀಗೆ ಡಾ.ರಾಜ್ ಕುಮಾರ್ ಅದೆಷ್ಟೋ ಜನಕ್ಕೆ ರೋಲ್ ಮಾಡೆಲ್ ಆಗಿದ್ದರು. ಕನ್ನಡ ಚಿತ್ರರಂಗಕ್ಕೆ ಡಾ.ರಾಜ್ ಕೊಡುಗೆ ಅಪಾರ. 2006 ರ ಏಪ್ರಿಲ್ 12 ರಂದು ಡಾ.ರಾಜ್ ಕುಮಾರ್ ರವರ ಕೋಟ್ಯಾಂತರ ಅಭಿಮಾನಿಗಳಿಗೆ ಬರಸಿಡಿಲು ಬಡಿದಿತ್ತು. ಡಾ.ರಾಜ್ ಇಹಲೋಕ ತ್ಯಜಿಸಿದರು ಎಂಬ ಸುದ್ದಿ ಕೇಳಿ ಅವರ ಎಷ್ಟೋ ಅಭಿಮಾನಿಗಳಿಗೆ ಆಘಾತವಾಗಿತ್ತು. ಡಾ.ರಾಜ್ ಭೌತಿಕವಾಗಿ ನಮ್ಮನ್ನೆಲ್ಲ ಅಗಲಿದ್ದಾರೆ ಅಷ್ಟೇ. ಅವರ ಸಿನಿಮಾ, ಅವರ ಗಾಯನ, ಅಪಾರ ಜೀವನ ಮೌಲ್ಯಗಳ ಮೂಲಕ ಇಂದಿಗೂ ಒಬ್ಬ ಮಾರ್ಗದರ್ಶಕನಾಗಿ ಅಭಿಮಾನಿಗಳ ಹೃದಯದಲ್ಲಿ ನೆಲೆಸಿದ್ದಾರೆ, ಕನ್ನಡ ಚಿತ್ರರಂಗದ ಈ ಧ್ರುವ ತಾರೆ. ಡಾ.ರಾಜ್ ಹುಟ್ಟು ಹಬ್ಬದ ಪ್ರಯುಕ್ತ ಇಂದು ಕಂಠೀರವ ಸ್ಟುಡಿಯೋದಲ್ಲಿ ರಾಜ್ ಕುಟುಂಬ , ಕೊರೆನಾ ಹಿನ್ನಲೆ ಸರಳ ಪೂಜೆ ಸಲ್ಲಿಸಲಿದೆ. ಪ್ರತಿಸಲ ಅಭಿಮಾನಿಗಳು ಡಾ.ರಾಜ್ ಸಮಾಧಿಗೆ ಪೂಜೆ ಸಲ್ಲಿಸಲು ಬೇರೆ ಬೇರೆ ಊರುಗಳಿಂದ ಬರುತ್ತಿದರು. ಆದರೆ ಈ ಸಲ ಹೆಚ್ಚಿನ ಸಂಖ್ಯೆಯಲ್ಲಿ ಫ್ಯಾನ್ಸ್ ಸೇರಲು ಅನುಮತಿ ಇರುವುದಿಲ್ಲ.

Spread the love
Leave A Reply

Your email address will not be published.

Flash News